9:30 PM Wednesday12 - November 2025
ಬ್ರೇಕಿಂಗ್ ನ್ಯೂಸ್
Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ… ಕುಶಾಲನಗರದಲ್ಲಿ 8.60 ಕೋಟಿ ವೆಚ್ಚದ ಪ್ರಜಾಸೌಧ ತಾಲೂಕು ಆಡಳಿತ ಭವನ ನಿರ್ಮಾಣಕ್ಕೆ ಭೂಮಿ… ತಾಲ್ಲೂಕು ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇರಬೇಕು; ತಪ್ಪಿದವರ ವಿರುದ್ಧ ವರದಿ ನೀಡಲು ಡಿಸಿಗೆ… Mysore | ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೇಟೆ: ಕೊಡಗು ಜಿಲ್ಲೆಯ ಇಬ್ಬರ… ಕೇಂದ್ರ ಸರ್ಕಾರದ ಸಾಲ ಕೊಡಿಸುವುದಾಗಿ ಮಹಿಳೆಯರಿಗೆ ಲಕ್ಷಕ್ಕೂ ಅಧಿಕ ವಂಚನೆ: ಮಡಿಕೇರಿ ನಿವಾಸಿ… Sports | ಖೇಲೋ ಇಂಡಿಯಾ ಮಹಿಳಾ ಹಾಕಿ ಟೂರ್ನಿ: ಕುಶಾಲನಗರದ ದಿಶಾ ನಿಡ್ಯಮಲೆ… ಸದ್ಯದಲ್ಲಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರ ನೇಮಕಾತಿ: ಸಚಿವ ಮಧು ಬಂಗಾರಪ್ಪ ಕಬ್ಬು ಬೆಳೆಗಾರರ ಕಿವಿಗೆ ಹೂವು ಇಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ: ಕೇಂದ್ರ ಸಚಿವ… ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಧಾನಿಗೆ ಸಿಎಂ ಪತ್ರ: ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪ

ಇತ್ತೀಚಿನ ಸುದ್ದಿ

ಮಂಗಳೂರು: ಈಶ್ವರೀಯ ವಿಶ್ವವಿದ್ಯಾಲಯದಿಂದ ಆಶಾ ಕಾರ್ಯಕರ್ತೆಯರಿಗೆ ‘ವೃದ್ಧರಿಗೆ ಆರೋಗ್ಯ ಆರೈಕೆ’ ತರಬೇತಿ ಕಾರ್ಯಕ್ರಮ

16/03/2025, 11:58

ಮಂಗಳೂರು(reporterkarnataka.com): ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ಮಂಗಳೂರು ವತಿಯಿಂದ ನಗರದ ಉರ್ವ ಸ್ಟೋರ್ ನಲ್ಲಿರುವ ಬ್ರಹ್ಮಾಕುಮಾರಿಸ್ ಸಭಾಂಗಣದಲ್ಲಿ ಆಶಾ ಕಾರ್ಯಕರ್ತೆಯರಿಗೆ “ವೃದ್ಧರಿಗೆ ಆರೋಗ್ಯ ಆರೈಕೆ” ತರಬೇತಿ ಕಾರ್ಯಕ್ರಮವನ್ನು ಏರ್ಪಾಡು ಮಾಡಲಾಯಿತು. 200 ಆಶಾ ಕಾರ್ಯಕರ್ತೆಯರು ಭಾಗವಹಿಸಿದರು.
ತರಬೇತಿ ಕಾರ್ಯಕ್ರಮವನ್ನು ಬ್ರಹ್ಮಾಕುಮಾರಿಸ್ ಸಂಸ್ಥೆಯ ಪ್ರಧಾನ ಕಚೇರಿ ಮೌಂಟ್ ಅಬುವಿನಿಂದ ಆಗಮಿಸಿದ ಹಿರಿಯ ವೈದ್ಯಾಧಿಕಾರಿ ಡಾ.ಮಹೇಶ್ ಹೇಮಾದ್ರಿ ಅವರು ನೆರವೇರಿಸಿದರು. ಮೂಲತಃ ಕರ್ನಾಟಕದವರಾದ ಅವರು 30 ವರ್ಷಗಳಿಂದ ತನ್ನ ಜೀವನವನ್ನು ಜನಮಾನಸದ ಸೇವೆಗಾಗಿ ಮೌಂಟ್ ಅಬು ವಿನಲ್ಲಿ ಸಮರ್ಪಣೆ ಮಾಡಿರುವರು.
ತರಬೇತಿಯಲ್ಲಿ ಹಿರಿಯ ನಾಗರಿಕರ ಆರೈಕೆ, ಸಮತೋಲಿತ ಆಹಾರ, ಪಾನೀಯಗಳ ಮಾಹಿತಿಯ ಜೊತೆಗೆ ವೃದ್ಧರಲ್ಲಿ ಬರುವ ಸಾಮಾನ್ಯ ಮಾನಸಿಕ ಶಾರೀರಿಕ ತೊಂದರೆಯನ್ನು ಗುರುತಿಸುವುದು, ಇದರ ಕುರಿತಾಗಿ ಸಮಗ್ರ ಮಾಹಿತಿ ಯನ್ನು ನೀಡಲಾಯಿತು.
ಕಾರ್ಯಕ್ರಮದ ದೀಪ ಪ್ರಜ್ವಲನೆಯಲ್ಲಿ ಡಾ. ಜಯಶ್ರೀ, (ವೈದ್ಯಾಧಿಕಾರಿಗಳು, ಬಿಜೈ ಪ್ರಾಥಮಿಕ ಆರೋಗ್ಯ ಶಿಕ್ಷಣ ಕೇಂದ್ರ), ಜ್ಯೋತಿ (ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ), ಮಮತಾ, (ಜಿಲ್ಲಾ ಆಶಾ ಕಾರ್ಯಕರ್ತೆಯರ ಮೇಲ್ವಿಚಾರಕಿ) ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಬಿ. ಕೆ. ವಿಶ್ವೇಶ್ವರಿ ಈಶ್ವರೀಯ ಸಂದೇಶ ನೀಡಿದರು. ಬಿ. ಕೆ. ಆನಂದ್ ಸ್ವಾಗತಿಸಿದರು. ಬಿ.ಕೆ. ರಶ್ಮಿ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು