2:11 AM Monday22 - September 2025
ಬ್ರೇಕಿಂಗ್ ನ್ಯೂಸ್
ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್…

ಇತ್ತೀಚಿನ ಸುದ್ದಿ

ಮಹಿಳಾ ಮೀಸಲಾತಿ ನೆಪಕ್ಕೆ ಮಾತ್ರನಾ.!?: ಮಿತಿ ಮೀರಿದ ಗಂಡಂದಿರ, ಮಾವಂದಿರ, ಸಂಬಂಧಿಕರ ಹಸ್ತಕ್ಷೇಪ!!

07/01/2024, 13:24

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ಇತ್ತೀಗಷ್ಟೇ ರಾಜ್ಯ ಸರ್ಕಾರ ಗ್ರಾಮ ಪಂಚಾಯ್ತಿಗೆ ಚುನಾಯಿತರಾಗಿರುವ ಮಹಿಳೆಯ ಅಧಿಕಾರದಲ್ಲಿ. ಅವರ ಪರವಾಗಿ ಅವರ ಅನುಪಸ್ಥಿತಿಯಲ್ಲಿ ಅವರ ಪತಿ ಅಥವಾ ಸಂಬಂಧಿ,ಅಥವಾ ಮನೆಯ ಸದಸ್ಯರು ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶ ನೀಡಿ. ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ತೊಂದರೆ ನೀಡಿದ್ದು, ಸಾಕ್ಷ್ಯಾಧಾರಗಳ ಸಮೇತ ದೂರುಗಳು ಬಂದಲ್ಲಿ. ಆರೋಪ ಸಾಬೀತಾದಲ್ಲಿ, ಅಂಥಹ ಮಹಿಳಾ ಜನಪ್ರತಿನಿಧಿಯ ಸದಸ್ಯತ್ವ ರದ್ದುಗೊಳಿಸಲಾಗುವುದು ಎಂದು ರಾಜ್ಯ ಸರ್ಕಾರ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ. ಸಂಬಂಧಿಸಿದಂತೆ ಹಲವೆಡೆಗಳಿಂದ ಬಂದ ಆರೋಪಗಳನ್ನು, ಗಂಭೀರ ವಾಗಿ ಪರಿಗಣಿಸಿದ ಪಂಚಾಯಿತಿ ರಾಜ್ಯ ಇಲಾಖೆಗೆ , 1993ರ ಪ್ರಕರಣ 41(ಎ) ಮತ್ತು ಪ್ರಕರಣ 38(4)ರ ಅಡಿಯಲ್ಲಿ. ಸರ್ಕಾರ ಆರೋಪಿ ಮತ್ತು ಪ್ರತ್ಯಾರೋಪಿಗಳ ವಿಚಾರಣೆ ನಡೆಸಿ.ಆರೋಪ ಸಾಬೀತಾದಲ್ಲಿ ನಿರ್ಧಾಕ್ಷಿಣ್ಯ, ತಪ್ಪಿತಸ್ಥರ ವಿರುದ್ಧ ಶಿಸ್ಥು ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಕಾನೂನು ತಜ್ಞರು ಸ್ಪಷ್ಟಪಡಿಸಿದ್ದಾರೆ.

*ಮೀಸಲಾತಿ ನೆಪಕ್ಕೆ ಮಾತ್ರನಾ.!?* -ವ್ಯವಸ್ಥೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಶೋಷಣೆ ಈ ರೀತಿಯಲ್ಲಿ ಜೀವಂತವಾಗಿದೆ, ಎಂದು ಸರ್ಕಾರಕ್ಕೆ ಈಗಾಗಲೇ ಮನವರಿಕೆ ಮಾಡಿಕೊಡಲಾಗಿದೆ. ಶೋಷಣೆ ಮಾಡುತ್ತಿರುವುದು ಬೇರಾರು ಅಲ್ಲ, ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಮನೆಯವರಿಂದಲೇ ಪ್ರಾರಂಭಗೊಂಡಂತಿದೆ ಎನ್ನುತ್ತಾರೆ ಮಹಿಳಾ ಕಾನೂನುತಜ್ಞರು. ಹಾಗಾದರೆ ಮಹಿಳಾ ಮೀಸಲಾತಿಯ ದೇಯೋದ್ದೇಶವಾದರೂ ಏನು.!? ಎಂಬ ಯಕ್ಷ ಪ್ರೆಶ್ನೆ ಮಹಿಳಾ ಪರ ಚಿಂತಕರದ್ದಾಗಿದೆ. ಇದಕ್ಕೆ ಪ್ರಜ್ಞಾವಂತ ನಾಗರೀಕರು ಹಾಗೂ ಮತದಾರ ಪ್ರಭುಗಳು, ಚುನಾವಣೆಯಲ್ಲಿ ಮತ ಚಲಾಯಿಸುವಾಗ ತಮ್ಮ ಜಾಣ್ಮೆ ತೋರಬೇಕಾಗುತ್ತದೆ.. ಈಗಾಗಲೇ ಆಯ್ಕೆ ಯಾಗಿರುವ ಮಹಿಳಾ ಜನಪ್ರತಿನಿಧಿಗಳಿಗೆ, ಈ ತರಹದ ಸಮಸ್ಯೆ ಎದುರಾದಲ್ಲಿ ಸಂಬಂಧಿಸಿದಂತೆ, ಸರ್ಕಾರ ಮಹಿಳಾ ಜನಪ್ರತಿನಿಧಿಗಳಿಗೆ ಸೂಕ್ತ ತರಬೇತಿ ನೀಡಬೇಕಿದೆ, ಮತ್ತು ಕಾನೂನು ಅರಿವು ನೆರವು ನೀಡಬೇಕು ಮತ್ತು ಕಟ್ಟು ನಿಟ್ಟಿನ ಶಿಸ್ಥು ಕ್ರಮದ ಸೂಚನೆ ನೀಡಬೇಕಾಗಿದೆ. ಮಹಿಳಾ ಹೋರಾಟಗಾರರು ಹಾಗೂ ಸಂಘಟನೆ, ಸಂಸ್ಥೆಗಳು ಮಹಿಳಾ ಜನಪ್ರತಿನಿಧಿಗಳಿಗೆ ಸೂಕ್ತ ತರಬೇತಿ ಕಾನೂನು ನೆರವು ಅರಿವು ನೀಡಬೇಕಾಗಿದೆ. *ಬಂಢ ಭ್ರಷ್ಟರಿಗೆ ಅರಿವು ಮೂಡಿಸಬೇಕಾಗಿದೆ.!?*- ಸರ್ಕಾರ ಆದೇಶ ಹೊರಡಿಸಿದ ಕೂಡಲೇ ಅವ್ಯವಸ್ಥೆ ಸರಿಯಾಗದು, ಸಂಬಂಧಿಸಿದಂತೆ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷ್ಯಣ್ಯ ಕ್ರಮ ಜಾರಿಯಾಗುವಂತಾಗಬೇಕಿದೆ. ಕೇವಲ ಮಹಿಳಾ ಜನಪ್ರತಿನಿಧಿಯನ್ನು ಗುರಿಯಾಗಿಸಿಕೊಂಡು, ಅವಳ ಸದಸ್ಯತ್ವ ರದ್ದು ಮಾಡೋದರಿಂದಾಗಿ ಅವಳ ತೇಜೋವಧೆ ಹಾಗೂ ಅಪಮಾನ ಹಾಗೂ ಪರೋಕ್ಷವಾಗಿ ಅಸಹಾಯಕಳನ್ನಾಗಿಸಿದಂತಾಗುತ್ತದೆ. ಇಂತಹ ಪ್ರಕರಣದಲ್ಲಿ ಅವರ ಪುರುಷರ ಪಾತ್ರ ಮಹತ್ವದ್ದಾಗಿರುತ್ತದೆ, ಇದಕ್ಕೆಲ್ಲಾ ಅವರೇ ಅವರೂ ಪ್ರತ್ಯಕ್ಷ ಹಾಗೂ ಪರೋಕ್ಷವಾಕಾರಣ ವಾಗಿರುತ್ತಾರೆ. ಕಾರಣ ಅವರನ್ನು ಮೊದಲನೇ ಪ್ರಮುಖ ಆರೋಪಿಯನ್ನಾಗಿಸಿ, ನಿರ್ಧಾಕ್ಷಿಣ್ಯ ಶಿಸ್ಥು ಕ್ರಮ ಕ್ರಮ ಜರುಗಿಸುವಂತಾಗಬೇಕಿದೆ. ಮಹಿಳಾ ಜನಪ್ರತಿನಿಧಿಗಳ ಹೆಸರಲ್ಲಿ, ಅವರ ಮನೆಯ ಪುರುಷರು ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. *ಭ್ರಷ್ಟ ಅಧಿಕಾರಿಗಳು, ಬಕೆಟ್‌ ಹಿಡಿಯೋ ಪತ್ರಕರ್ತರು ಕಾರಣ.!?*- ಇದಕ್ಕೆ ಭ್ರಷ್ಟ ಅಧಿಕಾರಿಗಳು, ಇವರಿಗೆಲ್ಲಾ ಪ್ರಚಾರ ನೀಡೋ ಭಂಡ, ಕಡು ಭ್ರಷ್ಟ ಬಕೇಟು ಹಿಡಿಯೋ ಪತ್ರಕರ್ತರು ಪ್ರಮುಖ ಕಾರಣ ಎಂದು ಆರೋಪಿಸುತ್ತಾರೆ ಮಹಿಳಾ ಹೋರಾಟಗಾರರು. ಮತ್ತು ಅಂಥವರನ್ನು ಸಾಕುವ ಪ್ರಚಾರ ಕೈಂದ್ರಗಳು, ಭ್ರಷ್ಟರ ಕೇಂದ್ರಗಳಾಗಿರುವುದೇ ಮೂಲ ಕಾರಣ. ಅವರೇ ಮಹಿಳಾ ಶೋಷಣೆಗೆ ಸಾಥ್ ನೀಡುತ್ತಿರುವುದು, ಇದು ಖಂಡನಾರ್ಹ ಎನ್ನುತ್ತಾರೆ ಮಹಿಳಾ ಹೋರಾಟಗಾರರು. ಅಂದರೆ ಸರ್ಕಾರ ಹೊರಡಿಸಿರುವ ಆದೇಶ ಕೇವಲ ಗ್ರಾಮ ಪಂಚಾಯ್ತಿಗೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಎಲ್ಲಾ ಸ್ಥಳೀಯ ಅಥವಾ ಎಲ್ಲಾ ಹಂತದ ಜನಪ್ರತಿನಿಧಿಗಳಿಗೆ ಅನ್ವಯವಾಗಲಿದೆ,ಸರ್ಕಾರದ ಮಹಿಳಾ ಜನಪ್ರತಿನಿಧಿಗಳಿಗೂ ಅನ್ವಯವಾಗಲಿದೆ. ಎಲ್ಲಾ ಸ್ಥಳೀಯ ಆಡಳಿತಗಳಿಗೂ ಅನ್ವಯವಾಗಲಿದ್ದು, ಪಟ್ಟಣ ಪಂಚಾಯ್ತಿ,ನಗರ ಸಭೆ,ಪುರ ಸಭೆ, ನಗರ ಪಾಲಿಕೆ,ಮಹಾ ನಗರ ಪಾಲಿಕೆ. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಯಾವುದೇ ತರಹದ ಸಾರ್ವಜನಿಕ ಸೇವೆಗಳ. ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತಾತ್ಮಕ ಕ್ಷೇತ್ರಗಳಲ್ಲಿ, ಆಯ್ಕೆಯಾಗುವ ಸರ್ವ ಮಹಿಳಾ ಸರ್ವ ಸದಸ್ಯರಿಗೆ ಹಾಗೂ ಸರ್ವ ಪದಾಧಿಕಾರಿಗಳಿಗೆ ಕಾನೂನು ಅನ್ವಯವಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. *ಅನಾಗರಿಕತೆಗೆ ಸಾಕ್ಷಿಯಾಗೋ..ನಾಚಿಕೆ ಇಲ್ಲದ ನರರು.!?*- ಮಹಿಳಾ ಮೀಸಲಾತಿ ಸಾಕರ ಗೊಳ್ಳಲು ಸಾಥ್ ನೀಡದಿರುವವರು, ನಾಗರೀಕತೆ ಸಮಾಜದಲ್ಲಿ ನಾಚಿಕೆ ಇಲ್ಲದ ನರರು ಎನ್ನ ಬಹುದಾಗಿದೆ ಎಂದು ಹಿರಿಯ ಮಹಿಳಾ ಕಾನೂನು ತಜ್ಞರ ಅಭಿಪ್ರ‍ಾಯವಾಗಿದೆ. ಮಹಿಳೆಯರ ಸರ್ವತೋಮುಖ ಏಳ್ಗೆಗಾಗಿ ಮಹಿಳಾ ಮೀಸಲಾತಿ ಜಾರಿಯಾಗಿದೆ, ಆದರೂ ಅದು ಈಡೇರುತ್ತಿಲ್ಲ ಎನ್ನುತ್ತಾರೆ ಮಹಿಳಾ ಪರ ಹೋರಾಟಗಾರರು. ಅದಕ್ಕೆ ಕಾರಣ ಸರ್ಕಾರದ ದಿಟ್ಠನದ ಕಾನೂನು ವ್ಯವಸ್ಥೆ ಜಾರಿಗೆ ತರದಿರುವುದು, ನಂತರದ್ದು ಮಹಿಳಾ ಜನಪ್ರತಿನಿಧಿಗಳ ಹೆಸರಲ್ಲಿ ದರ್ಪತೋರೋ ಪುರುಷ ಪ್ರಧಾನತ್ವವೇ ಕಾರಣವಾಗಲಿದೆ ಎನ್ನತ್ತಾರೆ ಮಹಿಳಾ ವಾದಿಗಳು. ಈ ಮೂಲಕ ಮಹಿಳೆಯರೇ ಸ್ವತಃ ಶೋಷಣೆಗೆ ರಾವೇ ಗುರಿಯಾಗುತ್ತಿದ್ದಾರೆ, ಅವರ ಮಹಿಳೆಯರನ್ನು ಅವರೇ ರಾಜಾ ರೋಷವಾಗಿ ಕಾನೂನು ಬಾಹಿರವಾಗಿ ಶೋಷಣೆಗೆ ಗುರಿಯಾಗಿಸುತ್ತಿದ್ದಾರೆ. ಇದನ್ನು ಪ್ರಜ್ಞಾವಂತರು ಸುಕ್ಷಿತರು ಹಾಗೂ ಸಮಾಜದಲ್ಲಿ, ತಾವೂ ತುಂಬಾ ಸಭ್ಯಸ್ತರು ಪ್ರಭಾವಿಗಳು ಹೋರಾಟಗಾರರು ಎಂಬ ಬಿರುದಾವಳಿಗಳನ್ನು ಹೊತ್ತು ತಿರುಗಾಡುವವರೇ ಹೆಚ್ಚಾಗಿ ಮಾಡುತ್ತಿದ್ದಾರೆ ಎಂದು ಪ್ರಜ್ಞಾವಂತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹಇಂತಹ ಭ್ರಷ್ಟರಿಗೆ ಕೆಲವೆಡೆ ಕೆಲ ಭ್ರಷ್ಟಾ ಅಧಿಕಾರಿಗಳೇ , ಖುದ್ದು ಸಾಥ್ ಕೊಡುತ್ತಿದ್ದಾರೆ ಇದಕ್ಕಿಂತ ನಾಚಿಕೆ ಕಾರ್ಯ ಇನ್ನೇನಿದೆ.!? ಇದಕ್ಕೆ ಮಹಿಳಾ ಪರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಪುರುಷರ,ಹಾಗೂ ಸಹಕರಿಸುವ ಭ್ರಷ್ಟ ಅಧಿಕಾರಿಗಳ “ಉತ್ತರ ಕುಮಾರ ಪೌರುಷ ನೀತಿ” ಎನ್ನಬಹುದಾಗಿದೆ. ಈ ಮೂಲಕ ಮನೆಯವರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಮಹಿಳೆಯರನ್ನು, ತಾವೇ ಶೋಷಣೆ ಮಾಡುತ್ತಾರೆ, ಕಚೇರಿಗಳಲ್ಲಿ ಭ್ರಷ್ಟ ಅಧಿಕಾರಿಗಳು ಅವರಂತೆ ವರ್ತಿಸಿ ಅವರೂ ಮಹಿಳಾ ಶೋಷಣೆ ಸಾಕಾರಗೊಳಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಕೆಲ ಬಕೇಟು ಹಿಡಿಯೋ ಪತ್ರಕರ್ತರು ಹಾಗೂ ಮಾಧ್ಯಮದವರು, ಭ್ರಷ್ಟ ಪುರಷ ಪ್ರಧಾನತ್ವವನ್ನೇ ಸಮರ್ಥನೆ ಮಾಡುತ್ತಿದ್ದಾರೆ ಎಂಬ ಗಂಭಿರ ಆರೋಪವಿದೆ. ಇಂತಹ ಮಾನಗೆಟ್ಟ ಮಹಿಳಾ ವಿರೋಧಿನೀತಿಯ ವರದಿಗಾರರಿಗೆ, ಅವರ ಪ್ರಚಾರ ಕೇಂದ್ರದಲ್ಲಿ ಅಥವಾ ಸಂಪಾದಕೀಯ ಕೇಂದ್ರದಲ್ಲಿ ಇಂತಹ ಭ್ರಷ್ಟ ವರದಿಗೆ ಮಾನ್ಯತೆ ನೀಡಲಾಗುತ್ತಿದೆ ಎಂಬ ಗಂಭೀರ ದೂರು ಸಾರ್ವಜನಿಕ ವಲಯದಲ್ಲಿದೆ. ಇದಕ್ಕಿಂತ ಕೀಳಿರಿಮೆ ಮತ್ಯಾವುದಿದೆ, ಜನರಲ್ಲಿ ಪರಿಜ್ಞಾನ ಮೂಡಿಸಬೇಕಿರುವ ಪತ್ರಕರ್ತರು ಹಾಗೂ ಮಾಧ್ಯಮದವರು ಮಹಿಳಾ ಶೋಷಣೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣರಾಗುತ್ತಿದ್ದಾರೆ ಎಂದು ಕಾನೂನು ತಜ್ಞರು ವಿಶ್ಲೇಷಿಸಿದ್ದಾರೆ. ಇಂತಹ ಕೆಲವೇ ಕೆಲ ಬಕೇಟು ಹಿಡಿಯೋ ಭ್ರಷ್ಟ ಪತ್ರಕರ್ತರಿಂದಾಗಿ, ನಿಷ್ಠಾವಂತ ಪ್ರಾಮಾಣಿಕ ಪತ್ರಕರ್ತರು ತಲೆತಗ್ಗಿಸಿ ನಾಚಿಕೆ ಪಡೋ ದುಸ್ಥಿತಿ ಎದುರಾಗಿದೆ ಎನ್ನುತ್ತಾರೆ ಕಾನೂನು ತಜ್ಞರು ಹಾಗೂ ಹಿರಿಯ ಪತ್ರಕರ್ತರು. ಇದು ಭ್ರಷ್ಟರ ಭಂಡರ ಹಾಗೂ ಪುಡಾರಿಗಳ ಪುಂಡ ಪುರುಷರು, ತಮ್ಮ “ಉತ್ತರ ಕುಮಾರ” ನೀತಿಯನ್ನು ತಾವೇ ಸಾಬೀತು ಪಡಿಸಿಕೊಂಡಿರೋದಕ್ಕೆ ಸಾಕ್ಷಿಯಾಗಿದೆ ಎನ್ನುತ್ತಾರೆ ಮಹಿಳಾ ಹೋರಾಟಗಾರರು. ಇದಕ್ಕಾಗಿ ನಾಗರೀಕ ಸಮಾಜ ಪಶ್ಚಾತ್ತಾಪ ಪಡಬೇಕಿದೆ, ಅಷ್ಟೇ ಅಲ್ಲ ಇಂತಹ “ಉತ್ತರ ಕುಮಾರ ಭ್ರಷ್ಟ ಪುರುಷರಿಗೆ” ಕಾನೂನು ರೀತ್ಯ ತಕ್ಕ ಬುದ್ದಿ ಕಲಿಸುವಂತಾಗಬೇಕಿದೆ. ಅದಕ್ಕಾಗಿ ಸೂಕ್ತ ಸಾಕ್ಷಿ ಪುರಾವೆ, ಆಧಾರ ದಾಖಲುಗಳ ಸಮೇತ ಕಾನೂನು ಸಮರ ನಡೆಸಬೇಕಿದೆ. ‌ಅಂದಾಗ ಮಾತ್ರ ಮಹಿಳಾ ಶೋಷಣೆ ಕಾಣೆಯಾಗಲು ಸಾಧ್ಯ, ಇದಕ್ಕೆ ಮೊಂದಲು ನೊಂದ ಪ್ರಜ್ಞಾವಂತ ಮಹಿಳಾ ಜನಪ್ರತಿನಿಧಿಗಳು ಸಮರ ಸಾರಬೇಕಿದೆ. ಈ ಮೂಲಕ ತಮ್ಮ ಸಹಪಾಟಿಗಳಲ್ಲಿ ಕಾನೂನು ಅರಿವು ಮೂಡಿಸಬೇಕಿದೆ, ಮಹಿಳಾ ಪರ ಹೋರಾಟಗಾರರು ಸಾಥ್ ನೀಡಬೇಕಿದೆ. ಅಂದಾಗಾತ್ರ ಮಹಿಳಾ ಮೀಸಲಾತಿ ಜಾರಿ ಉದ್ದೇಶ ಈ ಡೇರಿದಂತಾಗುತ್ತದೆ, ಕಾನೂನು ಜಾರಿ ತಂದಿರುವುದು ಸಾರ್ಥಕವಾಗಲಿದೆ. ಆಗ ಮಾತ್ರ ನಿಜವಾದ ಮಹಿಳಾ ಶೋಷಣೆ ನಿಲ್ಲಿದೆ, ಈ ನಿಟ್ಟಿನಲ್ಲಿ ಪ್ರಜ್ಞಾವಂತರು ತಮ್ಮ ಸ್ಪಷ್ಟ ನಿಲುವನ್ನು ಪ್ರಸರ್ಶಿಸಬೇಕು. ಭ್ರಷ್ಟ “ಉತ್ತರ ಕುಮಾರರ” ವಿರುದ್ಧ ಕಾನುನು ಸಮರ, ಸೂಕ್ತ ಸಾಕ್ಷ್ಯಾಧಾರ ಗಳ ಸಮೇತ ನಿರಂತರ ನಡೆಯಬೇಕಿದೆ ಮಹಿಳಾ ಹೋರಾಟಗಾರರು ಕರ್ಥವ್ಯ ಪ್ರಜ್ಞೆ ಹಾಗೂ ಪ್ರ‍ಾಮಾಣಿಕತೆ ಮೆರೆಯ ಬೇಕಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು, ಇಂತಹ ಭ್ರಷ್ಟ ಉತ್ತರ ಕುಮಾರರ ಪೌರುಷತನವನ್ನು ಬಯಲಿಗೆಳೆಯ ಧೈರ್ಯ ತೋರಬೇಕಿದೆ. ಅಂದಾಗಾತ್ರ ಭ್ರಷ್ಟ ಉತ್ತರ ಕುಮಾರ ಪೌರುಷಕ್ಕೆ ತಕ್ಕ ತಕ್ಕ ಉತ್ತರ ಸಿಗಲಿದೆ, ಮಹಿಳಾ ಶೋಷಣೆ ನಿಲ್ಲಲಿದೆ. ಅದಕ್ಕಾಗಿ ಪ್ರತಿಯೊಬ್ಬ ಸ್ವಾಭಿಮಾನಿಯೂ ಮಹಿಳಾ ಶೋಷಣೆ ವಿರುದ್ಧ ಹೋರಾಡಬೇಕಿದೆ. ಹಾಗೂ “ಭ್ರಷ್ಟ ಉತ್ತರ ಕುಮಾರ” ನೀತಿಯ ವಿರುದ್ಧ, ಪ್ರತ್ಯಕ್ಷ ವಾಗಿ ಪರೋಕ್ಷವಾಗಿ ನಿರಂತರ ಕಾನೂನು ಸಮರ ಸಾರಬೇಕಿದೆ. ಮಹಿಳಾ ಪರ ಹೋರಾಟಗಾರರೊಂದಿಗೆ ಪ್ರತಿ ಹಂತದ ಹೋರಾಟದಲ್ಲಿ, ಪ್ರಜ್ಞಾವಂತ ಪುರುಷರು ಸಕ್ರೀಯವಾಗಿ ಸಾಥ್ ನೀಡಬೇಕಿದೆ. ಅಂದಾಗ ಮಾತ್ರ ಪ್ರಜ್ಞಾವಂತ ಪರುಷರು, ನಿಜವಾದ ಪೌರುಷ ವಂತರೆನಿಸಿಕೊಳ್ಳಲು ಸಾಧ್ಯ ಎನ್ನುತ್ತಾರೆ ಮಹಿಳಾ ಹೋರಾಟಗಾರರು.

ಇತ್ತೀಚಿನ ಸುದ್ದಿ

ಜಾಹೀರಾತು