ಇತ್ತೀಚಿನ ಸುದ್ದಿ
ಮಂಗಳೂರಿನಲ್ಲಿ ಕಾಶೀ ಮಠಾಧೀಶರ ಚಾತುರ್ಮಾಸ ವ್ರತ: ವಿವಿಧ ಧಾರ್ಮಿಕ – ಸಾಂಸ್ಕ್ರತಿಕ ಕಾರ್ಯಕ್ರಮ
04/06/2022, 11:32

ಮಂಗಳೂರು(reporterkarnataka.com) : ಗೌಡ ಸಾರಸ್ವತ ಸಮಾಜ ಮಂಗಳೂರು ಇದರ ಪ್ರತಿಷ್ಠಿತ ದೇವಳವಾದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶುಭಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತ ವನ್ನು ಆಚರಿಸಲಿರುವರು.
ದಿನಾಂಕ : ೧೮. ೦೭. ೨೦೨೨ ರಿಂದ ಪ್ರಾರಂಭಗೊಳ್ಳಲಿದ್ದು ೪ ತಿಂಗಳ ಪರ್ಯಂತ ವಿವಿಧ ಧಾರ್ಮಿಕ – ಸಾಂಸ್ಕ್ರತಿಕ ಕಾರ್ಯಕ್ರಮಗಳು,
ಯಜ್ಞ – ಯಾಗಾದಿಗಳು ಶ್ರೀಗಳವರ ಮಾರ್ಗದರ್ಶನ ಹಾಗೂ ದಿವ್ಯ ಉಪಸ್ಥಿತಿಯಲ್ಲಿ ನೆರವೇರಲಿರುವುದು . ಚಾತುರ್ಮಾಸ ಸಂದರ್ಭದಲ್ಲಿ ನಡೆಯಲಿರುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು ಪಾಲ್ಗೊಳ್ಳಬೇಕಾಗಿ ಶ್ರೀ ದೇವಳದ ಆಡಳಿತ ಮಂಡಳಿ ಮತ್ತು ಚಾತುರ್ಮಾಸ ಸಮಿತಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದೆ.