9:43 AM Sunday29 - March 2026
ಬ್ರೇಕಿಂಗ್ ನ್ಯೂಸ್
ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ ಮಾಜಿ ಶಾಸಕರ ಪುತ್ರನ ಕೊಲೆ ಪ್ರಕರಣ: ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ ಹೈಕಮಾಂಡ್ ಹೇಳಿದಾಗ ಡಿಕೆಶಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ ಕಾಂಗ್ರೆಸ್ ಮೋಸ ಮಾಡಿದೆ; ನಾಮಪತ್ರ ಹಿಂತೆಗೆಯುವ ಮಾತೇ ಇಲ್ಲ: ತೊಡೆ ತಟ್ಟಿದ ಪೈಲ್ವಾನ್‌ ದಾವಣಗೆರೆ ದಕ್ಷಿಣ: ಬಿಜೆಪಿ ಅಭ್ಯರ್ಥಿಯ ಪತ್ನಿಗೆ ಮುಸ್ಲಿಂ ಮಹಿಳೆಯರಿಂದ ಭವ್ಯ ಸ್ವಾಗತ, ಉಡಿ…

ಇತ್ತೀಚಿನ ಸುದ್ದಿ

ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ಅಧಿಕಾರ ಸ್ವೀಕಾರ

07/09/2023, 20:53

ಮಂಗಳೂರು(reporterkarnataka.com): ಮಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಅನುಪಮ್ ಅಗರ್ವಾಲ್ ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಕಮಿಷನರ್ ಕುಲ್ ದೀಪ್ ಕುಮಾರ್ ಜೈನ್ ಅವರು ಅಧಿಕಾರ ಹಸ್ತಾಂತರಿಸಿದರು.
ಕುಲ್ ದೀಪ್ ಕುಮಾರ್ ಜೈನ್ ಅವರನ್ನು ವರ್ಗಾಯಿಸಿ
ಸರಕಾರ ಆದೇಶ ಹೊರಡಿಸಿತ್ತು. ಅಧಿಕಾರ ವಹಿಸಿಕೊಂಡ
ಕೇವಲ 5 ತಿಂಗಳಲ್ಲೇ ಜನಪರ ಕಾರ್ಯಕ್ಕೆ ಕುಲ್ ದೀಪ್ ಕುಮಾರ್ ಜೈನ್ ಅವರು ಜನಪ್ರಿಯರಾಗಿದ್ದರು. ಡ್ರಗ್ಸ್, ಮಟ್ಕಾ, ಜುಗಾರಿ, ರೌಡಿಸಂ ಮಟ್ಟ ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದರು. ಮಂಗಳೂರನ್ನು ಮಾದಕ ವಸ್ತುವಿನಿಂದ ಮುಕ್ತ ಗೊಳಿಸಿ ಡ್ರಗ್ಸ್ ಫ್ರೀ ಮಾಡುವ ಗುರಿಯನ್ನು ಕುಲ್ ದೀಪ್ ಹೊಂದಿದ್ದರು. ಹಾಗೆ ಮಟ್ಕಾ, ಜೂಜಿಗೆ ಕಡಿವಾಣ ಹಾಕಿದ್ದರು.
ಮಟ್ಕಾ, ಜೂಜು ಅಡ್ಡೆಗಳ ಮೇಲೆ‌ ನಿರಂತರ ದಾಳಿ ನಡೆಸಿದ್ದ ರು. ಡ್ರಗ್ಸ್, ಮಟ್ಕಾ ಮಾಫಿಯಾದ ಹಿಂದೆ ಬಿದ್ದಿದ್ದೇ ಕುಲ್ ದೀಪ್ ಅವರಿಗೆ ಮುಳುವಾಯಿತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.

ಇತ್ತೀಚಿನ ಸುದ್ದಿ

ಜಾಹೀರಾತು