ಇತ್ತೀಚಿನ ಸುದ್ದಿ
ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಲೋಕಾರ್ಪಣೆ: ಗೋಪಿನಾಥ್‌ಭಟ್ಟರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ
02/09/2023, 12:00
ಮಂಗಳೂರು(reporterkarnataka.com): ಕುಂದೇಶ್ವರ ಪ್ರತಿಷ್ಠಾನ ಮಂಗಳೂರು ಘಟಕ ವತಿಯಿಂದ ಸೆ.೪ರಂದು ಪುರಭವನದಲ್ಲಿ ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ ತಂಡದಿಂದ ಪ್ರಶಾಂತ್ ಸಿ.ಕೆ. ವಿರಚಿತ ಮಣೆ ಮಂಚೊದ ಮಂತ್ರಮೂರ್ತಿ ನಾಟಕ ಉದ್ಘಾಟನಾ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ, ರಂಗಭೂಮಿ ದಿಗ್ಗಜ ಕಲಾವಿದ ಗೋಪಿನಾಥ್‌ಭಟ್ ಅವರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಗೋಪಿನಾಥ್ ಭಟ್ ಅವರು ರಂಗಭೂಮಿಯಲ್ಲಿ ೧೦೦ಕ್ಕೂ ಹೆಚು ಪಾತ್ರ ನಿರ್ವಹಿಸಿ ೭೫೦ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ ೪೫ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಅವರು ಕೊಂಕಣಿ ಅಕಾಡೆಮಿ ಗೌರವ ಪ್ರಸಸ್ತಿಗೂ ಭಾಜನರಾಗಿದ್ದಾರೆ.
ಸೆ.೪ರಂದು ಸೋಮವಾರ ಸಂಜೆ ೬ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್, ನಿವೃತ್ತ ಸೇನಾಧಿಕಾರಿ ಕ್ಯಾ. ಬ್ರಿಜೇಶ್ ಚೌಟ, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಕಲಾಮಾಣಿಕ್ಯ ವಿಜಯಕುಮಾರ್ ಕೊಡಿಯಾಲಬೈಲ್, ಯು.ಟಿ.ಫರೀದ್ ಫೌಂಡೇಶನ್ ಅಧ್ಯಕ್ಷ ಡಾ. ಯು.ಟಿ. ಇಫ್ತಿಕರ್, ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ, ಕಲಾವಿದ/ ಪತ್ರಕರ್ತ ವಾಲ್ಟರ್ ನಂದಳಿಕೆ, ಪದ್ಮರಾಜ್ ಆರ್., ಮಾಧವ ನಾಯ್ಕ್ ಅಡ್ಯಾರ್, ಕುಂಜತ್ತೋಡಿ ವಾಸುದೇವ ಭಟ್, ಸಚ್ಚಿದಾನಂದ ಎಡಮಲೆ, ಪಮ್ಮಿ ಕೊಡಿಯಾಲಬೈಲ್, ವಿವೇಕಾನಂದ ಸನಿಲ್., ಧನರಾಜ್‌ಶೆಟ್ಟಿ ಮೊದಲಾದವರು ಭಾಗವಹಿಸುವರು.
ಸೆ.೪ರಂದು ಸಂಜೆ ೬ ಗಂಟೆಗೆ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ನಿರ್ದೇಶನದಲ್ಲಿ ಪಾಢ್ದನ ಆಧರಿತ ತುಳು ನಾಟಕ ಮಣೆ ಮಂಚೊದ ಮಂತ್ರಮೂರ್ತಿ ಚೊಚ್ಚಲ ಪ್ರದರ್ಶನ ಆಯೋಜಿಸಲಾಗಿದ್ದು, ಇದೇ ಸಂದರ್ಭ ಹಿರಿಯ ದೈವಾರಾಧಕ ಸೀನಪ್ಪ ಶೆಡ್ಯ ಅವರಿಗೆ ಗೌರವ ಸನ್ಮಾನ ನಡೆಯಲಿದೆ.