1:26 AM Tuesday16 - December 2025
ಬ್ರೇಕಿಂಗ್ ನ್ಯೂಸ್
1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಮಂಗಳೂರು ಸ್ಮಾರ್ಟ್ ಸಿಟಿ: ಆಡಿದ್ದೇ ಆಟ, ಮಾಡಿದ್ದೇ ಕಾಮಗಾರಿ; ಮತ್ತೆ ! ಹಳ್ಳ ಹಿಡಿದ ಖಾಸಗಿ ಬಸ್ ನಿಲ್ದಾಣ ನಿರ್ಮಾಣ! !

30/06/2021, 07:12

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಮಂಗಳೂರು(reporterkarnataka news): ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸ್ಮಾರ್ಟ್ ಸಿಟಿ ಯೋಜನೆ ಎಂದರೆ ಬರೇ ಕಟ್ಟುವುದು- ಬಿಚ್ಚುವುದು ಅಲ್ಲ. ಇದು ನಗರದ ಪ್ರತಿಯೊಬ್ಬ ನಾಗರಿಕನಿಗೂ ಆರ್ಥಿಕ ಚೈತನ್ಯವನ್ನು ತುಂಬುವ ವ್ಯವಸ್ಥೆಯಾಗಬೇಕು, ಹೂಡಿಕೆದಾರರನ್ನು ಆಕರ್ಷಿಸಬೇಕು, ಸ್ಟಾರ್ಟಪ್ ಗಳು ಅಲ್ಲಲ್ಲಿ ತೆರೆದುಕೊಳ್ಳಬೇಕು. ಇದು ಸ್ಮಾರ್ಟ್ ಸಿಟಿಯ ಆಶಯ. ಆದರೆ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಈ ಆಶಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಿದೆಯೇ ಎನ್ನುವುದು ಸಾರ್ವಜನಿಕರಲ್ಲಿ ಕಾಡುವ ಪ್ರಶ್ನೆಯಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷವೇ ರಾಜ್ಯದಲ್ಲಿಯೂ ಆಡಳಿತ ನಡೆಸುತ್ತಿದೆ, ಮಂಗಳೂರಿನಲ್ಲಿ ಅದೇ ಪಕ್ಷದ ಸಂಸದರು, ಶಾಸಕರು ಅಧಿಕಾರ ನಡೆಸುತ್ತಿದ್ದಾರೆ. ಹಾಗಾದರೆ ಯಾಕಾಗಿ ಇಲ್ಲಿ ಯೋಜನೆ ದಿಕ್ಕು ತಪ್ಪುತ್ತಿದೆ ಎನ್ನುವ ಕುರಿತು ಜನಪ್ರತಿನಿಧಿಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.

ಮಂಗಳೂರಿನ ಮಟ್ಟಿಗೆ ಸ್ಮಾರ್ಟ್ ಸಿಟಿ ಕಾಮಗಾರಿ ಅಂದ್ರೆ

ರಸ್ತೆ ರಿಪೇರಿ, ಫುಟ್ ಪಾತ್ ದುರಸ್ತಿ, ಚಪ್ಪಡಿ ಸ್ಲ್ಯಾಬ್ ಗೆ ಸ್ಮಾರ್ಟ್ ಸಿಟಿ ಕಂಪನಿಯ ಲೋಗೋ ಹಾಕಿಸುವುದು ಎನ್ನುವಷ್ಟರ ಮಟ್ಟಿಗೆ ಬಂದು ನಿಂತಿದೆ. ಮಂಗಳೂರಿನ ಜನಸಾಮಾನ್ಯರಿಗೆ ಬಿಡಿ, ಹೆಚ್ಚಿನ ಅಧಿಕಾರಿಗಳಿಗೂ ಇನ್ನೂ ಸ್ಮಾರ್ಟ್ ಸಿಟಿ ಬಗ್ಗೆ ಐಡಿಯಾ ಇದ್ದಾಗೆ ಇಲ್ಲ. ಇನ್ನು ಯೋಜನೆ ಬಗ್ಗೆ ಮಾಹಿತಿ ಇರುವ ಪ್ರಜ್ಞಾವಂತರು ಮೌನಕ್ಕೆ ಶರಣಾಗಿದ್ದಾರೆ. ಇವೆಲ್ಲದರ ಪರಿಣಾಮವೇ ಜನಪ್ರತಿನಿಧಿಗಳು ಆಡಿದ್ದೇ ಆಟ, ಮಾಡಿದ್ದೇ ಕೆಲಸ ಎನ್ನುವಂತಾಗಿದೆ. 

ಮಂಗಳೂರು ಸ್ಮಾರ್ಟ್ ಸಿಟಿ ಪ್ರಸ್ತಾವನೆಯಲ್ಲಿ 1628 ಎಕರೆ ಪ್ರದೇಶ ಪುನರ್ ಅಭಿವೃದ್ಧಿಗೆ ಯೋಜನೆ ಇದೆ. 

ಹಾಗೆ ಮಂಗಳೂರಿನಲ್ಲಿ ವಾಣಿಜ್ಯ ಅಭಿವೃದ್ಧಿಗೆ 100 ಎಕರೆ ಜಮೀನು, ಹಂಪನಕಟ್ಟೆ ಪ್ರದೇಶಾಭಿವೃದ್ಧಿಗೆ 27 ಎಕರೆ, 

ಮೀನುಗಾರಿಕೆ ಬಂದರು ಅಭಿವೃದ್ಧಿಗೆ 22 ಎಕರೆ, ಹಳೆ ಬಂದರು ಅಭಿವೃದ್ಧಿಗೆ 10 ಎಕರೆ, ಧಾರ್ಮಿಕ ವಲಯಕ್ಕೆ 57 ಎಕರೆ, ಮರೀನಾ ಅಭಿವೃದ್ಧಿಗೆ 25 ಎಕರೆ, ಐಟಿ ಮತ್ತು ಬಹು ಉಪಯೋಗಿ ವಲಯಕ್ಕೆ 42 ಎಕರೆ ಹಾಗೂ ಸೋಲಾರ್ ಫಾರ್ಮ್ ಗೆ 20 ಎಕರೆ ಮೀಸಲಿಡಬೇಕು. ಇವೆಲ್ಲ ಯೋಜನೆಗಳು ಕಾರ್ಯಗತಗೊಂಡರೆ ಮಾತ್ರ ಮಂಗಳೂರು ಸ್ಮಾರ್ಟ್ ಸಿಟಿಯ ಅರ್ಹತೆಯನ್ನು ಪಡೆಯುತ್ತದೆ. ಇಲ್ಲದಿದ್ದರೆ ಸರಕಾರದ ಕಡತದಲ್ಲಿ ಮಾತ್ರ ಸ್ಮಾರ್ಟ್ ಸಿಟಿ ಇರುತ್ತದೆ.

ಹಂಪನಕಟ್ಟೆಯಲ್ಲಿದ್ದ ಖಾಸಗಿ ಬಸ್ ನಿಲ್ದಾಣ ಸ್ಟೇಟ್ ಬ್ಯಾಂಕ್ ಸಮೀಪದ ಹಾಕಿ ಗ್ರೌಂಡ್ ಗೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು 3 ದಶಕಗಳೇ ಕಳೆದಿವೆ.

ಈ ನಡುವೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸಿದರು.  

ಆದರೆ ಮಂಗಳೂರಿಗೆ ಒಂದು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ನೇತೃತ್ವದ ಮೊದಲ ಬಿಜೆಪಿ ಸರಕಾರದ ಅವಧಿಯಲ್ಲಿ  ಬಸ್ ನಿಲ್ದಾಣ ನಿರ್ಮಿಸಲು ಪಂಪ್ ವೆಲ್ ನಲ್ಲಿ ಜಾಗ ನೋಡಲಾಯಿತು. ಅದರೆ ಬಸ್ ನಿಲ್ದಾಣ ಮಾತ್ರ ನಿರ್ಮಾಣವಾಗಲೇ ಇಲ್ಲ. ನಂತರ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ತರಲಾಯಿತು. ಈ ನಡುವೆ ಪಡೀಲ್ ಹಾಗೂ ಕೂಳೂರು ಬಳಿಯೂ ಜಾಗ ಹುಡುಕುವ ನಾಟಕವಾಡಲಾಯಿತು. ಇದೀಗ ಯಾವ ಜನಪ್ರತಿನಿಧಿಯೂ ಖಾಸಗಿ ಬಸ್ ನಿಲ್ದಾಣದ ಬಗ್ಗೆ, ಮಲ್ಟಿಸ್ಟೋರ್ಡ್ ಕಾರು ಪಾರ್ಕಿಂಗ್ ಬಗ್ಗೆ ಸೊಲ್ಲೆತ್ತುತ್ತಿಲ್ಲ. ಸ್ಮಾರ್ಟ್ ಸಿಟಿ ಯೋಜನೆಯಡಿಯೂ ಇವೆಲ್ಲ ಹಳ್ಳ ಹಿಡಿಯುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು