ಇತ್ತೀಚಿನ ಸುದ್ದಿ
ಮಾಲವಿ: ಎಂಎಸ್ ಐಎಲ್ ಮದ್ಯ ಮಾರಾಟ ರದ್ದುಗೊಳಿಸುವಂತೆ ಗ್ರಾಮಸ್ಥರ ಬೃಹತ್ ಪ್ರತಿಭಟನೆ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
12/01/2024, 21:32

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದಲ್ಲಿ ಎಂಎಸ್ ಐಎಲ್ ಮದ್ಯ ಮಾರಾಟ ರದ್ದುಗೊಳಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಮಾಲವಿ ಗ್ರಾಮಸ್ಥರು ಜ11ರಂದು, ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಅಬಕಾರಿ ಇಲಾಖಾಧಿಕಾರಿಗೆ ಮನವಿ ಮಾಡಿದ್ದಾರೆ. ಮದ್ಯ ಮಾರಾಟ ಮಳಿಗೆ ಪ್ರಾರಂಭಿಸುವ ಮುನ್ನದಿಂದಲೂ ತಾವು ಪ್ರತಿಭಟಿಸುತ್ತಲಿದ್ದು, ಗ್ರಾಮಸ್ಥರ ವಿರೋಧದ ನಡುವೆಯೂ ಅರಂಭಿಸಲಾಗಿದೆ. ಎಂಎಸ್ ಐಎಲ್ ಮದ್ಯ ಮಾರಾಟ ಮಳಿಗೆ ಸಾರ್ವಜನಿಕ ಸ್ಥಳಗಳಿಗೆ ಹೊಂದಿಕೊಂಡಿದ್ದು, ಮಹಿಳೆಯರಿಗೆ ಸಭ್ಯಸ್ಥರಿಗೆ ಹಿರಿಯ ನಾಗರೀಕರಿಗೆ ಮುಜುಗರ ಉಂಟು ಮಾಡಲಿದೆ. ಮದ್ಯ ಮಾರಾಟ ಮಳಿಗೆ ಸುತ್ತ ಮುತ್ತಲ ವಾತಾವರಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗಿದೆ. ಇದು ನಾಗರೀಕರ ನೆಮ್ಮದಿ ಹಾಳು ಮಾಡಿದ್ದು, ಶೀಘ್ರವೇ ಅದನ್ನು ರದ್ಧುಗೊಳಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ನೂರಾರು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮಸ್ಥರು ರಾಜ್ಯ ಮಹಿಳಾ ಒಕ್ಕೂಟ ಕಾರ್ಯಕರ್ತರಾದ ತ್ರಿವೇಣಿ, ನೀಲಮ್ಮ, ಗ್ರಾಕುಸ್ ತಾಲೂಕು ಕಾರ್ಯಕರ್ತರಾದ ಕೊಟ್ರಮ್ಮ,ಶೈನಾಜ್, ಸುಧಾ, ಸುಮಾ, ಯಾಳ್ಯಾ ಚನ್ನಬಸಪ್ಪ, ಚಿಲುಗೋಡು ಸುರೇಶ್, ಮಂಜುನಾಥ, ಈಶಪ್ಪ ರೆಡ್ಡಿ, ಸುರೇಶ, ಬಂಡ್ರಿ ಕೊಟ್ರಪ್ಪ, ಕೋಟಗಿ ನಾಗರಾಜ್, ಗಾಣಿಗರ ನಾಗರಾಜ್, ತಳವಾರ ನಾಗಮ್ಮ, ಮಣಿಗಾರ ನಾಗಮ್ಮ, ಬಸಮ್ಮ, ಶಿಲ್ಪಾ, ಯಾಳ್ಯಾ ಸಣ್ಣಕ್ಕ, ಮಣಗಾರ್ ಸಾಕವ್ವ, ಮಂಜುಳ, ನೀಲಮ್ಮ, ಶ್ಯಾಮಲ, ಟಿ.ಹುಲಿಗೆಮ್ಮ, ಟಿ. ನಾಗಮ್ಮ ,ಸಾಕಮ್ಮ, ಪಾರ್ವತಿ, ನೇತ್ರಾವತಿ, ಅಂಜಿನಮ್ಮ, ರೇಣುಕಮ್ಮ, ಪ್ರಕಾಶ, , ನೀಲಮ್ಮ, ಮಾಲಾವಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ದುರುಗಪ್ಪ, ಕೊಂಬಲಿ ಹುಲುಗಪ್ಪ, ಗೊರಪ್ಪ, ಬುಡೆನ್ಸಾಬ್, ಟಿ.ಅಂಜಿನಪ್ಪ ಸೇರಿದಂತೆ. ಮಾಲವಿ ಗ್ರಾಮದ ಮಹಿಳೆಯರು, ಯುವಕರು, ಹಿರಿಯರು, ಗ್ರಾಮಸ ಹಿರಿಯ ಮುಖಂಡರು ಹಾಗೂ ಮತ್ತಿತರರು ಇದ್ದರು.