9:27 PM Monday28 - July 2025
ಬ್ರೇಕಿಂಗ್ ನ್ಯೂಸ್
ಬಾಳೆಬೈಲು – ಕುರುವಳ್ಳಿ ಬೈಪಾಸ್ ರಸ್ತೆಯಲ್ಲಿ ಕುಸಿಯುತ್ತಿರುವ ಗುಡ್ಡ: ಬ್ಯಾರಿಕೆಡ್ ಹಾಕಿರುವ ಪೊಲೀಸರು Shivamogga | ತೀರ್ಥಹಳ್ಳಿ: ಬೆಜ್ಜವಳ್ಳಿ ಸಮೀಪ ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ; ಸವಾರ… ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ ಒಂಟಿ ಸಲಗ ಪ್ರತ್ಯಕ್ಷ: ಪ್ರಯಾಣಿಕರಲ್ಲಿ ಭೀತಿ ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ…

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ ಎಚ್‍ಡಿಎಫ್‍ಸಿ ‘ಚಕ್ರಗಳ ಮೇಲೆ ಬ್ಯಾಂಕ್’ ಲೋಕಾರ್ಪಣೆ

21/09/2023, 20:26

ಮಂಗಳೂರು(reporterkarnataka.com): ಎಚ್.ಡಿ.ಎಫ್.ಸಿ ಬ್ಯಾಂಕ್ ಗ್ರಾಹಕರ ಮನೆ ಬಾಗಿಲಿಗೆ ಸೇವೆ ನೀಡುವ ಉದ್ದೇಶದಿಂದ “ಚಕ್ರಗಳ ಮೇಲೆ ಬ್ಯಾಂಕ್” ಯೋಜನೆಗೆ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಾಲನೆ ನೀಡಲಾಯಿತು.


ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ ಅವರು, ದಕ್ಷಿಣ ಕನ್ನಡ ಜಿಲ್ಲೆ ಬ್ಯಾಂಕ್ ಗಳ ಉಗಮ ಸ್ಥಳವಾಗಿದ್ದು ಎಚ್.ಡಿಎಫ್ ಬ್ಯಾಂಕ್ ಚಕ್ರಗಳ ಮೇಲೆ ಬ್ಯಾಂಕ್ ಸೇವೆಯ ಮೂಲಕ ಹಳ್ಳಿ ಹಳ್ಳಿಗಳ ಜನರನ್ನು ತಲುಪಲು ಮುಂದಾಗಿರುವುದು ಶ್ಲಾಘನೀಯ. ಈ ಮೂಲಕ ಹಳ್ಳಿಭಾಗಗಳ ಜನರು ಬ್ಯಾಂಕ್ ಸೇವೆಯನ್ನು ಪಡೆಯುವಂತಾಗಲಿ. ಬಿಸಿ ರೋಡ್, ವಿಟ್ಲ, ಉಜಿರೆ, ಉಪ್ಪಿನಂಗಡಿ, ಪುತ್ತೂರು ಮತ್ತಿತರ 24 ರಿಂದ 40 ಕಿಲೋಮೀಟರ್ ವ್ಯಾಪ್ತಿಯ ಗ್ರಾಮೀಣ ಭಾಗಗಳಲ್ಲಿ ಈ ವಾಹನ ಸೇವೆ ಒದಗಿಸಲಿದೆ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ವಾಹನದಲ್ಲಿ ಎಟಿಎಂ ಮಾತ್ರವಲ್ಲದೆ ನೂತನ ಅಕೌಂಟ್ ತೆರೆಯುವುದರಿಂದ ಹಿಡಿದು ನಗದು ಠೇವಣಿ, ಡಿಪಾಸಿಟ್, ಲೋನ್ ಸೌಲಭ್ಯ ಕೂಡ ಲಭ್ಯವಿದೆ ಬ್ಯಾಂಕ್ ನಲ್ಲಿ ಲಭ್ಯ ವಿರುವ 21 ರೀತಿಯ ಎಲ್ಲಾ ಸೌಲಭ್ಯ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್‍ನ ಸರ್ಕಲ್ ಹೆಡ್ ಮತ್ತು ಹಿರಿಯ ಉಪಾಧ್ಯಕ್ಷ ಶುಭಂಕರ್ ಬೋಸ್, ದಕ್ಷಿಣ ಕನ್ನಡ ಕ್ಲಸ್ಟರ್ ಹೆಡ್ ಚಂದನ್ ಶಿವಣ್ಣ, ಉಡುಪಿ ಕ್ಲಸ್ಟರ್ ಮುಖ್ಯಸ್ಥ ವಾಸುದೇವ ಪಿ, ಬಿ.ಸಿ.ರೋಡ್-ಬಂಟ್ವಾಳ ಶಾಖ ಮುಖ್ಯಸ್ಥ ಪ್ರಖ್ಯಾತ್ ಶೆಟ್ಟಿ, ಪುತ್ತೂರು ಶಾಖಾ ವ್ಯವಸ್ಥಾಪಕ ಅನೀಶ್ ಶೆಟ್ಟಿ, ಸುರತ್ಕಲ್ ಶಾಖಾ ವ್ಯವಸ್ಥಾಪಕ ಉದಯ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು