2:14 AM Sunday5 - April 2026
ಬ್ರೇಕಿಂಗ್ ನ್ಯೂಸ್
ಕೇರಳ ಚುನಾವಣೆಗೆ ಕರ್ನಾಟಕದ ಹಣ?: ತಿರುವನಂತಪುರದಲ್ಲಿ ಕಂತೆ ಕಂತೆ ನೋಟು ಸಮೇತ ಸಿಕ್ಕಿಬಿದ್ದ… ಚಾರಣಕ್ಕೆ ತೆರಳಿ 4 ದಿನಗಳಿಂದ ನಾಪತ್ತೆಯಾಗಿದ್ದ ಕೇರಳದ ಟೆಕ್ಕಿ ಶರಣ್ಯ ಪತ್ತೆ ಸಿದ್ದರಾಮಯ್ಯ ಬಗ್ಗೆ ಪ್ರತಾಪ್ ಸಿಂಹ ನೀಡಿರುವ ಹೀನಾಯ ಹೇಳಿಕೆ ಬಿಜೆಪಿಯ ನೀಚ ರಾಜಕಾರಣ… ಎಸ್ಸೆಸ್ಸೆಲ್ಸಿ ಗ್ರೇಡಿಂಗ್ ಪದ್ಧತಿಗೆ ರಾಜ್ಯಪಾಲರು ವಿರೋಧ: ನಾಳೆ ರಾಜಭವನಕ್ಕೆ ಕರವೇ ಮುತ್ತಿಗೆ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ’: ರಾಜ್ಯಪಾಲರಿಗೆ ಕರವೇ ನಾರಾಯಣ ಗೌಡ ಖಡಕ್… ದೇಶದಲ್ಲೇ ಅತಿ ಹೆಚ್ಚು | ಬೆಂಗಳೂರಿಂದ 272 ಅಕ್ರಮ ಬಂಗ್ಲಾ ವಲಸಿಗರು ಗಡಿಪಾರು Kodagu | ಕುಶಾಲನಗರ: ಹರದೂರು – ಕಾಜೂರು ಮಕಾಂ ಉರೂಸ್ ಗೆ ಚಾಲನೆ ತ.ನಾ. ಚುನಾವಣೆ | ಚಾಮರಾಜನಗರ ಸಮೀಪದ ಮೆಟ್ಟೂರು ಕ್ಷೇತ್ರದಿಂದ ವೀರಪ್ಪನ್‌ ಪುತ್ರಿ ವಿದ್ಯಾರಾಣಿ… ಅಡಿಕೆಯೊಳಗಿದ್ದ ಸ್ಫೋಟಕ ಸಿಡಿದು ಮಹಿಳೆಗೆ ಗಾಯ: ಅಡಿಕೆಯಲ್ಲಿ ಇದ್ದಿದ್ದಾದರೂ ಏನು..? ಪ್ರಕರಣದ ಸತ್ಯಾಂಶ… ನಂಜನಗೂಡು: ಶ್ರದ್ಧಾ ಭಕ್ತಿಯಿಂದ ನಡೆದ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ…

ಇತ್ತೀಚಿನ ಸುದ್ದಿ

ಮನಸ್ಸಿನ ಭಾವನೆಗಳನ್ನು ಅಕ್ಷರಕ್ಕಿಳಿಸಲು ಕೈಬರಹವೇ ಸಾಧನ: ಮಾತಿನ ಜತೆಗೆ ಜ್ಞಾನದ ಅಭಿವೃದ್ಧಿಯೂ ಇದರಿಂದಲೇ!

25/11/2021, 07:58

ಮಾನವ ಸಂಘಜೀವಿ. ಸಮಾಜದ ಎಲ್ಲರೊಂದಿಗೆ ಬೆರೆತು ಬಾಳ ಬೇಕಾಗಿರುವುದು  ಮನುಷ್ಯ ಸಹಜ ಗುಣವಾಗಿದೆ. ಮಾನವನು ತನ್ನ ಮನಸ್ಸಿನ ಭಾವನೆಗಳನ್ನು ಮಾತಿನ ಮೂಲಕ ವ್ಯಕ್ತಪಡಿಸುತ್ತಾನೆ. ಮಾತನ್ನು ಲಿಪಿ ಸಹಿತ  ಲಿಖಿತ ರೂಪಕ್ಕೆ ತರುವುದೇ ಬರವಣಿಗೆ.. 

ಬರವಣಿಗೆಯು ಭಾಷೆಯನ್ನು ಓದುವಂತೆ ಮಾಡುವ ಸಾಧನ. ಬರವಣಿಗೆಯು ಮಕ್ಕಳ ಕಲಿಕೆಯ ಒಂದು ಭಾಗವಾಗಿದೆ. ಓದುವಿಕೆ, ಮಾತಿನ ಜೊತೆಗೆ ಜ್ಞಾನದ ಅಭಿವೃದ್ಧಿಗೆ ಬರವಣಿಗೆ ಅತಿ ಅಗತ್ಯ..

ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ್ಯವನ್ನು ಉತ್ತಮಪಡಿಸುವುದು ಶಿಕ್ಷಕರ ಮತ್ತು ಹೆತ್ತವರ ಜವಾಬ್ದಾರಿಯಾಗಿದೆ.ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎಂಬ ಗಾದೆ ಮಾತಿನಂತೆ, ಎಳೆಯ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳ ಕೈಬರಹವನ್ನು ಉತ್ತಮಪಡಿಸುವುದು ಅತಿ ಮುಖ್ಯವಾದ ಕೆಲಸ.

ಅಕ್ಷರಗಳನ್ನು ಬರೆಯುವ ಸರಿಯಾದ ಕ್ರಮವನ್ನು ವಿದ್ಯಾರ್ಥಿಗಳಿಗೆ ಕಲಿಸುವುದು ಅತಿ ಅಗತ್ಯ . ಅಕ್ಷರಗಳ ಮೇಲೆ ಮಣಿ, ಬೀಜಗಳನ್ನು ಇಟ್ಟು ಅಭ್ಯಾಸ ಮಾಡುವ ಮೂಲಕ, ಪುನಃ ಪುನಃ

ಅಕ್ಷರದ ಮೇಲೆ ಕೈಯಾಡಿಸುವ ಮೂಲಕ ಅಕ್ಷರವನ್ನು ಬರೆಯುವ ಸರಿಯಾದ ಕ್ರಮವನ್ನು ತಿಳಿದುಕೊಳ್ಳಬಹುದು. ಮಕ್ಕಳಿಗೆ ಸರಿಯಾಗಿ ಲೇಖನಿ ಹಿಡಿಯುವ ಕ್ರಮ, ಪ್ರತಿನಿತ್ಯ ಕಾಪಿ ಬರಿಸುವುದರಿಂದ ಕೈಬರಹ ಉತ್ತಮವಾಗುತ್ತದೆ..

ವಿದ್ಯಾರ್ಥಿಗಳಲ್ಲಿ ವರ್ಣಮಾಲೆ, ಗುಣಿತಾಕ್ಷರಗಳು, ಅಲ್ಪಪ್ರಾಣ, ಮಹಾಪ್ರಾಣಗಳ ಸ್ಪಷ್ಟ ಪರಿಚಯ ಇದ್ದಲ್ಲಿ ವಾಕ್ಯಗಳನ್ನು ಬರೆಯುವಾಗ ಯಾವುದೇ ದೋಷ ಉಂಟಾಗುವುದಿಲ್ಲ.

ಸುಂದರ, ಸ್ಪಷ್ಟ  ಕೈಬರಹ ಬರೆಯಲು ಪ್ರೋತ್ಸಾಹ ನೀಡಿ ಬಹುಮಾನವನ್ನು ಕೊಡುವುದರ ಮೂಲಕ ಮಕ್ಕಳಲ್ಲಿ ಅಂದವಾದ ಕೈಬರಹದ ಕೌಶಲವನ್ನು ಹೆಚ್ಚಿಸಬಹುದು. ಬರವಣಿಗೆಯು ಮಾನವನ ಪ್ರತಿಯೊಂದು ಹಂತದಲ್ಲಿ ಅದ್ಭುತವಾದ ಪರಿಣಾಮವನ್ನು ಬೀರುತ್ತದೆ. ಉತ್ತಮ ಕೈಬರಹ ಉನ್ನತವಾದ ಅಂಕ ಗಳಿಸುವಲ್ಲಿ ಅತ್ಯಂತ ಸಹಕಾರಿಯಾಗಿದೆ. ಸುಂದರವಾಗಿ ಅಕ್ಷರಗಳನ್ನು ಪದ , ವಾಕ್ಯ ರೂಪದಲ್ಲಿ ತಪ್ಪಿಲ್ಲದೆ ಸ್ಪಷ್ಟವಾಗಿ ಬರೆದಾಗ ನೋಡುಗನಿಗೂ ಅತ್ಯಂತ ಸಂತೋಷವಾಗುತ್ತದೆ.

ಪ್ರತಿಯೊಬ್ಬ ವಿದ್ಯಾರ್ಥಿಯು ಉತ್ತಮವಾದ ಕೈಬರಹವನ್ನು ರೂಢಿಸಿಕೊಂಡು ಬರವಣಿಗೆಯ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ಕೊಳ್ಳಬೇಕೆಂಬುದೇ ನಮ್ಮ ಆಶಯವಾಗಿದೆ.

✍️

ಇತ್ತೀಚಿನ ಸುದ್ದಿ

ಜಾಹೀರಾತು