ಇತ್ತೀಚಿನ ಸುದ್ದಿ
ಮಲೆನಾಡಿನಲ್ಲಿ ಹೆಚ್ಚುತ್ತಿರುವ ಕಾಡಾನೆ ದಾಂಧಲೆ: ಮೇಯಲು ಕಟ್ಟಿ ಹಾಕಿದ್ದ ಹಸು ಸ್ಥಳದಲ್ಲೇ ಸಾವು
15/07/2023, 22:37
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಮಾವಿನಕುಡಿಗೆ ಗ್ರಾಮದಲ್ಲಿ ಕಾಡಾನೆ ದಾಳಿಗೆ ಮೇಯಲು ಕಟ್ಟಿಹಾಕಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.
ಬೋಬೇಗೌಡ ಎಂಬುವರ ತೋಟದಲ್ಲಿ ಕಾಡಾನೆ ದಾಂಧಲೆ ನಡೆಸಿ ಹಸುವನ್ನು ಸಾಯಿಸಿದೆ. ತೋಟದಲ್ಲಿ ಅಡಿಕೆ-ತೆಂಗಿನ ಮರಗಳನ್ನ ಬುಡಸಮೇತ ಕಿತ್ತು ಹಾಕಿದೆ. ಸ್ಥಳಕ್ಕೆ ಪಶು ವೈದ್ಯ, ಅರಣ್ಯ ಅಧಿಕಾರಿಗಳ ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಮಲೆನಾಡಲ್ಲಿ ದಿನದಿಂದ ದಿನಕ್ಕೆ ಕಾಡಾನೆ ದಾಂಧಲೆ
ಹೆಚ್ಚುತ್ತಿದ್ದು, ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾಡಾನೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ.