ಇತ್ತೀಚಿನ ಸುದ್ದಿ
ಮಂಗಳೂರು: 24ರಂದು ಫಾತಿಮಾ ರಲಿಯಾರ ‘ಅವಳ ಕಾಲು ಸೋಲದಿರಲಿ’ ಕವನ ಸಂಕಲನ ಬಿಡುಗಡೆ
22/02/2024, 22:15
ಮಂಗಳೂರು(reporterkarnataka.com): ಫಾತಿಮಾ ರಲಿಯಾ ಅವರ ಕವನ ಸಂಕಲನ ‘ಅವಳ ಕಾಲು ಸೋಲದಿರಲಿ’ ಬಿಡುಗಡೆ ಸಮಾರಂಭ ನಗರದ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಫೆ. 24ರಂದು ಸಂಜೆ 3 ಗಂಟೆಗೆ ನಡೆಯಲಿದೆ.
ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಧಾ ಆಡುಕಳ ಮಾತಾಡಲಿದ್ದಾರೆ. ವಿಲ್ಸನ್ ಕಟೀಲ್ ಮತ್ತು ಮುಆದ್ ಜಿ.ಎಂ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಪುಸ್ತಕವನ್ನು ‘ಉಡುಗೊರೆ ಪ್ರಕಾಶನ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾ ಅವರ ಮೂರನೇ ಕೃತಿಯಾಗಿದೆ. ಹಿಂದಿನ ಎರಡು ಕೃತಿಗಳಾದ ‘ಕಡಲು ನೋಡಲು ಹೋದವಳು’ ಮತ್ತು ‘ಒಡೆಯಲಾರದ ಒಡಪು’ ಅನ್ನು ಕ್ರಮವಾಗಿ ಅಹರ್ನಿಶಿ ಪ್ರಕಾಶನ ಮತ್ತು ಸಂಕಥನ ಪ್ರಕಟಿಸಿದೆ. ಮೂರೂ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.