ಇತ್ತೀಚಿನ ಸುದ್ದಿ
ಮನೆ ಹಂಚಿಕೆಯಲ್ಲಿ ಖಾನಾಪೂರ ಗ್ರಾಮಕ್ಕೆ ಮೋಸ: ಪ್ರಗತಿಪರ ದಲಿತ ಸಂಘಟನೆ ಆರೋಪ
02/01/2024, 23:00
ರಮೇಶ ಖಾನಾಪೂರ ರಾಯಚೂರು
info.reporterkarnataka@gmail.com
ಖಾನಾಪೂರ ಗ್ರಾಮಕ್ಕೆ ಮನೆ ಹಂಚಿಕೆಯಲ್ಲಿ ಅವೈಜ್ಞಾನಿಕವಾಗಿ ಇಂದು ಅಧಿಕಾರಿಗಳು ಬೇಕಾಬಿಟ್ಟಿ ಆಯ್ಕೆ ಮಾಡಿ ಖಾನಾಪೂರ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಕೊಡದೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ದೇವದುರ್ಗ ತಾಲ್ಲೂಕಿನ ಹೇಮನಾಳ ಗ್ರಾಮದ ಹೊನ್ನಯ್ಯ ತಾತ ದೇವಸ್ಥಾನದ ಆವರಣದಲ್ಲಿ ನಡೆದ ಹೇಮನಾಳ ಗ್ರಾಮ ಪಂಚಾಯತಿಯ ಕೊನೆಯ ವಿವಿಧ ವಸತಿ ಯೋಜನೆ ಗ್ರಾಮ ಸಭೆಯಲ್ಲಿ ಹೇಮನಾಳ ಗ್ರಾಮ ಪಂಚಾಯತಿಗೆ ದೊಡ್ಡ ಗ್ರಾಮವಾದ ಹಾಗೂ ತಾಲ್ಲೂಕು ಪಂಚಾಯತ ಕ್ಷೇತ್ರವಾದ ಖಾನಾಪೂರ ಗ್ರಾಮಕ್ಕೆ ಅಂಬೇಡ್ಕರ್ ವಸತಿ ಯೋಜನೆ ಮನೆ ಹಂಚಿಕೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನಸಂಖ್ಯೆ ಅತಿ ಹೆಚ್ಚು ಇದ್ದಿದ್ದು ಎಲ್ಲಾ ಅಧಿಕಾರಿಗಳಿಗೆ ಗೊತ್ತಿದೆ, ತಾ.ಪಂ ಅಧಿಕಾರಗಳು ಹಾಗೂ ಪಿಡಿಒ ಶಿವಕುಮಾರ ನಿರ್ಲಕ್ಷ್ಯದಿಂದ ಉದೇಶಪೂರ್ವಕವಾಗಿ ಅತಿ ಹೆಚ್ಚು ಗ್ರಾಮ ಪಂಚಾಯತಿ ಸದಸ್ಯರ ಹೊಂದಿರುವ
ಖಾನಾಪೂರ ಗ್ರಾಮಕ್ಕೆ ಮನೆ ಹಂಚಿಕೆಯಲ್ಲಿ ಅವೈಜ್ಞಾನಿಕವಾಗಿ ಇಂದು ಅಧಿಕಾರಿಗಳು ಬೇಕಾಬಿಟ್ಟಿ ಆಯ್ಕೆ ಮಾಡಿ ಖಾನಾಪೂರ ಗ್ರಾಮಕ್ಕೆ ಸಾಮಾಜಿಕ ನ್ಯಾಯ ಕೊಡದೆ ಅಧಿಕಾರಿಗಳು ಅನ್ಯಾಯ ಮಾಡಿದ್ದಾರೆ, ಕಳೆದ ವಾರ ಖಾನಾಪೂರ ಗ್ರಾಮದಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಖಾನಾಪೂರ ಗ್ರಾಮಕ್ಕೆ ಎಷ್ಟು ಮನೆಗಳು ಬಂದಿವೆ ಎಂಬುದು ಪಿಡಿಒ ಶಿವಕುಮಾರ ಅವರು ಗ್ರಾಮದ ಜನರಿಗೆ ತಿಳಿಸದೆ ಜನರಲ್ಲಿ ಮೂಖಾರ್ಜಿಗಳನ್ನು ಪಡೆದ ಎಷ್ಟು ಮನೆಗಳು ಎಂಬುದು ಮಾಹಿತಿ ನೀಡದೆ ಜನರಿಗೆ ದಿಕ್ಕು ತಪ್ಪಿಸಿ ಜನರಿಗೆ ಮೋಸ ಮಾಡಿದ್ದಾರೆ. ಕೂಡಲೇ ಸಂಬಂಧಿಸಿದ ಜಿಪಂ ಅಧಿಕಾರಿಗಳು ಹೆಚ್ಚೆತ್ತು ಕೊಂಡು ಈ ಗ್ರಾಮ ಸಭೆಯನ್ನು ರದ್ದು ಪಡಿಸಿ ಮರು ಗ್ರಾಮ ಸಭೆ ಮಾಡಿ ಖಾನಾಪೂರ ಗ್ರಾಮದ ಪರಿಶಿಷ್ಟ ಜಾತಿ ವರ್ಗಕ್ಕೆ ಸಿಗಬೇಕಾದ ನ್ಯಾಯ ಒದಗಿಸದ್ದಿದ್ದರೆ ತಾಪಂ ಮುಂದೆ ಉಗ್ರವಾದ ಹೋರಾಟ ಹಮ್ಮಿಕೊಡಲಾಗುತ್ತದೆ ಎಂದು ಖಾನಾಪೂರ ಗ್ರಾಮದ ದಲಿತ ಮುಖಂಡರು ಹಾಗೂ ಪ್ರಗತಿಪರ ದಲಿತ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದರು.