4:59 AM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಇನ್ನರ್ ವೀಲ್ ಜಿಲ್ಲೆ 318 ರ District Rally ‘ಸ್ವರ್ಣ ಪರ್ಬ’

02/10/2023, 21:05

ಮಂಗಳೂರು(reporterkarnataka.com): ಇನ್ನರ್ ವೀಲ್ ಜಿಲ್ಲೆ 318 ರ ಜಿಲ್ಲಾ ರ್ಯಾಲಿ ‘ ಸ್ವರ್ಣ ಪರ್ಬ’ ‘ ಭಾನುವಾರ ನಗರದ ಟಿ. ವಿ. ರಮಣ ಪೈ ಹಾಲಿನಲ್ಲಿ ಜಿಲ್ಲಾ ಚೇರ್ಮನ್ ಪೂರ್ಣಿಮಾ ರವಿ ಅವರ ನೇತೃತ್ವದಲ್ಲಿ ನಡೆಯಿತು.
ಇನ್ನರ್ ವೀಲ್ ಮಂಗಳೂರು ಉತ್ತರದ ಚಾರ್ಟರ್ ಸದಸ್ಯೆ
ಉಷಾ ರವಿರಾಜ್ ಅವರು ಇನ್ನರ್ ವೀಲ್ ಪ್ರಾರ್ಥನೆ ಮಾಡಿದರು. ಕ್ಲಬ್ ನ ಅಧ್ಯಕ್ಷೆ ಗೀತಾ ಬಿ. ರೈ ಅವರು ಸ್ವಾಗತಿಸಿದರು. ರ್ಯಾಲಿ ಚೇರ್ಮನ್ ಚಿತ್ರಾ ವಿ. ರಾವ್ ಅವರು ರ್ಯಾಲಿ ಸ್ವರ್ಣ ಪರ್ಬದ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ಹಾಡಿನ ಮೂಲಕ ವಿವರಿಸಿದರು. ಕಾರ್ಯದರ್ಶಿ ಶಬರಿ ಕಡಿದಾಲ್ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಕೆ ಕಳುಹಿಸಿದವರ ವಿವರ ನೀಡಿದರು. ಚೇರ್ಮನ್ ಪೂರ್ಣಿಮಾ ರವಿ ಅವರು 2023-24ನೇ ಸಾಲಿನಲ್ಲಿ ಜಿಲ್ಲೆ 318 ರಲ್ಲಿ ನಡೆದ ಪ್ರಾಜೆಕ್ಟ್, ಅದರ ಪ್ರಯೋಜನ ಪಡೆದವರ ಹಾಗೂ ವಿನಿಯೋಗ ಮಾಡಿದ ಹಣದ ವಿವರಗಳನ್ನು ತಿಳಿಸಿ, ಕಾರ್ಯ ಕ್ರಮದ ಬಗ್ಗೆ ಮೆಚ್ಚುಗೆ ಮಾತನ್ನು ವ್ಯಕ್ತಪಡಿಸಿದರು. ಇತರ ಕ್ಲಬ್ ಗಳಿಂದ ಬಂದ ಮಾಜಿ ಜಿಲ್ಲಾ ಚೇರ್ ಮೆನ್ ರವರನ್ನು ಗೌರವಿಸಲಾಯಿತು.
ಉಪ ಚೇರ್ಮನ್ ವೈಶಾಲಿ ಕುಡ್ವ ವಂದಿಸಿದರು. ಜಿಲ್ಲಾ ಖಜಾಂಚಿ ರಜನಿ ಭಟ್ ಹಾಗೂ ಜಿಲ್ಲಾ ಎಡಿಟರ್ ಉಮಾ ಮಹೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಡೆಸಿಕೊಟ್ಟ ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ ದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಾಲಿನಿ ಹೆಬ್ಬಾರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು