12:02 AM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರು: ಕೌಶಲ್ಯಾಭಿವೃದ್ಧಿ ಕುರಿತು 2 ದಿನಗಳ ವ್ಯಕ್ತಿ ಮಾರ್ಗದರ್ಶನ ಕಾರ್ಯಾಗಾರ

09/03/2023, 14:49

ಚಿತ್ರ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com):ಯುಎನ್ ಡಿಪಿ-ಪ್ರಾಜೆಕ್ಟ್ ಕೋಡ್ ಉನ್ನತಿ, ಎಸ್.ಎ.ಸಿ ಮತ್ತು ಜಿಲ್ಲಾ ಕೌಶಲಾಭಿವೃದ್ಧಿ ಇಲಾಖೆ ದಕ್ಷಿಣ ಕನ್ನಡ, ಮತ್ತು ಸೆಡ್ ಹೆಲ್ಡ್ ಹೈ ಸಂಸ್ಥೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾಲೇಜು ಗಳ ಎನ್.ಎಸ್.ಎಸ್. ಮತ್ತು ಪ್ಲೇಸ್ಮೆಂಟ್ ಅಧಿಕಾರಿಗಳಿಗೆ ಮಂಗಳೂರಿನ ಶ್ರೀನಿವಾಸ ವರ್ದ ಸ್ಯಾಫ್ರಾನ್ ಹೋಟೆಲ್ ಹಾಲ್ ನಲ್ಲಿ ಎರಡು ದಿನಗಳ ವ್ಯಕ್ತಿ ಮಾರ್ಗದರ್ಶನ ಕಾರ್ಯಾಗಾರ ಇತ್ತೀಚಿಗೆ ಜರುಗಿತು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ,ಎಸ್.ಜೆ. ಹೇಮಚಂದ್ರ,ವಿದ್ಯಾರ್ಥಿಗಳು ಮೃದು ಕೌಶಲ್ಯಗಳನ್ನು ಬೆಳಸಿಕೊಂಡರೆ ಮಾತ್ರ ಉದ್ಯೋಗಿಗಳಾಗಲು ಸಾಧ್ಯ. ಪ್ರಸ್ತುತ ಬದಲಾಗುತ್ತಿರುವ ಔದ್ಯೋಗಿಕ ಪರಿಸರದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉನ್ನತ ಉದ್ಯೋಗ ಪಡೆಯಲು ಬೇಕಾಗುವ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ.ಈ ನಿಟ್ಟಿನಲ್ಲಿ ಪ್ರಸ್ತುತ ಕೈಗಾರಿಕೆಗಳ ಅಗತ್ಯತೆಗಳಿಗೆ ತಕ್ಕಂತೆ ಕೌಶಲ್ಯ ಗಳು ಮತ್ತು 11ನೇ ಶತಮಾನದ ಕೌಶಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಮೂಲಕ ಅರಿವು ಮೂಡಿಸಬೇಕಿದೆ. 21 ನೇ ಶತಮಾನದ ಕೌಶಲ್ಯಗಳು ಪಠ್ಯತರ ಚಟುವಟಿಕೆಗಳಾಗಿದ್ದು, ಪ್ರಾಜೆಕ್ಟ್ ಕೋಡ್ ಉನ್ನತಿ ಮೂಲಕ ಈ ಕೌಶಲ್ಯಗಳನ್ನು ಯು.ಎನ್.ಡಿ.ಪಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನಕೆ.ಎ.ಮಾತನಾಡಿ,
ಉದ್ಯೋಗ,ಉದ್ಯಮಕ್ಕೆ ಪೂರಕವಾದ ಕೌಶಲ್ಯದ ಮಾಹಿತಿ
ರಾಷ್ಟ್ರೀಯ ಸೇವಾಯೋಜನೆ ಮುಖಂತರ ಎಲ್ಲಾ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲು ಸಾಧ್ಯ.
ಎರಡು ದಿನಗಳ ವ್ಯಕ್ತಿ ಮಾರ್ಗ ದರ್ಶದ ಕಾರ್ಯಾಗಾರಕ್ಕೆ ಶುಭಕೋರಿದರು.

ಯು.ಎನ್.ಡಿ. ಪಿ. ರಾಜ್ಯ ಮುಖ್ಯಸ್ಥ ಗೋವಿಂದರಾಜ್ ಜಯಚಂದ್ರ‌ನ್ ಮಾತನಾಡಿ, ವಿಶ್ವಸಂಸ್ಥೆಯ ರಾಜ್ಯದಲ್ಲಿ ಹಲವಾರು ಯೋಜನೆಗಳ ಮೂಲಕ ರಾಜ್ಯದ ಸುಗಮ ಅಭಿವೃದ್ಧಿಗೆ ಶ್ರಮಿಸುತ್ತಿದೆ, ಅವುಗಳಲ್ಲಿ ಪ್ರಾಜೆಕ್ಟ್ ಕೋಡ್ ಉನ್ನತಿ ವಿದ್ಯಾರ್ಥಿಗಳು ಮತ್ತು ಮಹಿಳೆಯರನ್ನು ಉದ್ಯೋಗಿಗಳು ಹಾಗೂ ಸ್ವ-ಉದ್ಯಮಿಗಳಿಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಪ್ರಸ್ತುತ ಈ ಕಾರ್ಯಾಗಾರದಲ್ಲಿ ತಮ್ಮ ಸಲಹೆಗಳನ್ನು ಪಡೆದು ಈ ಯೋಜನೆಯನ್ನು ಉನ್ನತಿಗೊಳಿಸುವ ಉದ್ದೇಶ ಹೊಂದಿದೆ ಎಂದರು. ಕಾರ್ಯಕ್ರಮದ ಮುಂದಿನ ರೂಪರೇಷೆಗಳನ್ನು ತಯಾರಿಸಲು ಎಲ್ಲಾ ಕಾಲೇಜಿನ ಪ್ರತಿನಿಧಿಗಳು ತಮ್ಮ ಅನುಭವ ಮತ್ತು ಸಲಹೆಗಳನ್ನು ಹಂಚಿಕೊಳ್ಳಬೇಕೆಂದು ಶಿಬಿರಾರ್ಥಿ, ಅಧ್ಯಾಪಕರಲ್ಲಿ ಮನವಿ ಮಾಡಿದರು. ಈ ಕಾರ್ಯಗಾರದಲ್ಲಿ ನೀಡುವ ಮಾಹಿತಿ ಮತ್ತು ಸಂಪನ್ಮೂಲಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳಬೇಕೆಂದರು.

ಕಾರ್ಯಾಗಾರದ ಮುಖ್ಯ ಸಂಪನ್ಮೂಲ ವ್ಯಕ್ತಿ ರಮ್ಯ ಮಾತನಾಡಿ, ಈ ಎರಡು ದಿನಗಳ ವಿವಿಧ ಚಟುವಟಿಕೆ ಆಧಾರಿತ ಕಲಿಕಾ ಕಾರ್ಯಾಗಾರದಲ್ಲಿ ಯುವಜನತೆಯ ಸವಾಲುಗಳನ್ನು ಅರಿಯುವ ಮೂಲಕ ವ್ಯಕ್ತಿ ಮಾರ್ಗದರ್ಶನ ಸಮಾಲೋಚನೆಯನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದಾಗಿದೆ. 21ನೇ ಶತಮಾನದ ಕೌಶಲ್ಯಗಳ ಪ್ರಾಮುಖ್ಯತೆ ಮತ್ತು ಆವಶ್ಯಕತೆಗಳನ್ನು ಅರಿತು ವಿದ್ಯಾರ್ಥಿಗಳಲ್ಲಿ ತುಂಬಬೇಕು. ಎಂಬುದರ ಬಗ್ಗೆ ಚರ್ಚಿಸ ಲಾಗುವುದು ಎಂದರು.



ಹೆಡ್ ಹೆಲ್ಡ್ ಹೈ ಸಂಸ್ಥೆಯ ರಾಘವೇಂದ್ರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಯು.ಎನ್.ಬಿ.ಸಿ ಪ್ರಾಜೆಕ್ಟ್, ಕೋಡ್ ಉನ್ನತಿ, ಜಿಲ್ಲಾ ಸಂಯೋಜಕ ಶಿವಕುಮಾರ ಕೆ.ಎಂ. ಸಿಬ್ಬಂದಿಗಳಾದ, ಲೀಡಿಯಾ,ದೀಕ್ಷ, ಕೀರ್ತನ್ ಹೆಡ್ ಹೆಲ್ಡ್ ಹೈ ಸಂಸ್ಥೆಯ ಶ್ರೀಕಾಂತ್,ಸುರಕ್ಷೆ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು