ಇತ್ತೀಚಿನ ಸುದ್ದಿ
ಮಾನಸಿಕ ಖಿನ್ನತೆ: ಅಪ್ರಾಪ್ತ ವಯಸ್ಸಿನ ಬಾಲಕ ನೇಣು ಬಿಗಿದು ಸಾವಿಗೆ ಶರಣು
04/11/2022, 15:09

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಮಾನಸಿಕ ಖಿನ್ನತೆಯಿಂದ ವಿದ್ಯಾರ್ಥಿಯೊಬ್ಬ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕೋಡಿಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಕಾರ್ತಿಕ ಕಾಂಬಳೆ (16) ಎಂದು ಗುರುತಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮ ಕಾರ್ತಿಕ್ ಹೊಟ್ಟೆ ನೋವಿನಿಂದ ಬಳಲುತ್ತಿದ್ದ.
ಹೊಟ್ಟೆ ನೋವು ತಾಳಲಾದದೆ ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಂದೆ – ತಾಯಿ ಕಳೆದುಕೊಂಡಿದ್ದ ಕಾರ್ತಿಕ ಹೊಟ್ಟೆ ನೋವಿನಿಂದ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದ. ಸ್ಥಳಕ್ಕೆ ಕಾಗವಾಡ ಪೋಲಿಸರು ಬೇಟಿ ನೀಡಿ ಪರಶೀಲನೆ ನಡೆಸಿದ್ದಾರೆ.