ಇತ್ತೀಚಿನ ಸುದ್ದಿ
ಜೋಗ್ ಫಾಲ್ಸ್ ಬಳಿ ಖಾಸಗಿ ಪ್ರವಾಸಿ ಬಸ್ ಪಲ್ಟಿ: ಇಬ್ಬರು ಮಕ್ಕಳು ಸಹಿತ ಬಂಟ್ವಾಳ ತಾಲೂಕಿನ 4 ಮಂದಿಗೆ ಗಂಭೀರ ಗಾಯ
15/12/2024, 18:21
ಶಿವಮೊಗ್ಗ(reporterkarnataka.com):ಸಾಗರ ಸಮೀಪದ ಜೋಗ್ ಫಾಲ್ಸ್ ಬಳಿ ಖಾಸಗಿ ಪ್ರವಾಸಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಬಂಟ್ವಾಳ ತಾಲೂಕಿನ 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಇತರ ಹಲವು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬಂಟ್ವಾಳ ಸಮೀಪದ ಶಂಭೂರಿನಿಂದ ಜೋಗ್ ಫಾಲ್ಸ್ ಗೆ ಪ್ರವಾಸಕ್ಕೆಂದು ತೆರಳಿದ್ದರು ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಪರಿಣಾಮ ಕಾರ್ಗಲ್ ಎಂಬಲ್ಲಿ ರಸ್ತೆಯಲ್ಲಿ ಪಲ್ಟಿಯಾಗಿದೆ.
ಶಂಭೂರು ನಿವಾಸಿಗಳಾದ ಯಶೋಧ ಹಾಗೂ ದೀಕ್ಷಿತಾ ಅವರಿಗೆ ಗಂಭೀರವಾಗಿ ಗಾಯವಾಗಿದೆ. ಇವರ ಜೊತೆಗಿದ್ದ ಇಬ್ಬರು ಪುಟಾಣಿ ಮಕ್ಕಳಿಗೆ ತಲೆ ಹಾಗೂ ಕಣ್ಣಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಗಾಯಾಳುಗಳನ್ನು ಸಾಗರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೋಗ್ ಫಾಲ್ಸ್ ಗೆ ಪ್ರವಾಸ ಹೋಗಿದ್ದ ಖಾಸಗಿ ಬಸ್ ಜೋಗ್ ಫಾಲ್ಸ್ ಗೆ ಇನ್ನೇನು ತಲುಪಲು ಕೆಲವೇ ಕಿಮೀ ದೂರದ ಅಪಘಾತಕ್ಕೀಡಾಗಿದೆ.