6:12 PM Monday8 - September 2025
ಬ್ರೇಕಿಂಗ್ ನ್ಯೂಸ್
ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ… Kodagu | ಚೋರರಿದ್ದಾರೆ ಎಚ್ಚರಿಕೆ: ಕುಶಾಲನಗರ; ಹೆಚ್ಚುತ್ತಿರುವ ಶ್ರೀಗಂಧ ಮರಗಳ ಕಳ್ಳತನ ಹೃದಯಘಾತ: ಕಾರಿನಲ್ಲೇ ಉಸಿರು ನಿಲ್ಲಿಸಿದ ಪೊನ್ನಂಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಯೋಜನಾಧಿಕಾರಿ Kodagu | ಸರಣಿ ಅಪಘಾತ: ರಸ್ತೆ ಮಧ್ಯೆ ಅಡ್ಡ ನಿಂತಿದ್ದ ಟ್ರ್ಯಾಕ್ಟರ್ ಗೆ… ವಿರಾಜಪೇಟೆ ಕೊಡಗು ಗೌಡ ಸಮಾಜಕ್ಕೆ ಸುಳ್ಯದ ಕುರುಂಜಿ ವೆಂಕರಮಣ ಗೌಡ ಕುಟುಂಬದಿಂದ 3.5…

ಇತ್ತೀಚಿನ ಸುದ್ದಿ

ಮಂಗಳೂರು: ಕುಸಿತದ ಭೀತಿಯಲ್ಲಿ ಕೊಡಕ್ಕಲ್‌ ಗುಡ್ಡ ಪ್ರದೇಶ; ಆತಂಕದಲ್ಲಿ 40ಕ್ಕೂ ಹೆಚ್ಚು ಕುಟುಂಬಗಳು

11/09/2024, 17:49

ಮಂಗಳೂರು(reporterkarnataka.com): ಪ್ರಸಕ್ತ ಮುಂಗಾರಿನಲ್ಲಿ ಸಾಕಷ್ಟು ಭೂಕುಸಿತ ಸಂಭವಿಸಿದ್ದು, ಸಾಕಷ್ಟು ಸಾವು- ನೋವು ಘಟಿಸಿವೆ. ಇದೀಗ ಅಂತದ್ದೊಂದು ಅಪಾಯದ ಭೀತಿ ಮಂಗಳೂರಿನಲ್ಲೇ ಎದುರಾಗಿದೆ. ನಗರದ ಹೊರವಲಯದ ಪಡೀಲ್ ಸಮೀಪದ ಕೊಡಕ್ಕಲ್‌ ಎಂಬಲ್ಲಿ ಗುಡ್ಡಕುಸಿತದ ಭೀತಿ ಎದುರಾಗಿ ಸುತ್ತಮುತ್ತಲಿನ ಜನರು ಭಯಭೀತರಾಗಿದ್ದಾರೆ.


ಮಂಗಳೂರಿನ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡೀಲ್‌ನ ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಮೀಪದ ಕೊಡಕ್ಕಲ್‌ ಪ್ರದೇಶ ಇದೆ. ಇಲ್ಲಿ ಗುಡ್ಡ ಕುಸಿಯುವ ಆತಂಕದಲ್ಲಿದ್ದು, ಗುಡ್ಡದ ಮೇಲಿನ ನಿವಾಸಿಗಳು, ಕೆಳಗಿನ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಪಡೀಲ್‌ನ ಕೊಡಕ್ಕಲ್‌ ಎಂಬ ಪ್ರದೇಶದ ಇದಾಗಿದ್ದು, ಗುಡ್ಡದ ಮೇಲೆ ಸುಮಾರು 40ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಇನ್ನು ಗುಡ್ಡದ ಬುಡದಲ್ಲೇ ಅಂಗಡಿ, ಮಳಿಗೆಗಳು ಹಾಗೂ ಮನೆಗಳಿದ್ದು, ಇದೂ ಕೂಡಾ ಅಪಾಯಕ್ಕೆ ಸಿಲುಕಿವೆ. ಈಗಾಗಲೇ ಗುಡ್ಡ ಸ್ವಲ್ಪ ಕುಸಿತ ಉಂಟಾಗಿದ್ದು, ಗುಡ್ಡದ ಅಂಚಿನಲ್ಲಿರೋ ಟಾಯ್ಲೆಟ್‌ ಒಂದು ಆಗಲೋ ಈಗಲೋ ಅನ್ನೋ ಸ್ಥಿತಿಯಲ್ಲಿ ಇದೆ. ಒಮ್ಮೆ ಇಲ್ಲಿ ಗುಡ್ಡ ಕುಸಿತ ಉಂಟಾದ್ರೆ ಭಾರಿ ಪ್ರಮಾಣದ ಅನಾಹುತ ಉಂಟಾಗುವ ಸಾದ್ಯತೆ ಇದೆ. ಮಳೆ ಇನ್ನೂ ದೂರವಾಗಿಲ್ಲದ ಕಾರಣ ಗುಡ್ಡ ಕುಸಿತದ ಆತಂಕ ಕೂಡಾ ದೂರವಾಗಿಲ್ಲ. ಮಳೆಗಾಲವನ್ನು ಆತಂಕದಲ್ಲೇ ಕಳೆದಿದ್ದ ಇಲ್ಲಿನ ನಿವಾಸಿಗಳು ಇದೀಗ ಮಳೆಯ ಭಯ ಕಾಡಲು ಆರಂಭವಾಗಿದೆ. ಇಲ್ಲಿ ಬಹಳ ವರ್ಷಗಳ ಹಿಂದೆ ಅಗೆತ ಮಾಡಲಾಗಿದೆ ಎನ್ನಲಾಗಿದೆ.
ಈ ಬಗ್ಗೆ ಜಿಲ್ಲಾಡಳಿತವ ಎಚ್ಚೆತ್ತು ಯಾವುದೇ ಮುಂಜಾಗ್ರತ ಕ್ರಮವಿಲ್ಲದೆ ಅಕ್ರಮವಾಗಿ ಮಣ್ಣುತೆಗೆದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು