ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ರಾಷ್ಟ್ರೀಯ ಕೃಷಿಕರ ದಿನಾಚರಣೆ: ಪ್ರಗತಿಪರ ರೈತರಿಗೆ ಸನ್ಮಾನ
23/12/2023, 20:17
ಮಂಗಳೂರು (reporterkarnataka.com):ಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯ ಕೃಷಿ ಅನುಸಂಧಾನ ಪರಿಷತ್- ಕೃಷಿ ವಿಜ್ಞಾನ ಕೇಂದ್ರ, ದಕ್ಷಿಣ ಕನ್ನಡ, ಮಂಗಳೂರು ಇವರ ವತಿಯಿಂದ ರಾಷ್ಟ್ರೀಯ ಕೃಷಿಕರ ದಿನಾಚರಣೆಯನ್ನು ನಗರದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೆಯನ್ನು ಡಾ. ಶಿವಕುಮಾರ್ ಆರ್., (ಸಹಾಯಕ ಪ್ರಾದ್ಯಪಕರು, ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು) ವಹಿಸಿದ್ದು ತಮ್ಮ ಭಾಷಣದಲ್ಲಿ ಕೃಷಿಕರ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ನಾವು ರೈತರ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ಪ್ರತಿ ದಿನವನ್ನು ರೈತರ ದಿನವನ್ನಾಗಿ ಆಚರಿಸಬೇಕು ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂರು ಜನ ಪ್ರಗತಿಪರ ರೈತರಿಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಯಿತು. ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಉಳ್ಳಾಲ ತಾಲ್ಲೂಕಿನ ಹರೇಕಳ ಗ್ರಾಮದ ಮೈಮೂನ, ಸಿಹಿನೀರಿನಲ್ಲಿ ಮುತ್ತಿನ ಕೃಷಿ ಕೈಗೊಂಡಿರುವ ಸುಳ್ಯ ತಾಲ್ಲೂಕು ಐವರ್ ನಾಡು ಗ್ರಾಮದ ಸಿ. ಕೆ. ನವೀನ್ ಚಂದ್ರ ಹಾಗೂ ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಂಟ್ವಾಳ ತಾಲ್ಲೂಕಿನ ಮೊಡಂಕಾಪು ಗ್ರಾಮದ
ವಿಲ್ಮಾ ಪ್ರಿಯಾ ಆಲ್ಬಕರ್ಕ್ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರವನ್ನು ಡಾ. ಶಿವಕುಮಾರ್ ಆರ್, ಸಂಯೋಜಿಸಿದ್ದು ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ಸಿಬ್ಬಂದಿಯವರು ಮತ್ತು 35 ಜನ ರೈತರು ಭಾಗವಹಿಸಿದ್ದರು.