8:40 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ಮಕ್ಕಳಲ್ಲಿ ಸ್ಥೂಲಕಾಯತೆ: ಅನಾರೋಗ್ಯಕರ ಆಹಾರ ಸೇವನೆ ಇದಕ್ಕೆ ಕಾರಣವೇ? ತಡೆ ಗಟ್ಟು ವುದು ಹೇಗೆ?

19/03/2022, 00:56

ಮಕ್ಕಳಲ್ಲಿ ಕಂಡು ಬರುವ ಸ್ಥೂಲಕಾಯತೆಯು ಇತ್ತೀಚೆಗಿನ ಗಂಭೀರವಾದ ಸಮಸ್ಯೆಯಾಗಿದೆ. ಬೊಜ್ಜು ಹೊಂದಿರುವ ಮಕ್ಕಳು ತಮ್ಮ ವಯಸ್ಸು ಮತ್ತು ಎತ್ತರಕ್ಕೆ ಸಾಮಾನ್ಯ ತೂಕಕ್ಕಿಂತ ಹೆಚ್ಚಿರುತ್ತಾರೆ. ಬಾಲ್ಯದ ಸ್ಥೂಲಕಾಯತೆಯು ಆರೋಗ್ಯ ಸಮಸ್ಯೆಗಳಾದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ನಂತಹ ಖಾಯಿಲೆಗಳು ಶುರುವಾಗಲು ಕಾರಣವಾಗುತ್ತದೆ. 

ಹಾಗಾಗಿ ಇಡೀ ಕುಟುಂಬದ ಆಹಾರ ಮತ್ತು ವ್ಯಾಯಾಮದ ಅಭ್ಯಾಸವನ್ನು ಸುಧಾರಿಸುವುದು ಬಾಲ್ಯದ ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಉತ್ತಮ ತಂತ್ರಗಳಲ್ಲಿ ಒಂದಾಗಿದೆ. ಬಾಲ್ಯದ ಸ್ಥೂಲಕಾಯತೆಯನ್ನು ತಡೆಗಟ್ಟುವುದು ನಿಮ್ಮ ಮಗುವಿನ  ಭವಿಷ್ಯದ  ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ.


ಕಾರಣಗಳು ಏನು?:

●ಅನುವಂಶಿಕತೆ : ಪೋಷಕರಲ್ಲಿ ಇಬ್ಬರೂ ಅಥವ ಒಬ್ಬರು, ಸ್ಥೂಲಕಾಯತೆಯನ್ನು ಹೊಂದಿದ್ದರೂ ಸಹ  ಮಗುವಿಗೆ ಬರುವ ಸಾಧ್ಯತೆ ಇರುತ್ತದೆ 

●ಅನಾರೋಗ್ಯಕರ ಆಹಾರವನ್ನು ಸೇವನೆ: ಕ್ಯಾಲೋರಿ-ಸಮೃದ್ಧವಾಗಿರುವ ಆಹಾರಗಳನ್ನು ತಿನ್ನುವುದು ಆದರೆ ಪೌಷ್ಟಿಕಾಂಶದ ಕೊರತೆ ಹೊಂದಿರುವ ಆಹಾರ ಸೇವನೆ (ಜಂಕ್ ಫುಡ್ )

●ದೈಹಿಕ ವ್ಯಾಯಾಮದ ಕೊರತೆ: ಟಿವಿ, ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲೆ ಆಟವಾಡುವುದರಿಂದಾಗಿ ದೇಹಕ್ಕೆ ವ್ಯಾಯಾಮದ ಕೊರತೆ 

●ಕೆಲವೊಂದು ಆರೋಗ್ಯ ಸಮಸ್ಯೆ: ಹೈಪೋಥೈರಾಯ್ಡಿಸಮ್‌ನಂತಹ ಹಾರ್ಮೋನ್ ಗೆ  ಸಂಬಂಧಪಟ್ಟ ಖಾಯಿಲೆಗಳು 

●ಔಷಧಿಗಳು: ಸ್ಟಿರಾಯ್ಡ್ಗಳು, ಕೆಲವು ಖಿನ್ನತೆಗೆ ಸಂಬಂಧಪಟ್ಟ ಔಷಧಿಗಳ ಸೇವನೆ.

ಮಕ್ಕಳ ಸ್ಥೂಲಕಾಯತೆಯ ಲಕ್ಷಣಗಳು :

    ●ದೇಹದ ವಿವಿಧ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆ. 

    ●ಅತಿಯಾಗಿ ತಿನ್ನುವುದು

    ●ಉಸಿರಾಟದ ತೊಂದರೆ

    ●ಹೆಣ್ಣು ಮಕ್ಕಳಲ್ಲಿ  ಅನಿಯಮಿತವಾಗಿ ಮುಟ್ಟು 

    ●ಮಾನಸಿಕವಾಗಿ ಹಿಂಜರಿಕೆ ಅಥವಾ  ದುರ್ಬಲರಾಗಿರುವುದು 

ಬೊಜ್ಜು ಹೊಂದಿರುವ ಮಕ್ಕಳು ವಯಸ್ಕರಾದಾಗ  ಕಂಡುಬರಬಹುದಾದ ಆರೋಗ್ಯ ಸಮಸ್ಯೆಗಳು : 

    ●ಮಧುಮೇಹ.

    ●ಅಧಿಕ ರಕ್ತದೊತ್ತಡ (High B.P)

    ●ಅಧಿಕ ರಕ್ತದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳು ಹೃದಯ ಕಾಯಿಲೆ, ಹೃದಯಾಘಾತ 

    ●ಪಾರ್ಶ್ವವಾಯು 

    ●ಮೂಳೆ ಮತ್ತು ಕೀಲು ಸಮಸ್ಯೆಗಳು – ಹೆಚ್ಚಿನ ತೂಕವು ಮೂಳೆಗಳು ಮತ್ತು ಕೀಲುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. 

ಬಾಲ್ಯದ ಸ್ಥೂಲಕಾಯತೆಯನ್ನು ಹೇಗೆ ನಿರ್ಣಯಿಸಲಾಗುತ್ತದೆ?

    ●ಬಾಡಿ ಮಾಸ್ ಇಂಡೆಕ್ಸ್ (BMI) ನ ಮೂಲಕ  ಸ್ಥೂಲಕಾಯತೆಯ ಮಟ್ಟವನ್ನು ಅಳೆಯಲಾಗುತ್ತದೆ.  30ಕ್ಕಿಂತ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ ಅನ್ನು ಬೊಜ್ಜು ಎಂದು ಪರಿಗಣಿಸಲಾಗುತ್ತದೆ.  

    ●ರಕ್ತ ಪರೀಕ್ಷೆಗಳು

    ●ಕೊಲೆಸ್ಟ್ರಾಲ್ ಪರೀಕ್ಷೆ

    ●ರಕ್ತದ ಸಕ್ಕರೆ ಪರೀಕ್ಷೆ

    ●ಹಾರ್ಮೋನ್ ಅಸಮತೋಲನ, ವಿಟಮಿನ್ ಡಿ ಕೊರತೆ ಅಥವಾ ಸ್ಥೂಲಕಾಯತೆಗೆ ಸಂಬಂಧಿಸಿದ ರಕ್ತ ಪರೀಕ್ಷೆಗಳು.

ಬಾಲ್ಯದ ಸ್ಥೂಲಕಾಯತೆಯನ್ನು ಹೇಗೆ ಕಡಿಮೆ ಮಾಡಬಹುದು?

ಮಕ್ಕಳು ಮತ್ತು ಹದಿಹರೆಯದವರಲ್ಲಿ ಸ್ಥೂಲಕಾಯತೆಯು ಮಗುವಿನ ತೂಕ ನಿರ್ವಹಣೆಯಲ್ಲಿ ಪೋಷಕರ ಬೆಂಬಲ ಅತೀ  ಮಹತ್ವವಾಗಿದೆ.

    ●ಆಹಾರ ಹವ್ಯಾಸದಲ್ಲಿ ಮಾರ್ಪಡು : ಆರೋಗ್ಯಕರವಾದ ಆಹಾರ ಸೇವನೆ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಯುಕ್ತ ಆಹಾರ ಸೇವನೆ ಮಾಡಲು ಪ್ರೋತ್ಸಾಹನೀಡುವುದು ಮುಖ್ಯವಾಗಿದೆ.ಹೆಚ್ಚಿನ ಫೈಬರ್ ಅಂಶ ಹೊಂದಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು .  ತರಕಾರಿಗಳು, ಹಣ್ಣುಗಳು, ಬೀನ್ಸ್ ಮತ್ತು ಧಾನ್ಯಗಳು ಹೆಚ್ಚಿನ ಫೈಬರ್ಗಳನ್ನು ಹೊಂದಿರುತ್ತವೆ, ಇದು ಕರುಳಿನಿಂದ ಕಾರ್ಬೋಹೈಡ್ರೇಟ್ಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.

 ಉತ್ಕರ್ಷಣ ನಿರೋಧಕಗಳನ್ನು (Antioxidant)             ಹೊಂದಿರುವ ಕೆಂಪು, ಹಳದಿ ಮತ್ತು ಕಿತ್ತಳೆ ಹಣ್ಣುಗಳನ್ನು ಸೇವಿಸಬೇಕು.

ಮಾಂಸಾಹಾರ ಸೇವನೆ ತ್ಯಜಿಸುವುದು: ಇವುಗಳಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿದ್ದು, ಸ್ಥೂಲಕಾಯತೆಯ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು.

ಅಧಿಕ ನೀರಿನ ಸೇವನೆ : ಹೆಚ್ಚು ನೀರನ್ನು ಕುಡಿಯುದರಿಂದ ಚಯಾಪಚಯ ಕ್ರೀಯೆಯು ಹೆಚ್ಚಿ ಕ್ಯಾಲೊರಿಗಳನ್ನು ವ್ಯಯಿಸಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.    ತಿಂಡಿಗಳನ್ನು ಆಯ್ಕೆ ಮಾಡುವಾಗ ಎಣ್ಣೆಯಲ್ಲಿ ಅಥವಾ ಬೆಣ್ಣೆಯಲ್ಲಿ ಕರಿದ ಆಹಾರ ತೆಗೆದುಕೊಳ್ಳಬೇಡಿ.

ಕಡಿಮೆ-ಕೊಬ್ಬು ಹೊಂದಿರುವ ಮೊಸರು,  ಹಾಲು ಆಯ್ಕೆ ಮಾಡಿ.

ಆಹಾರೇತರ ಬಹುಮಾನಗಳನ್ನು ಆಯ್ಕೆಮಾಡಿ.ಒಳ್ಳೆಯ ನಡವಳಿಕೆಗಾಗಿ ಕ್ಯಾಂಡಿ/ಚಾಕಲೇಟ್  ಭರವಸೆ ನೀಡುವುದು ಕೆಟ್ಟ ಕಲ್ಪನೆ.

●ದೈಹಿಕ ಚಟುವಟಿಕೆಯಿಂದ ಮಕ್ಕಳಲ್ಲಿ ಕೊಬ್ಬಿನ ಅಂಶವನ್ನು ಕಡಿಮೆಮಾಡಬಹುದು ಅಥವಾ ತೂಕ ಹೆಚ್ಚಳವಾಗುವುದನ್ನುನಿಧಾನಗೊಳಿಸಬಹುದು. 

ಪ್ರತಿದಿನ ಕನಿಷ್ಠ 60 ನಿಮಿಷಗಳ ದೈಹಿಕ ಚಟುವಟಿಕೆಯಲ್ಲಿ ನಿರತರಾಗುವುದು ತುಂಬಾ ಆರೋಗ್ಯಕರ.

●ಪರದೆಯ ಸಮಯವನ್ನು ಮಿತಿಗೊಳಿಸಿ(T. V, ಮೊಬೈಲ್,
ಕಂಪ್ಯೂಟರ್ )

ಈಗ ಎಲ್ಲಾಕಡೆಯಲ್ಲಿ ಗ್ಯಾಜೆಟ್‌ಗಳು ಲಭ್ಯವಿರುವುದರಿಂದ, ಗಂಟೆಗಟ್ಟಲೆ ಕುಳಿತು ಸ್ಕ್ರೀನ್  ನೋಡುವುದು ಸುಲಭ.  ದಿನಕ್ಕೆ 30 ರಿಂದ 60 ನಿಮಿಷಗಳ ಸಮಯದ ಮಿತಿಯನ್ನು ಹೊಂದಿಸಿ ಮತ್ತು ನಿಮ್ಮ ಮಕ್ಕಳನ್ನು ಹೊರಗೆ ಹೋಗಲು ಅಥವಾ ಇತರ ಆಟಿಕೆಗಳೊಂದಿಗೆ ಆಡಲು ಪ್ರೋತ್ಸಾಹಿಸಿ.

ಚಿಕಿತ್ಸೆ :

ಹೋಮಿಯೋಪತಿಯಲ್ಲಿ ಸ್ಥೂಲಕಾಯತೆ ಉಂಟಾಗಲು ಸರಿಯಾದ ಕಾರಣಗಳನ್ನು ತಿಳಿದುಕೊಂಡು  ವ್ಯಕ್ತಿಗತ ಚಿಕಿತ್ಸೆ ನೀಡಲಾಗುತ್ತದೆ.  . ಹೋಮಿಯೋಪತಿ ಔಷಧದ ಜೊತೆಗೆ ಆಹಾರ ಪದ್ಧತಿ ಮತ್ತು ವ್ಯಾಯಾಮಗಳನ್ನು ನಿಯಮಿತವಾಗಿ ಶಿಸ್ತುಬದ್ದವಾಗಿ ಪಾಲಿಸುವುದದಿಂದ ಸಮಸ್ಯೆಯಿಂದ ಶಾಶ್ವತವಾಗಿ ಮುಕ್ತಿ ಹೊಂದಬಹುದು.

ಡಾ.ಭವ್ಯ ಶೆಟ್ಟಿ  BHMS, PGDND

ಹೋಮಿಯೋಪತಿ ವೈದ್ಯರು

ಶ್ರೀ ಗುರು ಹೋಮಿಯೋಪತಿ ಕ್ಲೀನಿಕ್ ಬೆಳುವಾಯಿ 

📞8904316163  

ಇತ್ತೀಚಿನ ಸುದ್ದಿ

ಜಾಹೀರಾತು