ಇತ್ತೀಚಿನ ಸುದ್ದಿ
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ: ನೃತ್ಯ ರೂಪಕ, ಹಾಡುಗಳು
28/05/2023, 13:40
ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರೋಶನಿ ನಿಲಯದ ವತಿಯಿಂದ ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ ನಡೆಯಿತು.
ರೋಶನಿ ನಿಲಯದ ಅಪರಾಧ ಮತ್ತು ವಿಧಿವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಿ ವಿಚಾರಣಾಧೀನ ಖೈದಿಗಳಿಗೆ ಕಾನೂನು ಅರಿವು ಕುರಿತು ಜಾಗೃತಿ ಮೂಡಿಸಿದರು.
ನೃತ್ಯ, ರೂಪಕ ಹಾಗೂ ಹಾಡುಗಳ ಮೂಲಕ ನಡೆದ ಕಾನೂನು ಅರಿವು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳು ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸಿದರು.
ಜಿಲ್ಲಾ ಕಾರಾಗೃಹದ ಮುಖ್ಯಾಧಿಕಾರಿ ಓಬಳೇಶಪ್ಪ, ಕಾನೂನು ಪ್ರಾಧಿಕಾರದ ವಕೀಲರಾದ ಸೌಮ್ಯ ಹಾಗೂ ರೋಶನಿ ನಿಲಯದ ಅಧ್ಯಾಪಕ ವೃಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.