ಇತ್ತೀಚಿನ ಸುದ್ದಿ
ರೋವಿನಾ ಶ್ಯಾರನ್ ಸೋನ್ಸ್ ಗೆ ಮಂಗಳೂರು ವಿವಿ ಡಾಕ್ಟರೇಟ್
23/03/2026, 22:32
ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾಲಯವು ಯೆನೇಪೊಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್‍ಸ್ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ರೋವಿನಾ ಶ್ಯಾರನ್ ಸೋನ್ಸ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿದೆ.
‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಆಯ್ದ (ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು) ಐಟಿಇಎಸ್ ಕಂಪನಿಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಇರುವ ಪರಿಣಾಮ: ಒಂದು ಅಧ್ಯಯನ’ (Impact of Health and Wellness Programs on Employee Productivity in Select ITES Companies: A Study in the Coastal Districts of Karnataka) ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ (ಪಿಹೆಚ್‌ಡಿ) ಪದವಿಯನ್ನು ಪ್ರದಾನಿಸಿದೆ.
ಇತ್ತೀಚೆಗೆ ನಡೆದ ವೈವಾ ವೋಸ್ ಪರೀಕ್ಷೆಯಲ್ಲಿ ಅವರು ತಮ್ಮ ಮಹಾಪ್ರಬಂಧವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಈ ಸಂಶೋಧನಾ ಕಾರ್ಯವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಡಾ. ಶೇಖರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು.



ಡಾ. ರೋವಿನಾ ಸೋನ್ಸ್ ಅವರು ರೋನಿ ಸೋನ್ಸ್ ಮತ್ತು ರೋಝಿನಾ ಸೋನ್ಸ್ ಅವರ ಪುತ್ರಿ. ಸಂತೋಷ್ ಬಂಗೇರ ಅವರ ಪತ್ನಿ.












