ಇತ್ತೀಚಿನ ಸುದ್ದಿ
ಮಳಲಿ ಮಸೀದಿ: ನ್ಯಾಯಾಲಯದ ತೀರ್ಪು ಬರಲಿ, ಬಳಿಕ ಮುಂದಿನ ಹೆಜ್ಜೆ: ಶಾಸಕ ಡಾ. ಭರತ್ ಶೆಟ್ಟಿ
04/02/2024, 11:18
ಮಂಗಳೂರು(reporterkarnataka.com): ಮಳಲಿ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ಮಂದಿರದ ಕುರುಹು ಕಂಡು ಬಂದ ಬಳಿಕ ಪ್ರಕರಣ ನ್ಯಾಯಾಲಯದಲ್ಲಿದ್ದು, ತೀರ್ಪಿಗಾಗಿ ಕಾಯಲಾಗುತ್ತಿದೆ. ತೀರ್ಪಿನ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ನ್ಯಾಯಾಲಯದ ತೀರ್ಪಿಗೆ ಗೌರವ ನೀಡಿ ಯಥಾಸ್ಥಿತಿ ಕಾಯ್ದುಕೊಂಡಿದ್ದೇವೆ.
ವಕ್ಫ್ ಬೋರ್ಡ್ ಇದೀಗ ಮಧ್ಯ ಪ್ರವೇಶ ಮಾಡುವ ಮೂಲಕ ಸರಕಾರವೇ ಇದರ ಹಿಂದೆ ನಿಲ್ಲುವಂತೆ ಕಾಣುತ್ತಿದೆ.
ತೀರ್ಪು ಬರುವ ಮೊದಲೇ ನಾವು ಮಸೀದಿ ಅದೇ ಸ್ಥಳದಲ್ಲಿ ಕಟ್ಟುತ್ತೇವೆ ಎನ್ನುವ ಹೇಳಿಕೆ ಸಮಂಜಸವಲ್ಲ.
ಬೋರ್ಡ್ ಅಧ್ಯಕ್ಷರು ಅತುರದ ತೀರ್ಮಾನ ಕೈಗೊಂಡು ಹೇಳಿಕೆ ನೀಡಿದಂತಿದೆ. ನ್ಯಾಯಲಯದಿಂದ ಇದರ ಬಗ್ಗೆ ವ್ಯತಿರಿಕ್ತವಾಗಿ ತೀರ್ಪು ಬಂದರೆ ಸರಕಾರವೇ ಮುಂದಿನ ಗೊಂದಲಕ್ಕೆ ಕಾರಣವಾಗಬಹುದು.
ನಮ್ಮ ನಿಲುವು ಸ್ಪಷ್ಟವಾಗಿದೆ ನ್ಯಾಯಯುತವಾಗಿ ನಾವು ಈ ವಿಚಾರದಲ್ಲಿ ಹೆಜ್ಜೆ ಇಡಲಿದ್ದೇವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.