ಇತ್ತೀಚಿನ ಸುದ್ದಿ
ಮಂಗಳೂರು ವಿವಿ ಕಾಲೇಜು: ಗ್ರಾಹಕ ಜಾಗೃತಿ ಸರ್ಟಿಫಿಕೇಟ್ ಕೋರ್ಸ್ ಉದ್ಘಾಟನೆ
08/11/2025, 19:50
ಚಿತ್ರ/ ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ವತಿಯಿಂದ ಜಿಲ್ಲಾ ಗ್ರಾಹಕ ಸಂಘಟನೆಗಳ ಒಕ್ಕೂಟದ ಸಹಯೋಗದಲ್ಲಿ ಆರಂಭಗೊಂಡ ಗ್ರಾಹಕ ಜಾಗೃತಿ ಸರ್ಟಿಫಿಕೇಟ್ ಕೋರ್ಸ್‌ನ ಉದ್ಘಾಟನಾ ಸಮಾರಂಭ ಕಾಲೇಜಿನ ಶಿವರಾಮ ಕಾರಂತ ಹಾಲ್‌ನಲ್ಲಿ ನಡೆಯಿತು.




ಕಾರ್ಯಕ್ರಮವನ್ನು ಜಿಲ್ಲಾ ಗ್ರಾಹಕ ಒಕ್ಕೂಟಗಳ ಅಧ್ಯಕ್ಷೆ ಸುನಂದಾ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಗ್ರಾಹಕರಿರುವುದರಿಂದ. ನಾವೆಲ್ಲರೂ ತೆರಿಗೆಗಳನ್ನು ಪಾವತಿಸುತ್ತೇವೆ.ಹುಟ್ಟಿನಿಂದ ಸಾವಿಯುವರೆಗೆ ನಾವು ಗ್ರಾಹಕರೇ. ಗ್ರಾಹಕರಾಗಿರುವುದರಿಂದ ನಾವು ಹಲವು ವಿಷಯಗಳನ್ನು ತಿಳಿದುಕೊಳ್ಳಬೇಕು, ಅದು ಜಿಎಸ್‌ಟಿ, ಉತ್ಪನ್ನಗಳ ಅವಧಿ ನಿಖರತೆಯನ್ನು ಸ್ಪಷ್ಟ ಪಡಿಸಿಕೊಳ್ಳಬೇಕು. ಎಫ್‌ಎಫ್‌ಎಸ್‌ಐ ನಿಯಮಗಳು ಆಗಿರಬಹುದು. ನಮ್ಮಲ್ಲಿ ಹಲವರು ಇತ್ತೀಚೆಗೆ ಇವುಗಳ ಬಗ್ಗೆ ತಿಳಿದಿದ್ದೇವೆ. ಆದರೆ ಎಲ್ಲಾರೂ ಇದರ ಬಗ್ಗೆ ಜಾಗೃತ ರಾಗಬೇಕು. ನಾವು ಖರೀದಿಸುವ ಉತ್ಪನ್ನಗಳ ಬಗ್ಗೆ ಅತೃಪ್ತಿ ಹೊಂದಿರುವಾಗ ಪ್ರಶ್ನಿಸುವುದು ನಮ್ಮ ಹಕ್ಕುಗಳು ಮತ್ತು ಜವಾಬ್ದಾರಿ ಎಂಬುದನ್ನು ನಾವು ತಿಳಿದಿರಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ವಹಿಸಿ ಮಾತನಾಡಿ ನಾವೆಲ್ಲರೂ ಹುಟ್ಟಿನಿಂದ ಗ್ರಾಹಕರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಾಮಾನ್ಯವಾಗಿ ನಾವು ಉತ್ಪನ್ನಗಳನ್ನು ಖರೀದಿಸಿದ ನಂತರ ನಾವು ಆ ಉತ್ಪನ್ನದಲ್ಲಿ ಲೋಪ ದೋಷ ಗಳಿದ್ದರೆ, ಅದನ್ನ ಪ್ರಶ್ನಿಸುವುದಿಲ್ಲ. ಉತ್ಪನ್ನ ಗಳ ಅವಧಿ ಮುಗಿದ ಸಂದರ್ಭದಲ್ಲಿ ನಾವು ಅವುಗಳನ್ನು ಎಸೆಯುತ್ತೇವೆ. ಹೊರತು ನಮಗಾದ ಮೋಸದ ಬಗ್ಗೆ ಗ್ರಾಹಕರ ವೇದಿಕೆಗೆ ದಾವೆ ಹೂಡುವುದಿಲ್ಲ. ಅದರಿಂದ ವಿದ್ಯಾರ್ಥಿಗಳಿಗೆ ಈ ಕೋರ್ಸ್ ನಿಮಗೆ ನೀವು ಖರೀದಿಸುವ ವಸ್ತು ಗಳ ಲೋಪ ದೋಷ ಗಳ ಬಗ್ಗೆ, ತಿಳಿಕೊಳ್ಳಲು ಮತ್ತು ತನಿಖೆ ಮಾಡಲು ಹಕ್ಕಿದೆ ಎಂಬ ಎಲ್ಲಾ ಜ್ಞಾನವನ್ನು ಒದಗಿಸುವ ಗುರಿಯನ್ನು ಹೊಂದಿದೆ. ನೀವು ಕಾನೂನುಗಳು, ಮೂಲಭೂತ ಹಕ್ಕುಗಳು ಮತ್ತು ಕಾಯ್ದೆಗಳನ್ನು ತಿಳಿದಿದ್ದರೆ, ಉತ್ಪನ್ನದ ಅತೃಪ್ತಿಯ ವಿರುದ್ಧ ಹೋರಾಡಲು ನಿಮಗೆ ಸಾಧ್ಯವಾಗುತ್ತದೆ.ಎಂದು ಅವರು ಹೇಳಿದರು.

ವಾಣಿಜ್ಯ ವಿಭಾಗ ಮುಖ್ಯಸ್ಥ ಹಾಗೂ ಕೋರ್ಸ್ ಕೋ ಆರ್ಡಿ ನೆಟರ್ ಡಾ. ಯತೀಶ್ ಕುಮಾರ್ ಪ್ರಾಸ್ತವಿಕವಾಗಿ ಮಾತನಾಡಿ
6 ತಿಂಗಳ ಕೋರ್ಸ್ ಇದಾಗಿದ್ದು ಡಿಸಿ ಕಚೇರಿಗೆ ಫೀಲ್ಡ್ ವಿಸಿಟ್ ಇರುತ್ತದೆ. ಅಸೈನ್ಮೆಂಟ್ ಪ್ರಾಜೆಕ್ಟ್ ಫೀಲ್ಡ್ ವಿಸಿಟ್ ಮಾಡಿ ನೀಡಬೇಕಾಗುತ್ತದೆ. ಕಾಲೇಜು ಮುಗಿಯುವ ಹೊತ್ತಿನಲ್ಲಿ ನಿಮ್ಮ ರೆಸೂಮ್ ನಲ್ಲಿ ತೂಕದ ಅನುಭವ ವಿರುತ್ತದೆ ಎಂದು ಅವರು ಕಿವಿ ಮಾತು ಹೇಳಿದರು.






ಗ್ರಾಹಕ ಸೇವಾ ಕೇಂದ್ರ ಒಕ್ಕೂಟ ಕಮಲಗಳ ಸೆಕ್ರೆಟರಿ ಸುನಂದಾ ಡಿ.ಆರ್. ಮತ್ತೆ ವಾಣಿಜ್ಯ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.












