ಇತ್ತೀಚಿನ ಸುದ್ದಿ
ಮಂಗಳೂರು: ಪಾಲ್ದನೆ ಚರ್ಚ್ ನಲ್ಲಿ ಸಂತ ವಿನ್ಸೆಂಟ್ ಪಾವ್ಲ್ ಸಭಾ ವಾರ್ಷಿಕ ಹಬ್ಬ
29/09/2024, 19:46
ಮಂಗಳೂರು(reporterkarnataka.com): ಪಾಲ್ದನೆ ಸಂತ ತೆರೆಸಾ ಚರ್ಚಿನ ಸಂತ ವಿನ್ಸೆಂಟ್ ಪಾವ್ಲ್ ಸಭಾ ಇದರ ವಾರ್ಷಿಕ ಹಬ್ಬವನ್ನು ಭಾನುವಾರ ಆಚರಿಸಲಾಯಿತು. ಪ್ರಾರಂಭದಲ್ಲಿ ಬಲಿಪೂಜೆಯನ್ನು ಚರ್ಚಿನ ಪ್ರಧಾನ ಧರ್ಮಗುರು ಫಾ. ಅಲ್ಬನ್ ಡಿ’ಸೋಜಾ ಅವರು ನೆರವೇರಿಸಿದರು. ಸಂತ ವಿನ್ಸೆಂಟ್ ಪಾವ್ಲ್ ಸಭಾ ಸಂಘಟನೆಯ ಕಾರ್ಯಕರ್ತರು ಭಕ್ತ ಜನರಿಂದ ದೇಣಿಗೆ ಸಂಗ್ರಹಿಸಿ ಚರ್ಚಿನ ಬಡ ಕುಟುಂಬಗಳಿಗೆ ಮನೆ ದುರಸ್ತಿ, ಮಕ್ಕಳ ಶಿಕ್ಷಣ, ವೈದ್ಯಕೀಯ ನೆರವು ಇತ್ಯಾದಿ ಸೇವಾ ಕಾರ್ಯಗಳನ್ನು ನಿಸ್ವಾರ್ಥ ಮನೋಭಾವದಿಂದ ಕಾಳಜಿ ವಹಿಸಿ ನಿರ್ವಹಿಸುತ್ತಾರೆ ಎಂದವರು ಅಭಿನಂದಿಸಿದರು.
ಬಲಿಪೂಜೆಯಲ್ಲಿ ಫಾ. ಅಶೋಕ್ ಡಿ’ಸೋಜಾ, ಸಂತ ವಿನ್ಸೆಂಟ್ ಪಾವ್ಲ್ ಸಭಾ ಅಧ್ಯಕ್ಷ ಜೊಸ್ಲಿನ್ ಲೋಬೊ, ಉಪಾಧ್ಯಕ್ಷೆ ಲಿಝಿ ಫೆರ್ನಾಂಡಿಸ್, ಕಾರ್ಯದರ್ಶಿ ಆಗ್ನೆಸ್ ಡಿ’ಸಿಲ್ವಾ, ಖಜಾಚಿ ಪಾಸ್ಕಲ್ ಮೊಂತೇರೊ, ಸದಸ್ಯರಾದ ಚಾರ್ಲ್ಸ್ ಪಿಂಟೊ, ಫೆಲಿಕ್ಸ್ ಕ್ಯಾಸ್ತಲಿನೊ, ವಿನ್ಸೆಂಟ್ ಪಿಂಟೊ, ಬೆನೆಡಿಕ್ಟಾ ಡಿ’ಕುನ್ಹಾ, ರಿಚಾರ್ಡ್ ಫೆರ್ನಾಂಡಿಸ್ ಹಾಗೂ ಚರ್ಚಿನ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.