ಇತ್ತೀಚಿನ ಸುದ್ದಿ
Mangaluru | ಕೋಟೆಕಾರ್ ಅಡ್ಕ ಬಳಿ ಓಮ್ನಿ ವ್ಯಾನಿಗೆ ಆಕಸ್ಮಿಕ ಬೆಂಕಿ: ಚಾಲಕ ಪಾರು
13/02/2026, 19:01
ಮಂಗಳೂರು(reporterkarnataka.com): ನಗರದ ಹೊರವಲಯದ ಕೋಟೆಕಾರ್ ಅಡ್ಕ ಹೆದ್ದಾರಿಯಲ್ಲಿ ಓಮ್ನಿ ವ್ಯಾನೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಇತರ ವಾಹನ ಸವಾರರ ಸಮಯ ಪ್ರಜ್ಞೆ ಯಿಂದ ವ್ಯಾನಿನ ಚಾಲಕ ಪಾರಾಗಿದ್ದಾರೆ.
ವ್ಯಾನ್ ಮಾಲೀಕ ರಿಯಾಜ್ ಅಡ್ಕದ ಗ್ಯಾರೇಜ್ ವೊಂದರಲ್ಲಿ ದುರಸ್ತಿ ಕಾರ್ಯ ಮುಗಿಸಿ ಮಾರ್ಗ ಮಧ್ಯ ಪೆಟ್ರೋಲ್ ಹಾಕಿಸಿಕೊಂಡು ತಲಪಾಡಿ ಕಡೆ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಂದರ್ಭ ವ್ಯಾನಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಿಂದಿನಿಂದ ಬರುತ್ತಿದ್ದ ಕೆಲವು ಬೈಕ್ ಸವಾರರು ಬೆಂಕಿ ಹಚ್ಚಿಕೊಂಡಿರುವ ಬಗ್ಗೆ ಎಚ್ಚರಿಸಿದ್ದು, ರಿಯಾಜ್ ತಕ್ಷಣವೇ ರಸ್ತೆ ಬದಿಗೆ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು ತಕ್ಷಣವೇ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಕಸ್ಮಿಕ ಬೆಂಕಿ ಅವಘಡಕ್ಕೆ ಇನ್ನಷ್ಟೇ ಪರಿಶೀಲನೆ ನಡೆಯಬೇಕಿದೆ.












