ಇತ್ತೀಚಿನ ಸುದ್ದಿ
ಮಹಾರಾಷ್ಟ್ರ -ಕರ್ನಾಟಕ ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್; ಸ್ಥಳಕ್ಕೆ ಭೇಟಿ ನೀಡಿದ ಬೆಳಗಾವಿ ಜಿಲ್ಲಾಧಿಕಾರಿ
09/01/2022, 14:47
ರಾಹುಲ್ ಅಥಣಿ ಬೆಳಗಾವಿ
info.reporterkarnataka.com
ಕೊರನಾ ಮಹಾಮಾರಿ ಆತಂಕದ ಬೆನ್ನಲ್ಲೇ ಕರ್ನಾಟಕ – ಮಹಾರಾಷ್ಟ ಗಡಿ ಭಾಗದಲ್ಲಿ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದೆ. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.
ವಾರಾಂತ್ಯದ ಲಾಕ್ ಡೌನ ಎರಡನೇ ದಿನವಾದ ಭಾನುವಾರ ಬೆಳಗಾವಿ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ಸಿಕ್ಕಿದ್ದು, ಹೋಟೆಲ್, ಮಾಲ್,
ಅಂಗಡಿ-ಮುಂಗಟ್ಟುಗಳನ್ನು ಸರ್ಕಾರದ ಆದೇಶದಂತೆ ಪೂರ್ತಿ ಬಂದ್ ಮಾಡಲಾಗಿತ್ತು.
ಇತ್ತ ಗಡಿ ಭಾಗವಾದ ಕಾಗವಾಡ ತಾಲೂಕಿನಲ್ಲಿ ಕೂಡ ಅಂಗಡಿ ಮುಂಗಟ್ಟುಗಳು ಪೂರ್ತಿಯಾಗಿ ಬಂದಾಗಿದ್ದು ಗಡಿಭಾಗದ ವೀಕ್ಷಣೆ ನಡೆಸಿದ ಜಿಲ್ಲಾಧಿಕಾರಿ ಇನ್ನು ಹೆಚ್ಚಿನ ಬಂದೋಬಸ್ತು ಒದಗಿಸಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ.