ಇತ್ತೀಚಿನ ಸುದ್ದಿ
ಮಲ್ಲೂರು: 90 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಚಾಲನೆ
16/01/2023, 22:32

ಮಲ್ಲೂರು(reporterkarnataka.com): ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 12ಕ್ಕೂ ಅಧಿಕ ಕಡೆ 90 ಲಕ್ಷ ರೂ.ವೆಚ್ಚದಲ್ಲಿ ವಿವಿಧ ಜನಪರ ಅಭಿವೃದ್ಧಿ ಕಾಮಗಾರಿ ನಡೆಸಲು ಶಾಸಕ ಡಾ.ಭರತ್ ಶೆಟ್ಟಿ ವೈ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಬಿಜೆಪಿ ಮುಖಂಡ ಸುಹಾನ್ ಆಳ್ವ ಅವರು ಮಾತನಾಡಿ, ಶಾಸಕರು ಅಂದಾಜು 3 ಕೋಟಿ ರೂ. ಅನುದಾನ ಈ ಗ್ರಾಮಕ್ಕೆ ನೀಡಿದ್ದಾರೆ. 5 ಲಕ್ಷ ರೂ.ಶ್ಮಶಾನ ಅಭಿವೃದ್ಧಿಗೂ ನೀಡುವುದಾಗಿ ಹೇಳಿದ್ದಾರೆ. ಗ್ರಾಮಸ್ಥರ ಪರವಾಗಿ ಶಾಸಕರನ್ನು ಅಭಿನಂದಿಸುವುದಾಗಿ ಹೇಳಿದರು.
ಈ ಸಂದರ್ಭ ಅಭಿವೃದ್ಧಿ ಕಾಮಗಾರಿ ನಡೆಸಲು ಜನರ ಸಹಕಾರವಿದ್ದಾಗ ಸಾಧ್ಯವಾಗುತ್ತದೆ. ಜನರ ಬಹುಬೇಡಿಕೆಯ ಕುಡಿಯುವ ನೀರಿನ ಯೋಜನೆ ಜಲಜೀವನ್ ಮಿಷನ್ ಕಾಮಗಾರಿ ಪ್ರಗತಿಯಲ್ಲಿದೆ. ಬೋರ್ ವೆಲ್ ಜತೆಗೆ ಬಹುಗ್ರಾಮ ಕುಡಿಯುವ ನೀರಿಗೆ ಯೋಜನೆಗೆ ಬಂಟ್ವಾಳ, ಮೂಲ್ಕಿ ಮೂಡಬಿದ್ರೆ ಕ್ಷೇತ್ರ ಶಾಸಕರ ಸಹಿತ ಹೆಚ್ಚುವರಿಯಾಗಿ ಅನುದಾನ ಪಡೆದು ನದಿಯಿಂದ ಕುಡಿಯುವ ನೀರಿನ ಸಂಪರ್ಕ ಯೋಜನೆಗೆ ಒತ್ತು ನೀಡಲಾಗಿದೆ.ಇದರಿಂದ ನೀರಿನ ಕೊರತೆ ನಿವಾರಿಸಬಹುದಾಗಿದೆ ಎಂದರು.
ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ.ಎ. ಇಸ್ಮಾಯಿಲ್, ಪಂಚಾಯತ್ ಸದಸ್ಯೆ ಸುಮಾ ಶೆಟ್ಟಿ,ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಗೋಕುಲ್ ದಾಸ್ ಶೆಟ್ಟಿ, ಶಕ್ತಿ ಕೇಂದ್ರ ಪ್ರಮುಖ್ ಸುಹಾನ್ ಆಳ್ವ,ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು, ಗ್ರಾಮದ ಜನರು ಉಪಸ್ಥಿತರಿದ್ದರು.