8:38 PM Monday22 - September 2025
ಬ್ರೇಕಿಂಗ್ ನ್ಯೂಸ್
ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ…

ಇತ್ತೀಚಿನ ಸುದ್ದಿ

ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಚರ್ಚ್ ಗಳಲ್ಲಿ ಬೂದಿ ಬುಧವಾರ ಆಚರಣೆ: ಈಸ್ಟರ್ ವರೆಗೆ ವಿಶೇಷ ಪ್ರಾರ್ಥನೆ

14/02/2024, 17:05

ಮಂಗಳೂರು(reporterkarnataka.com): ಯೇಸು ಕ್ರಿಸ್ತರ 40 ದಿನಗಳ ತಪಸ್ಸು ಕಾಲ(ಕಪ್ಪು ದಿನ)ದ ಆರಂಭದ ಅಂಗವಾಗಿ ಬುಧವಾರ ಮಂಗಳೂರು ಧರ್ಮಪ್ರಾಂತ್ಯದ ಕ್ರೈಸ್ತ ಚರ್ಚ್ ಗಳಲ್ಲಿ ಬೂದಿ ಬುಧವಾರ ಆಚರಣೆ ನಡೆಯಿತು.

ಈ 40 ದಿನಗಳಲ್ಲಿ ಕ್ರೈಸ್ತರು ತ್ಯಾಗ, ಪ್ರಾರ್ಥನೆಯನ್ನು ಮಾಡುತ್ತಾರೆ. ನಗರದ ಉರ್ವ ಚರ್ಚ್‍ನಲ್ಲಿ ಧರ್ಮಗುರು ಫಾ.ಬೆಂಜಮಿನ್ ಪಿಂಟೋ ಅವರು ಭಕ್ತರಿಗೆ ಬೂದಿಯ ಶಿಲುಬೆ ಗುರುತು ಹಾಕುವ ಮೂಲಕ ತಪಸ್ಸು ಕಾಲಕ್ಕೆ ಮುನ್ನುಡಿ ಬರೆದರು.
ಮಂಗಳೂರು ಮಾತ್ರವಲ್ಲದೆ ಇಡೀ ವಿಶ್ವದ ಕ್ರೈಸ್ತ ಬಂಧುಗಳು ಬೂದಿ ಬುಧವಾರದ ಮೂಲಕ ಕಪ್ಪು ದಿನ( ಬ್ಲ್ಯಾಕ್ ಡೇಸ್) ಆಚರಣೆ ಆರಂಭಿಸುತ್ತಾರೆ. ಈ ಬೂದಿ ಬುಧವಾರದ ವಿಶೇಷತೆ ಎಂದರೆ ಎಲ್ಲ ಚರ್ಚ್‌ಗಳಲ್ಲಿ ಬುಧವಾರ ಬೆಳಗ್ಗೆ ಹಾಗೂ ಸಂಜೆ ವಿಶೇಷ ಪೂಜೆಯ ಜತೆಗೆ ಬೂದಿಯಲ್ಲಿ ಶಿಲುಬೆಯ ಚಿಹ್ನೆಯನ್ನು ಭಕ್ತರಿಗೆ ಹಾಕಲಾಗುತ್ತದೆ. ಆ ಮೂಲಕ ಕಪ್ಪು ದಿನದ ಆಚರಣೆಗೆ ಚಾಲನೆ ಸಿಗುತ್ತದೆ. ಕ್ರೈಸ್ತರು ಬುಧವಾರ ವಿಶೇಷವಾದ ಪ್ರಾರ್ಥನೆ, ಉಪವಾಸದ ಮೂಲಕ ಈ ದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಾರೆ. ಇನ್ನು 40 ದಿನಗಳ ಕಾಲ ಪ್ರಾರ್ಥನೆ, ತ್ಯಾಗದ ಬದುಕಿನ ಹಾದಿಯಲ್ಲಿ ಕ್ರೈಸ್ತರು ಸಾಗುತ್ತಾರೆ. ಈಸ್ಟರ್ ಹಬ್ಬದ ಮೂಲಕ ಈ ಕಪ್ಪು ದಿನಕ್ಕೆ ಪೂರ್ಣ ವಿರಾಮ ಸಿಗಲಿದೆ.

ಇತ್ತೀಚಿನ ಸುದ್ದಿ

ಜಾಹೀರಾತು