11:57 PM Monday10 - February 2025
ಬ್ರೇಕಿಂಗ್ ನ್ಯೂಸ್
ಪರಶುರಾಂಪುರ ತಾಲೂಕು ಮಾಡುವುದು ನನ್ನ ಸಂಕಲ್ಪ: ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ನಂಜನಗೂಡು: ಶ್ರೀ ಮುರಗಿ ಸ್ವಾಮಿ ಮಠದ ನೂತನ ಗದ್ದುಗೆ, ರಾಜದ್ವಾರ ಲೋಕಾರ್ಪಣೆ ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನಮಾನ: ಸಿಎಂಗೆ ಸಂಸದ ಕ್ಯಾ. ಬ್ರಿಜೇಶ್… ಇನ್ವೆಸ್ಟ್‌ ಕರ್ನಾಟಕ 2025; ಜಾಗತಿಕ ಬಂಡವಾಳ ಹೂಡಿಕೆಯ ಶಕ್ತಿಕೇಂದ್ರ: ಕೈಗಾರಿಕಾ ಸಚಿವ ಎಂ.ಬಿ.… ಐತಿಹಾಸಿಕ ಗೆಲುವಿನ ಬಳಿಕ ದಿಲ್ಲಿ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಗ್ರಾಂಡ್… ಮೋದಿ – ಶಾ ಜೋಡಿ ದೇಶದಲ್ಲೇ ಮಾಡಿದೆ ಮೋಡಿ: ತೀರ್ಥಹಳ್ಳಿ ವಿಜಯೋತ್ಸವದಲ್ಲಿ ಆರಗ… ಆಪ್‌ ಪಕ್ಷವನ್ನು ದೆಹಲಿ ಜನರು ತಿರಸ್ಕಾರ ಮಾಡಿದ್ದಾರೆ; ಇಂಡಿ ಒಕ್ಕೂಟ ಒಡೆದು ಚೂರಾಗಿದೆ:… ವಲಯವಾರು ಕೈಗಾರಿಕಾ ಪಾರ್ಕ್ ಗಳ ಸ್ಥಾಪನೆಗೆ ಕ್ರಮ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ… ಮೋದಿ ಸ್ವಚ್ಛ-ಶುದ್ಧ ಆಡಳಿತದಿಂದ ಬಿಜೆಪಿ ಕಂಮ್ ಬ್ಯಾಕ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ: ಸಚಿವ ಎಂ.ಬಿ. ಪಾಟೀಲ್ ಸಿದ್ಧತೆ ಪರಿಶೀಲನೆ

ಇತ್ತೀಚಿನ ಸುದ್ದಿ

ಮಹಾತ್ಮ ಗಾಂಧಿ ರಿಯಲ್ ಗಾಂಧಿ, ಸೋನಿಯಾ, ರಾಹುಲ್, ಪ್ರಿಯಾಂಕ ಅವರು ನಕಲಿ ಗಾಂಧಿಗಳು: ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ

20/01/2025, 20:21

ಬೆಂಗಳೂರು(reporterkarnataka.com): ದೇಶಕ್ಕೆ ಸ್ವಾತ್ರಂತ್ಯ ತಂದುಕೊಟ್ಟವರು ಮಹಾತ್ಮ ಗಾಂಧಿ. ಅವರೇ ನಿಜವಾದ ಗಾಂಧಿ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರೆಲ್ಲಾ ನಕಲಿ ಗಾಂಧಿಗಳು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ಮಾಸುವ ಮುನ್ನವೇ, ಹೊನ್ನಾವರದಲ್ಲಿ ಕೂಡ ಗರ್ಭಿಣಿ ಹಸುವನ್ನು ಭೀಕರವಾಗಿ ಕೊಲ್ಲಲಾಗಿದೆ. ಕರ್ನಾಟಕದಲ್ಲಿ ಗೋವುಗಳಿಗೆ ರಕ್ಷಣೆ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಇದು ಕಿವುಡು ಸರ್ಕಾರ. ರಾಜ್ಯದ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದರೂ, ಸರ್ಕಾರ ಸಮಾವೇಶ ಮಾಡುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇವರೆಲ್ಲಾ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರಾ? ಇವರೆಲ್ಲಾ ಡೂಪ್ಲಿಕೇಟ್ ಗಾಂಧಿಗಳು ಎಂದರು.
*ಕಾರ್ಮಿಕರಿಗೆ ಥಳಿತ:*
ರಾಜ್ಯದಲ್ಲಿ ಗೃಹ ಸಚಿವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ. ಎಲ್ಲ ಸಚಿವರು ಗೃಹ ಇಲಾಖೆಯಲ್ಲಿ ಕೈಯಾಡಿಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಲಂಚಾವತಾರ ಮಿತಿ ಮೀರಿದೆ. ಶೇ.60 ರಷ್ಟು ಕಮಿಷನ್ ಕೊಟ್ಟರೆ ಮಾತ್ರ ಈ ಸರ್ಕಾರದಲ್ಲಿ ಫೈಲ್ ಮೂವ್ ಆಗುತ್ತದೆ. ವಿಜಯಪುರಲ್ಲಿ ಕಾರ್ಮಿಕರನ್ನು ನಡು ರಸ್ತೆಯಲ್ಲಿಯೇ ಥಳಿಸುತ್ತಿರುವ ಹೃದಯವಿದ್ರಾವಕ ಘಟನೆಯನ್ನು ಮಾಧ್ಯಮದಲ್ಲಿ ನೋಡಿದೆ. ಬೀದಿಯಲ್ಲೇ ನಿಂತು ರಾಜಾರೋಷವಾಗಿ ಹೊಡೆಯುತ್ತಿದ್ದಾರೆ ಎಂದರೆ ರಾಜ್ಯದಲ್ಲಿರುವ ದರೋಡೆಕೋರರಿಗೆ, ರೌಡಿಗಳಿಗೆ ಪೊಲೀಸರ ಬಗ್ಗೆ ಏನು ಸಂದೇಶ ಹೋಗುತ್ತಿದೆ? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ಇದು ಉದಾಹರಣೆ. ಹಾಡಹಗಲೇ ಬ್ಯಾಂಕ್ ದರೋಡೆ ನಡೆಯುತ್ತಿದೆ. ಇಷ್ಟೆಲ್ಲಾ ಆದರೂ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಇದೊಂದು ಕುಂಭಕರ್ಣ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದ 20 ತಿಂಗಳಲ್ಲಿ 20 ಹಗರಣಗಳು ನಡೆದಿವೆ. ಬೆಳಗಾವಿ ಅಧಿವೇಶನದಲ್ಲಿ ಸಿ.ಟಿ.ರವಿ ಅವರ ಮೇಲಿನ ಹಲ್ಲೆ ಪ್ರಕರಣವನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ? ಜಿಲ್ಲಾ ಉಸ್ತುವಾರಿ ಸಚಿವರು ತಾವು ನಿರ್ವಹಿಸುತ್ತಿಲ್ಲ ಎನ್ನುತ್ತಿದ್ದಾರೆ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನಾನು ಹ್ಯಾಂಡಲ್ ಮಾಡುತ್ತಿಲ್ಲ ಎನ್ನುತ್ತಿದ್ದಾರೆ. ಸಚಿವ ಪರಮೇಶ್ವರ್ ನನಗೆ ವಿಷಯ ಗೊತ್ತಿಲ್ಲ ಎಂದಿದ್ದಾರೆ. ಗೃಹ ಇಲಾಖೆಯನ್ನು ಯಾರು ಹ್ಯಾಂಡಲ್ ಮಾಡುತ್ತಿದ್ದಾರೆ? ಎಂದು ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಎಂದರೆ 60% ಕಮಿಷನ್ ಸರ್ಕಾರ. ಎಲ್ಲ ಇಲಾಖೆಗಳಲ್ಲೂ 60% ಕಮಿಷನ್ ಪಡೆಯುತ್ತಿದ್ದಾರೆ. ಮುಡಾದಲ್ಲಿ 3 ಸಾವಿರ ಕೋಟಿ ರೂ.ಗೂ ಹೆಚ್ಚು ಹಾಗೂ ವಾಲ್ಮೀಕಿ ನಿಗಮದಲ್ಲಿ 197 ಕೋಟಿ ರೂ. ಹಗರಣ ಆಗಿದೆ. ಈ ಎಲ್ಲ ಹಣ ಈಗ ಬೆಳಗಾವಿಯ ಕಾಂಗ್ರೆಸ್ ಸಮಾವೇಶಕ್ಕೆ ಬಳಕೆಯಾಗಿದೆ. ಕಾಂಗ್ರೆಸ್ ನವರು ಕರ್ನಾಟಕವನ್ನು ಲೂಟಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅನುದಾನ ನೀಡುತ್ತಿಲ್ಲವೆಂದು ಸಚಿವ ಸಂಪುಟ ಸಭೆಯಲ್ಲಿ ಗಲಾಟೆಯಾಗಿದೆ. ಕಾಂಗ್ರೆಸ್ ಶಾಸಕರು ಪಕ್ಷ ಬಿಡಲು ಸಿದ್ಧರಾಗಿದ್ದಾರೆ. ಎರಡು ವರ್ಷಗಳ ಹಿಂದೆ 15 ಶಾಸಕರು ನಮ್ಮ ಪಕ್ಷಕ್ಕೆ ಬಂದಿದ್ದರು. ಈಗಲೂ ಅದೇ ಪರಿಸ್ಥಿತಿಯಿದೆ. ಮೊದಲು ಅವರ ಪಕ್ಷದಲ್ಲಿರುವ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದರು.

ಇತ್ತೀಚಿನ ಸುದ್ದಿ

ಜಾಹೀರಾತು