9:15 PM Tuesday2 - December 2025
ಬ್ರೇಕಿಂಗ್ ನ್ಯೂಸ್
ಹುಣಸೂರು: ಜನರಿಗೆ ಹೆದರಿ ತಾಯಿ ಹುಲಿಯಿಂದ ಬೇರ್ಪಟ್ಟ 4 ಮರಿ ಹುಲಿಗಳು ಮತ್ತೆ… Shivamogga | ತೀರ್ಥಹಳ್ಳಿ: ಸ್ಕೂಟಿ – ಕಾರು ನಡುವೆ ಅಪಘಾತ; ಮಹಿಳೆಗೆ ಗಾಯ ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ…

ಇತ್ತೀಚಿನ ಸುದ್ದಿ

ಮಂಗಳೂರಿನ ಎ.ಜೆ. ಮೆಡಿಕಲ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

11/03/2024, 22:34

ಮಂಗಳೂರು(reporterkarnataka.com): ವಿಶ್ವಸಂಸ್ಥೆ ಹಾಗೂ ಯುವನಿಕ ಮತ್ತು ಮಂಗಳೂರು
ಲಕ್ಷ್ಮೀ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ ಜಂಟಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ ಎಂಬ ವಿಷಯದಲ್ಲಿ ನಗರದ ಎ.ಜೆ. ಮೆಡಿಕಲ್ ಕಾಲೇಜು ಅಡಿಟೋರಿಯಂನಲ್ಲಿ ಕಾರ್ಯಕ್ರಮ ನಡೆಸಲಾಯಿತು.
ಯುವನಿಕ ಸಂಸ್ಥೆ ಮುಖ್ಯಸ್ಥರಾದ ರಘುವೀರ್ ಸೂಟರ್‌ಪೇಟೆ ದಿನದ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮೀನುಗಾರಿಕೆ ಮತ್ತು ಪಶುವೈದ್ಯಕೀಯ ವಿಭಾಗದ ಡೀನ್ ಡಾ. ಆಂಜನೇಯಪ್ಪ ಮಾತನಾಡಿ ಮಹಿಳೆಯರ ಶಕ್ತಿ ಮತ್ತು ಸಮಾಜವನ್ನು ಸಶಕ್ತಗೊಳಿಸುವಲ್ಲಿ ಮಹಿಳೆಯರು ಹೇಗೆ ಉತ್ತಮ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಗೌರವ ಅತಿಥಿಯಾದ ಮಂಗಳೂರು ನಗರ ಪೊಲೀಸ್ ಸಂಚಾರ ವಿಭಾಗದ ಸಹಾಯಕ ಕಮಿಷನ‌ರ್ ನಜಾ ಫಾರೂಕ್ ಅವರು ಪ್ರತಿ ಸಂದರ್ಭದಲ್ಲೂ ದೃಢವಾಗಿ ಮತ್ತು ಧೈರ್ಯದಿಂದ ಸವಾಲುಗಳನ್ನು ಎದುರಿಸುವ ಮೂಲಕ ಜೀವನದಲ್ಲಿ ಯಶಸ್ವಿಯನು ಕಂಡುಕೊಳ್ಳಲು ಸಾಧ್ಯ ಎಂಬ ಮಾತಿನ ಮೂಲಕ ಪ್ರೇರೇಪಣೆಯನ್ನು ನೀಡಿದರು.
ಲಕ್ಷ್ಮಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಲರಿಸ್ಸಾ ಮಾರ್ಥಾ ಸಾಮ್ಸ್, ಅವರು ನಿಮ್ಮ ಶಕ್ತಿಯನ್ನು ಅಳವಡಿಸಿಕೊಳ್ಳುವ ಮೂಲಕ, ನಿಮ್ಮ ಕನಸುಗಳನ್ನು ಮುಂದುವರಿಸಿ ಮತ್ತು ಅಡೆತಡೆಗಳನ್ನು ಮುರಿಯುವುದನ್ನು ಮುಂದುವರಿಸಿ. ನೀವು ಬದಲಾವಣೆಯ ವಾಸ್ತು ಶಿಲ್ಪಿಗಳು ಎಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸಿದರು.
ಕಾರ್ಯಕ್ರಮದಲ್ಲಿ ಯುವನಿಕ ಸಂಸ್ಥೆಯ ಕೆ. ಕಸ್ತೂರಿ, ಮಲ್ಲಿಕಾ ಎಸ್., ರಕ್ಷಾ, ಯಶೋಧರ್, ಹರೀಶ್, ಶಿವಕುಮಾರ್ (ಎಲ್.ಎಂ.ಸಿ.ಎನ್.) ಮುರಳೀಧರ್ ಮತ್ತು ತರಬೇತಿ ಮತ್ತು ಅಭಿವೃದ್ಧಿ ವ್ಯವಸ್ಥಾಪಕ ಸುಖೇತ್ ಪಿ. ಜೈನ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು NEXA ಮಾಂಡೋವಿ ಮೋಟರ್ಸ್ PVL. Ltd. ಇವರ ಪ್ರಯೋಜಕತ್ವದಲ್ಲಿ ನಡೆಸಲಾಯಿತು. ಮನಿಷಾ ಬಿ.ಎಲ್. ಕಾರ್ಯಕ್ರಮ ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು