ಇತ್ತೀಚಿನ ಸುದ್ದಿ
ಮಲೆನಾಡಿನಲ್ಲಿ ಅಬ್ಬರದ ಗಾಳಿ- ಮಳೆ: ಬಾಳೂರು ಸಮೀಪ ರಸ್ತೆಗೆ ಉರುಳಿದ ಮರ; ಹೊರನಾಡು ಸಂಪರ್ಕ ಕಡಿತ
19/07/2023, 14:38
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಲ್ಲಿ ಮುಂದುವರಿದ ಅಬ್ಬರದ ಗಾಳಿ ಮಳೆಗೆ ಹೊರನಾಡು-ಕೊಟ್ಟಿಗೆಹಾರ ಮಧ್ಯದ ಬಾಳೂರು ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಉರುಳಿದ ಬಿದ್ದ ಪರಿಣಾಮ
ಮಲೆನಾಡಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ. ರಸ್ತೆಗೆ ಮರ ಬಿದ್ದ ಪರಿಣಾಮ ಹೊರನಾಡು ಸಂಪರ್ಕ ಒಂದು ತಾಸಿಗೂ ಅಧಿಕ ಕಾಲ ಸ್ಥಗಿತಗೊಂಡಿತು.
ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ ಹಾಗೂ ಸ್ಥಳೀಯರಿಂದ ಮರವನ್ನುತೆರವುಗೊಳಿಸಲಾಯಿತು. ಮಳೆ ಮಧ್ಯೆಯೂ ಮರ ತೆರವು ಕಾರ್ಯ ನಡೆಸಲಾಯಿತು.