ಇತ್ತೀಚಿನ ಸುದ್ದಿ
ಮಹಿಳೆಗೆ ಕಾಲ್ ಮಾಡುವಂತೆ ಪೀಡಿಸುತ್ತಿದ್ದ ಆರೋಪಿತ ವ್ಯಕ್ತಿಗೆ ಗಂಡನಿಂದ ಧರ್ಮದೇಟು: ರಸ್ತೆಯಲ್ಲಿ ಅಟ್ಟಾಡಿಸಿ ಏಟು ನೀಡಿದ ಪತಿ
16/07/2023, 19:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮಹಿಳೆಯೊಬ್ಬರಲ್ಲಿ ಫೋನ್ ಕರೆ ಮಾಡುವಂತೆ ಪೀಡಿಸುತ್ತಿದ್ದ ಡಿಶ್ ರಿಪೇರಿ ಮಾಡುವ ವ್ಯಕ್ತಿಯನ್ನು ಮಹಿಳೆಯ ಗಂಡ ಅಟ್ಟಾಡಿಸಿ ಹೊಡೆದ ಘಟನೆ ಕೊಪ್ಪ ತಾಲೂಕಿನ ಜಯಪುರ ಸಮೀಪದ ಕಟ್ಟೆಮನೆ ಗ್ರಾಮದಲ್ಲಿ ನಡೆದಿದೆ.
ಮಹಿಳೆಯರಿಗೆ ಮೊಬೈಲ್ ನಂಬರ್ ಕೊಟ್ಟು ಕಾಲ್ ಮಾಡುವಂತೆ ಡಿಶ್ ರಿಪೇರಿ ಮಾಡುವ ಬಶೀರ್ ಎಂಬಾತ ಪೀಡಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಇದೀಗ ಕಟ್ಟೆಮನೆ ಗ್ರಾಮದ ವ್ಯಕ್ತಿಯೊಬ್ಬರ ಪತ್ನಿಗೆ ಮೊಬೈಲ್ ನಂಬರ್ ಆರೋಪಿ ಬಶೀರ್ ನೀಡಿದ ಹಿನ್ನೆಲೆಯಲ್ಲಿ ಮಹಿಳೆಯ ಗಂಡ ಬಶೀರ್ ನನ್ನು ರಸ್ತೆಯಲ್ಲಿ ಅಟ್ಟಾಡಿಸಿ ಧರ್ಮದೇಟು ನೀಡಿದ್ದಾರೆ. ಇದೀಗ ಆ ವೀಡಿಯೋ ವೈರಲ್ ಆಗಿದೆ.ಬಶೀರ್ ಜಯಪುರದಲ್ಲಿ ಡಿಶ್ ರಿಪೇರಿ ಕೆಲಸ ಮಾಡುತ್ತಿದ್ದಾನೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.