ಇತ್ತೀಚಿನ ಸುದ್ದಿ
ಮಂಗಳೂರು: ಬೆಸೆಂಟ್ ಸರ್ಕಲ್ ಬಳಿ ಯು ಟರ್ನ್ ಹೊಡೆಯುತ್ತಿದ್ದ ಕಾರಿಗೆ ಮತ್ತೊಂದು ಕಾರು ಡಿಕ್ಕಿ
31/10/2023, 23:39

ಮಂಗಳೂರು(reporter Karnataka.com): ನಗರದ ಬೆಸೆಂಟ್ ಸರ್ಕಲ್ ಬಳಿಯ ಕೆನರಾ ಕಾಲೇಜು ಸಮೀಪ ಎರಡು ಕಾರುಗಳು ಡಿಕ್ಕಿ ಹೊಡೆದಿವೆ.
ಎಂ. ಎಚ್ .ನೋಂದಣಿ ಹೊಂದಿರುವ ಸ್ಕೊಡ ಕಾರೊಂದು ಕೆನರಾ ಕಾಲೇಜು ಬಳಿ ಯು ಟ್ರನ್ ಹೊಡೆಯುತ್ತಿದ್ದಾಗ ಪಿವಿಎಸ್ ಕಡೆಯಿಂದ ಬರುತ್ತಿದ ಕೇರಳ ರಿಜಿಸ್ಟರ್ ವೊಕ್ಸ್ ವೇಗನ್ ಪೋಲೊ ಕಾರು ಡಿಕ್ಕಿ ಹೊಡೆದಿದೆ. ಕೇರಳ ನೋಂದಣಿಯ ಕಾರು ಅತೀ ವೇಗದಿಂದ ಬಂದು ಗುದ್ದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಎಂ.ಹೆಚ್. ಕಾರನ್ನು ಮಹಿಳೆ ಚಲಾವಣೆ ನಡೆಸುತ್ತಿದ್ದೂ, ಕೇರಳ ನೋಂದಣಿ ಕಾರಿನಲ್ಲಿ ಇಬ್ಬರು ಯುವಕರಿದ್ದು, ಪಾನಮತ್ತರಾಗಿದ್ದರು ಎಂದು ಸಾರ್ವಜನಿಕರು ಸಂಶಯ ವ್ಯಕ್ತ ಪಡಿಸಿದ್ದಾರೆ.
ಪಾಂಡೇಶ್ವರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.