ಇತ್ತೀಚಿನ ಸುದ್ದಿ
ಹವಾಮಾನ ವೈಪರೀತ್ಯ: ಮಲ್ಪೆಯ 2 ಬೋಟ್ ಮುಳುಗಡೆ; ಕೋಟ್ಯಾಂತರ ರೂ. ನಷ್ಟ; 7 ಮಂದಿ ಮೀನುಗಾರರ ರಕ್ಷಣೆ
18/11/2021, 10:46

ಉಡುಪಿ(reporterkarnataka.com): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಚಂಡಮಾರುತದ ಹಿನ್ನೆಲೆಯಲ್ಲಿ ಅರಬ್ಬಿ ಸಮುದ್ರದಲ್ಲೂ ಗಾಳಿಯ ಒತ್ತಡದಿಂದ ಹಾಗು ಅಲೆಗಳ ಬೋರ್ಗರೆತ ಹೆಚ್ಚುತ್ತಿದ್ದು, ಅಲೆಗಳ ಹೊಡೆತಕ್ಕೆ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಮುಳುಗಡೆಯಾಗಿದೆ. ಗೋವಾ, ಪಣಜಿಯಲ್ಲಿ ಸಮುದ್ರ ವ್ಯಾಪ್ತಿಯಲ್ಲಿ ಬೋಟ್ ಮುಳುಗಡೆಯಾಗಿದ್ದು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ
ಮಾತಾ ಜಟಗೇಶ್ವರ, ಪಲ್ಲಕ್ ಹೆಸರಿನ ಬೋಟ್ ಗಳು ಮಲ್ಪೆಯಿಂದ ಗೋವಾದತ್ತ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಅಲೆಗಳ ಅಬ್ಬರ ಜಾಸ್ತಿಯಾಗಿತ್ತು. ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ. ಇದರಿಂದಾಗಿ ಮುಳುಗಡೆಯಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ . ಕಡಲ ಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು ಇದನ್ನೂ ಸಹ ರಕ್ಷಣೆ ಮಾಡಲಾಗಿದೆ.