ಇತ್ತೀಚಿನ ಸುದ್ದಿ
ಮಂಗಳೂರು, ಶಿವಾಜಿನಗರ ಸಹಿತ ರಾಜ್ಯದ 7 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧೆ ಇಲ್ಲ: ಮತ ವಿಭಜನೆ ತಪ್ಪಿಸಲು ನಿರ್ಧಾರ
27/03/2023, 11:19
ಬೆಂಗಳೂರು(reporterkarnataka.com):
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕ್ಷೇತ್ರ ಹಾಗೂ ಬೆಂಗಳೂರಿನ ಶಿವಾಜಿ ನಗರ ಕ್ಷೇತ್ರದಲ್ಲಿ ಸ್ಪರ್ಧಿಸದಿರಲಿ ಜಾತ್ಯತೀತ ಜನತಾ ದಳ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಪ್ರತಿನಿಧಿಸುವ ಮಂಗಳೂರು ಕ್ಷೇತ್ರ ಹಾಗೂ ರಿಜ್ವಾನ್ ಆರ್ಶದ್ ಶಾಸಕರಾಗಿರುವ ಬೆಂಗಳೂರಿನ ಶಿವಾಜಿನಗರ ವಿಧಾನಸಭಾ ಕ್ಷೇತ್ರ,ದಲ್ಲಿ ಸ್ಪರ್ಧಿಸದಿರಲು ಪಕ್ಷ ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಮುಸ್ಲಿಂ ಧರ್ಮ ಗುರುಗಳ ವಿನಂತಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಸಂದರ್ಭದಲ್ಲಿ ಮತಗಳು ವಿಭಜನೆಗೆ ಅವಕಾಶ ಸಿಗಬಾರದು ಎಂದು ಧರ್ಮ ಗುರುಗಳು ಜೆಡಿಎಸ್ ಮುಖಂಡರನ್ನು ವಿನಂತಿ ಮಾಡಿದ್ದರು ಎನ್ನಲಾಗಿದೆ. ಒಟ್ಟು ರಾಜ್ಯದ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನುಕಣಕ್ಕಿಳಿಸದಿರಲು ಜಾತ್ಯತೀತ ಜನತಾದಳ ನಿರ್ಧರಿಸಿದೆ.














