ಇತ್ತೀಚಿನ ಸುದ್ದಿ
ಮಲೆನಾಡಿನಲ್ಲಿ ಮುಂದುವರಿದ ರಣಭೀಕರ ಮಳೆ: ಮೂಡಿಗೆರೆ ಸಮೀಪ ಮನೆ ಸಂಪೂರ್ಣ ಕುಸಿತ
25/07/2023, 11:44

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಳೆದ ಹಲವು ದಿನಗಳಿಂದ ಅವ್ಯಾಹತವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಾಲುಮರ ಗ್ರಾಮದಲ್ಲಿ ಮನೆಯೊಂದು ಸಂಪೂರ್ಣ ಕುಸಿದು ಬಿದ್ದಿದೆ.
ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಈರಯ್ಯ ಎಂಬವರ ಮನೆ ಧರಾಶಾಹಿಯಾಗಿದೆ. ಭಾರೀ ಮಳೆಗೆ ಮನೆ ಕುಸಿತವಾಗಿದೆ.
ಮಲೆನಾಡಿನಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ರಣ ಮಳೆಯಿಂದ ಈಗಾಗಲೇ ಹಲವು ಮನೆ, ಮರ, ವಿದ್ಯುತ್ ಕಂಬ ಧರೆಗುರುಳಿವೆ. ಜಿಲ್ಲೆಯ ಎಲ್ಲ ಪ್ರಮುಖ ನದಿಗಳು,ಉಪ ನದಿಗಳು, ಹಳ್ಳ- ಕೊಳ್ಳ ಉಕ್ಕಿ ಹರಿಯುತ್ತಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ಮನೆ ಗೋಡೆ, ಮೇಲ್ಚಾವಣಿ ಕುಸಿತವಾಗಿದೆ.