ಇತ್ತೀಚಿನ ಸುದ್ದಿ
ಮಂಗಳೂರು: ಭೀಕರ ಸ್ಕೂಟರ್ ಅಪಘಾತ ; ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ದಾರುಣ ಸಾವು
29/06/2023, 11:31

ಮಂಗಳೂರು(reporterkarnataka.com): ನಗರದ ಮೇರಿಹಿಲ್ ಬಳಿ ಬುಧವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತಪಟ್ಟವರನ್ನು ಬೈಕ್ ಸವಾರ ಚಿರಾಗ್ (15) ಹಾಗೂ ಸಹ ಸವಾರ ಪವನ್ (16) ಎಂದು ಗುರುತಿಸಲಾಗಿದೆ.
ಬುಧವಾರ ರಾತ್ರಿ 9.10 ಗಂಟೆ ವೇಳೆಗೆ ಬೈಕ್ ನಲ್ಲಿ ಯೆಯ್ಯಾಡಿ ಯಿಂದ ಪದವಿನಂಗಡಿ ಕಡೆಗೆ ಹೋಗುತ್ತಿರುವಾಗ ವಿಕಾಸ್ ಕಾಲೇಜು ಎದುರುಗಡೆ ಡಿವೈಡರ್ ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ
ಇಬ್ಬರು ಮೃತಪಟ್ಟಿದ್ದಾರೆ.