ಇತ್ತೀಚಿನ ಸುದ್ದಿ
ಮಂಗಳೂರು: ದಿನದ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಖಲು; ನದಿಗಳಲ್ಲಿ ನೀರಿನ ಒಳ ಹರಿವು ಸ್ಥಗಿತ
09/03/2023, 15:15
ಅನುಷ್ ಪಂಡಿತ್ ಮಂಗಳೂರು
info.reporterkarnataka@gmail.com
ಕಡಲನಗರಿ ಮಂಗಳೂರಿನಲ್ಲಿ ಬಿಸಿಲಿನ ಝಳ ಹೆಚ್ಚುತ್ತಿತ್ತು, ಇಂದಿನ ಗರಿಷ್ಠ ತಾಪಮಾನ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇತ್ತು.
ಕರಾವಳಿಯಲ್ಲಿ ಬೇಸಿಗೆ ಕಾಲ ಆರಂಭವಾಗಿದ್ದು ತಾಪಮಾನದಲ್ಲಿ ಏರಿಕೆ ಶುರುವಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ, ಕುಮಾರಧಾರ, ಫಲ್ಗುಣಿ, ಪಯಸ್ವಿನಿಯಲ್ಲಿ ನೀರಿನ ಒಳ ಹರಿವು ನಿಂತು ಹೋಗಿದೆ. ಇನ್ನೇನಿದ್ದರೂ ಮಳೆ ಬರುವ ತನಕ ಸಂಗ್ರಹವಾಗಿರುವ ನೀರಿನಲ್ಲೇ ಮಂಗಳೂರು ಸೇರಿದಂತೆ ಪೇಟೆ- ಪಟ್ಟಣಗಳ ಜನರು ಬದುಕಬೇಕಾಗಿದೆ.
ಮಂಗಳೂರಿನಲ್ಲಿ ಗುರುವಾರ ದಿನದ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇತ್ತು. ಮಧ್ಯಾಹ್ನ 2.30ರ ವೇಳೆಗೆ ದಿನದ ಗರಿಷ್ಟ ಉಷ್ಣತೆಯು 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆದರೆ ಮಧ್ಯಾಹ್ನ 3.30ರ ವೇಳಗೆ ತಾಪಮಾನ ಮತ್ತೆ 34 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿತ್ತು.
ಪಶ್ಚಿಮ ಕರಾವಳಿಯಲ್ಲಿ ನೆಲೆಸಿರುವ ಮತ್ತು ಅರಬ್ಬೀ ಸಮುದ್ರವನ್ನು ಸ್ಪರ್ಶಿಸುವ ಮಂಗಳೂರು ಐತಿಹಾಸಿಕವಾಗಿ ಹಡಗು ನಿರ್ಮಾಣ ಕೇಂದ್ರವಾಗಿದೆ. ನವ ಮಂಗಳೂರು ಬಂದರು ಇಲ್ಲಿನ ಪ್ರಮುಖ ವಾಣಿಜ್ಯ ಬಂದರು ಆಗಿದೆ. ಹಳೆ ಬಂದರು ಇಡೀ ಇಡೀ ಜಿಲ್ಲೆಯ ಆರ್ಥಿಕ ಚಟುವಟಿಕೆಯ ಬೆನ್ನೆಲುಬಾಗಿದೆ. ಮಂಗಳೂರು ಇಂದು ಹೊಸ ಮತ್ತು ಹಳೆಯ ಮಿಶ್ರಣವಾಗಿದೆ.














