9:40 PM Saturday23 - November 2024
ಬ್ರೇಕಿಂಗ್ ನ್ಯೂಸ್
ಮೂಡಿಗೆರೆ: ಬೆಂಕಿ ಆಕಸ್ಮಿಕದಲ್ಲಿ ಗುಡಿಸಲು ಸಂಪೂರ್ಣ ಭಸ್ಮ; ಬೀದಿಗೆ ಬಿದ್ದ ಬಡ ಕುಟುಂಬ ರಾಜ್ಯ ವಿಧಾನಸಭೆಯ 3 ಕ್ಷೇತ್ರಗಳ ಉಪ ಚುನಾವಣೆ; ಕಾಂಗ್ರೆಸ್ ಭರ್ಜರಿ ಜಯ; ಕೇಸರಿ… ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನ್ನಪೂರ್ಣಗೆ ಜಯ: ಬಿಜೆಪಿ ಮೈತ್ರಿಕೂಟಕ್ಕೆ ತೀವ್ರ ಮುಖಭಂಗ ​ ಮಹಾರಾಷ್ಟ್ರ: ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ? ಆರೆಸ್ಸೆಸ್ ಮುಖ್ಯಸ್ಥ ಡಾ. ಭಾಗವತ್ ಡಿ. 7ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ… ಬೆಂಗಳೂರು ಮತ್ತು ಚೆನ್ನೈಗೆ ಆಸ್ಟ್ರೇಲಿಯನ್ ಡಿಜಿಟೆಕ್ ಟ್ರೇಡ್ ಮಿಷನ್ ಭೇಟಿ ವೈಜ್ಞಾನಿಕತೆ, ವೈಚಾರಿಕತೆ ಇಲ್ಲದ ಶಿಕ್ಷಣದಿಂದ ಮಾನವೀಯ ಮೌಲ್ಯ ಬೆಳೆಸಿಕೊಳ್ಳಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ನೀರು ಹರಿಸುವ ನಿರ್ಣಯದಿಂದ ನಮ್ಮ ಭಾಗದ ರೈತರಿಗೆ ಅನ್ಯಾಯ: ಮಾಜಿ ಸಚಿವ ನರಸಿಂಹ… ಫೆಸ್ಟಿವಲ್ ಆಫ್ ಆಸ್ಟ್ರೇಲಿಯಾ: ಶಿಕ್ಷಣದ ಶ್ರೇಷ್ಠತೆ ಮತ್ತು ಪ್ರಿಮಿಯಂ ಎಫ್ & ಬಿ… ತೇಜಸ್ವಿ ಅವರು ನಡೆನುಡಿಯಲ್ಲಿ ಬಹುತೇಕ ಒಂದೇ ಎಂಬಂತೆ ಬದುಕಿದ ಅಪರೂಪದ ಲೇಖಕರು; ಡಾ.ಸಂಪತ್…

ಇತ್ತೀಚಿನ ಸುದ್ದಿ

ಲಕ್ಷಾಂತರ ಮದ್ಯವ್ಯಸನಿ ಕುಟುಂಬದ ಸದಸ್ಯರ ಕಣ್ಣೀರೊರೆಸುವ ಚಿಂತನೆ ಸ್ಮರಣೀಯ: ಶಾಸಕ ಆರಗ ಜ್ಞಾನೇಂದ್ರ

24/08/2024, 23:07

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ಕುಡಿತಕ್ಕೆ ದಾಸರಾದ ವ್ಯಸನಿಗಳ ಮಾನಸಿಕ ಪರಿವರ್ತನೆ ಸುಲಭ ಸಾಧ್ಯವಲ್ಲ. ಸಮಾಜದ ಹಿತಚಿಂತನೆಯ ಹಿನ್ನೆಲೆಯಲ್ಲಿ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಗ್ರಾಮಾಭಿವೃದ್ದಿ ಯೋಜನೆಯಡಿ 1838 ಮದ್ಯವರ್ಜನ ಶಿಬಿರಗಳನ್ನು
ಆಯೋಜಿಸುವ ಮೂಲಕ ಲಕ್ಷಾಂತರ ಮದ್ಯವ್ಯಸನಿಗಳ ಕುಟುಂಬದ ಸದಸ್ಯರ ಕಣ್ಣೀರೊರೆಸುವ ಚಿಂತನೆ ಸ್ಮರಣೀಯವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಪಟ್ಟಣದ ಕುರುವಳ್ಳಿಯಲ್ಲಿರುವ ಆರ್‌ಎಸ್‌ಬಿ ಸಭಾಭವನದಲ್ಲಿ ಶನಿವಾರ ಮುಕ್ತಾಯಗೊಂಡ ಏಳು ದಿನಗಳ ಮದ್ಯವರ್ಜನ ಶಿಬಿರದ ಮುಕ್ತಾಯ ಸಮಾರಂಭವನ್ನು ಉದ್ಘಾಟಿಸಿ, ಕುಡಿತದ ಚಟಕ್ಕೆ ದಾಸರಾದವರನ್ನು ಹಿಡಿದು ತಂದು ಈ ಶಿಬಿರವನ್ನು ಹಮ್ಮಿಕೊಳ್ಳುವುದು ಸುಲಭ ಸಾಧ್ಯವೂ ಅಲ್ಲಾ. ಈ ದೂರದೃಷ್ಟಿ ಚಿಂತನೆಯೇ ಪ್ರಶಂಸಾರ್ಹವಾಗಿದೆ ಮತ್ತು ಇದಕ್ಕೆ ನೆರವಾದವರೂ ಅಭಿನಂದನಾರ್ಹರಾಗಿದ್ದಾರೆ ಎಂದರು.

ಕುಡಿತಕ್ಕೆ ಬಲಿಯಾದ ಕುಟುಂಬಗಳ ಸಂಕಷ್ಟವನ್ನು
ನಾನೂ ಕೂಡಾ ಬಲ್ಲವನಾಗಿದ್ದೇನೆ. ಈ ಚಟದ ದಾಸರಾಗಿದ್ದ ಕುಟುಂಬದ ಹಿರಿಯರಿಂದಾಗಿ ನನಗೆ ಕೂಲಿ ಮಾಡುವ ಅನಿವಾರ್ಯತೆಯೂ ಎದುರಾಗಿತ್ತು. ಈ ಶಿಬಿರದಿಂದ ಹೊಸ
ಮನುಷ್ಯರಾಗಿ ಹೊರ ಬಂದವರು ಮತ್ತೆಂದೂ ಈ ಚಟಕ್ಕೆ ಬಲಿಯಾಗಬೇಡಿ. ಕುಟುಂಬ ಸದಸ್ಯರೊಂದಿಗೆ ನವಜೀವನವನ್ನು ಕಟ್ಟಿಕೊಳ್ಳುವ ಮೂಲಕ ಕುಟುಂಬ ಸದಸ್ಯರ ಭವಿಷ್ಯ ಮತ್ತು ಘನತೆಯನ್ನೂ ಕಾಪಾಡಿ ಎಂದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ರಾಜಣ್ಣ ಮೂ ಕೊರವಿ ಮಾತನಾಡಿ, 80 ರದಶಕದಲ್ಲಿ ಆರಂಭವಾದ ಏಳು ದಿನಗಳ ಶಿಬಿರದ ಅವಧಿಯಲ್ಲಿ ಪವಾಡ ಸಧೃಶದಂತೆ ವ್ಯಸನಿಗಳಲ್ಲಿ ಬದಲಾವಣೆಯಾಗುತ್ತಿದೆ. ಈ
ಯೋಜನೆಯಲ್ಲಿ ಈ ವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವ್ಯಸನ ಮುಕ್ತರಾಗಿದ್ದು ಜೀವನದ ಕೊನೆಯ ಘಟ್ಟಕ್ಕೆ ಹೆಜ್ಜೆ ಇಟ್ಟವರನ್ನು ವಾಪಾಸು ಕರೆ ತಂದ ಪುಣ್ಯವನ್ನು ಈ ಯೋಜನೆಯಲ್ಲಿ ಸಾಧಿಸಲಾಗಿದೆ ಎಂದರು.

ಜನಜಾಗೃತಿ ವೇದಿಕೆಯ ಅಧ್ಯಕ್ಷ ಸೊಪ್ಪುಗುಡ್ಡೆ ರಾಘವೇಂದ್ರ ಮಾತನಾಡಿ, ಸಾಮಾಜಿಕ ಪರಿವರ್ತನೆಗೆ ಪೂರಕವಾಗಿರುವ ಗ್ರಾಮಾಭಿವೃದ್ದಿ ಯೋಜನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಡೆದಿರುವ ಟೀಕೆಗಳು ಅರ್ಥಹೀನವಾಗಿದೆ ಎಂದರು. ಇದೇ ವೇಳೆ ಈ ವರ್ಷ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾದ ಮೂರು ಕುಟುಂಬಗಳಿಗೆ ಗ್ರಾಮಾಭಿವೃದ್ದಿ ಯೋಜನೆಯಡಿ ವತಿಯಿಂದ ತಲಾ 9 ಸಾವಿರ ರೂ ನಗದು ಆರ್ಥಿಕ ನೆರವಿನ
ಚೆಕ್ಕನ್ನು ಫಲಾನುಭವಿಗಳಿಗೆ ನೀಡಲಾಯ್ತು.
ಡಾ. ಜೀವಂಧರ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಈ
ಕಾರ್ಯಕ್ರಮದಲ್ಲಿ ಯೋಜನೆಯ ಪ್ರಾದೇಶಿಕ
ನಿರ್ದೆಶಕರುಗಳಾದ ವಿವೇಕ್ ವಿನ್ಸೆಂಟ್‌ಪಾಯಸ್ ಮತ್ತು ಬಿ.ಗೀತಾ, ಉದ್ಯಮಿ ಅನಂತ ಪದ್ಮನಾಭ ಆಚಾರ್ಯ ಸಮಯೋಚಿತವಾಗಿ ಮಾತನಾಡಿದರು.
ಗಣೇಶ್ ನಾಯಕ್, ಸುಮಾ ರಾಮಚಂದ್ರ, ವಿನುತಾ ಮುರುಳೀಧರ್, ಶಶಿಧರ ಹಂದೆ ಇದ್ದರು. ತಾಲೂಕು ಯೋಜನಾಧಿಕಾರಿ ಮಾಲತಿ ದಿನೇಶ್ ಹಾಗೂ ಮೇಲ್ವಿಚಾರಕಿ ಮಲ್ಲಿಕಾ ಕಾರ್ಯಕ್ರಮ
ನಿರ್ವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು