ಇತ್ತೀಚಿನ ಸುದ್ದಿ
ಮಲೆ ಮಹಾದೇಶ್ವರ ಬೆಟ್ಟಕ್ಕೆ ಮಹಿಳಾ ಭಕ್ತರ ದಂಡು: ಟ್ರಾಫಿಕ್ ಜಾಮ್; 5 ಕಿಮೀಗೂ ಹೆಚ್ಚು ಉದ್ದಕ್ಕೆ ವಾಹನಗಳ ಸಾಲು
21/06/2023, 13:45
ಶ್ರುತಿ ಹಾನಗಲ್ ಚಾಮರಾಜನಗರ
info.reporterkarnataka@gmail.com
ಸಾಮಾನ್ಯವಾಗಿ ಭಕ್ತರಿಂದ ತುಂಬಿ ತುಳುಕುತ್ತಿರುವ ಮಲೆ ಮಹಾದೇಶ್ವರ ಬೆಟ್ಟಕ್ಕೆ ಶಕ್ತಿ ಯೋಜನೆ ಅನುಷ್ಠಾನಗೊಂಡ ಬಳಿಕ ಯಾತ್ರಿಕರ ಸಂಖ್ಯೆ 4 ಪಟ್ಟು ಜಾಸ್ತಿಯಾಗಿದ್ದು, 5 ಕಿಮೀ ಉದ್ದಕ್ಕೆ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಮಹಿಳೆಯರಿಗೆ ಉಚಿತ ಬಸ್ ಯಾನ ಬಳಿಕ ಮಲೆ ಮಹಾದೇಶ್ವರ ಸ್ವಾಮಿಗೆ ಬೇಡಿಕೆ ಇನ್ನಷ್ಟು ಜಾಸ್ತಿಯಾಗಿದೆ. ಮಹಿಳಾ ಯಾತ್ರಾರ್ಥಿಗಳ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಬೆಟ್ಟವೇರುವ ಪ್ರತಿಯೊಂದು ಬಸ್ಸುಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಸರಕಾರ ಉಚಿತ ಬಸ್ ಪ್ರಯಾಣವನ್ನೇನೊ ಮಹಿಳೆಯರಿಗೆ ಕಲ್ಪಿಸಿದೆ. ಆದರೆ ಬಸ್ಸಿನ ಸಂಖ್ಯೆಯನ್ನು ಹೆಚ್ಚಿಸಿಲ್ಲ ಎಂದು ಭಕ್ತಾಧಿಗಳು ಆಡಿಕೊಳ್ಳುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಿಂದ ನಿರ್ಗಮಿಸಲು ಯಾತ್ರಿಕರು ಬಸ್ಸುಗಳಿಗೆ ಮುಗಿಬೀಳುತ್ತಾರೆ. ಕಿಟಕಿ ಮೂಲಕ ಬಸ್ಸೇರುವುದು, ಚಾಲಕನ ಸೀಟು ಬಳಿಯ ಡೋರ್ ಮೂಲಕ ಬಸ್ ಹತ್ತುವ ದೃಶ್ಯಗಳು ಸಾಮಾನ್ಯವಾಗಿದೆ. ಜಗಳ, ಕಾದಾಟ, ಬೈಗಳು ಕೂಡ ಪರಸ್ಪರ ವಿನಿಮಯವಾಗುತ್ತದೆ.
ಖಾಸಗಿ ವಾಹನಗಳ,ಕಾರು ಬೈಕ್ ಸಂಖ್ಯೆಯೂ ಅತ್ಯಧಿಕವಾಗಿದೆ.
ಹನೂರು ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಈ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಣ್ಣೆತ್ತಿನ ಅಮವಾಸ್ಯೆ ವಿಶೇಷವಾಗಿ ಸಹಸ್ರಾರರು ಭಕ್ತಸಾಗರ ಹರಿದು ಬರುತ್ತಿದ್ದರು.














