ಇತ್ತೀಚಿನ ಸುದ್ದಿ
ಮಂಗಳೂರು: ಗೂಡ್ಸ್ ರೈಲಿಗೆ ಸಿಲುಕಿ 17 ಜಾನುವಾರುಗಳ ದಾರುಣ ಸಾವು; ಮೃತದೇಹ ವಿಲೇವಾರಿ ಮಾಡದ ರೈಲ್ವೆ ಇಲಾಖೆ; ಸಾರ್ವಜನಿಕ ಪ್ರತಿಭಟನೆ
15/05/2023, 22:36

ಮಂಗಳೂರು(reporterkarnataka.com):: ಬೈಕಂಪಾಡಿಯ ಅಂಗರಗುಂಡಿಯಲ್ಲಿ ಇಂದು ಮುಂಜಾನೆ ನಡೆದ ಘೋರ ದುರಂತದಲ್ಲಿ ಗೂಡ್ಸ್ ರೈಲಿನಡಿಗೆ ಸಿಲುಕಿ 27 ಜಾನುವಾರುಗಳು ಸಾವನ್ನಪ್ಪಿದ್ದು, ಮೃತ ಜಾನುವಾರುಗಳ ಮೃತದೇಹವನ್ನು ವಿಲೇವಾರಿ ಮಾಡದೆ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ ಹಾಗೂ ರೈಲ್ವೆ ಇಲಾಖೆ ನಿರ್ಲಕ್ಷ್ಯ ವಹಿಸಿದೆ.
ಎಮ್ಮೆ, ದನ ಸೇರಿದಂತೆ ಸಾಲು ಸಾಲು ಜಾನುವಾರುಗಳು ಹಳಿ ಮೇಲೆ ರೈಲಿಗೆ ಅಡ್ಡ ಬಂದ ಪರಿಣಾಮ ಈ ಘೋರ ದುರಂತ ನಡೆದಿದೆ.
ಲೋಕೊ ಪೈಲೆಟ್ ರೈಲಿನ ವೇಗ ನಿಯಂತ್ರಣ ಮಾಡಿ ರೈಲು ಹಳಿ ತಪ್ಪುವ ಅಪಾಯವನ್ನು ತಪ್ಪಿಸಿದ್ದಾರೆ. ಮಹಾ ನಗರಪಾಲಿಕೆ ಬೀಡಾಡಿ ಜಾನುವಾರುಗಳನ್ನು ನಿಯಂತ್ರಿಸದಿದ್ದರೆ ಇನ್ನಷ್ಟು ದುರಂತ ಸಂಭವಿಸಬಹುದು ಎಂದು ಸ್ಥಳೀಯರು ಹೇಳುತ್ತಾರೆ. ವಿಲೇವಾರಿಯಾಗದ ಜಾನುವಾರುಗಳ ಮೃತದೇಹ ಪರಿಸರದಲ್ಲಿ ದುರ್ನಾತ ಬೀರುತ್ತಿದೆ.
ನಗರಪಾಲಿಕೆ, ರೈಲ್ವೆ ಇಲಾಖೆ ನಿರ್ಲಕ್ಷ ವಿರೋಧಿಸಿ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ರೈಲ್ವೆ ಇನ್ಸ್ಪೆಕ್ಟರ್, ಸ್ಥಳೀಯ ಅಧಿಕಾರಿಗೆ ಘೆರಾವ್ ಹಾಕಿದ್ದಾರೆ.