ಇತ್ತೀಚಿನ ಸುದ್ದಿ
ಮದುವೆಯ ಈ ಬಂಧ…ಅನುರಾಗದ ಅನುಬಂಧ, ಏಳೇಳು ಜನುಮದಲಿ ತೀರದ ಸಂಬಂಧ..!!
09/07/2021, 00:01
ಮಂಗಳೂರು(reporterkaranataka news): ಮದುವೆ… ಏನಿದು…? ಎರಡು ಜೀವಗಳನ್ನು ಬೆಸೆಯುವ ವೇದಿಕೆಯೇ….? ಪ್ರೀತಿ- ಪ್ರೇಮಕ್ಕೆ ಪರವಾನಿಗೆಯೇ? ಸಂಸಾರಕ್ಕೆ ನಾಂದಿಯೇ?
ಮದುವೆ ಕುರಿತು ವ್ಯಾಖ್ಯಾನ ಏನೇ ಇರಲಿ. ಮದುವೆ ಅಂದ್ರೆ ಮದುವೆಯೇ! ಆದರೆ ಇಲ್ಲೊಂದು ಮದುವೆ ಫುಲ್ ಡಿಫರೆಂಟ್…
ಹಳ್ಳಿಯ ಸೊಗಡಿನಲ್ಲಿ, ನಗರದ ತಳಕು ಬಳಕಿನ ನೆರಳಿನಲ್ಲಿ, ರಾಜವಂಸ್ಥರ ವಾರಸುದಾರರು ಎಂಬುದನ್ನು ನೆನಪಿಸಿಕೊಳ್ಳುವ ಮದುವೆ…
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಗಮಿಸುತ್ತಾರೆ. ಇನ್ನೂ ಯಾರ್ಯಾರೋ ಮದುವೆಗೆ ಬಂದು ನೂತನ ವಧು ವರರನ್ನು ಹಾರೈಸುತ್ತಾರೆ.
ಇದು ಪುತ್ತೂರಿನ ಒಂದು ಗ್ರಾಮಾಂತರ ಪ್ರದೇಶವಾದ ದೊಡ್ಡಡ್ಕ ಎಂಬಲ್ಲಿ ನಡೆದ ಮದುವೆ ಸಂಭ್ರಮ. ರಿಪೋರ್ಟರ್ ಕರ್ನಾಟಕ ವರದಿಗಾರ ಅನುಷ್ ಪಂಡಿತ್ ಸಹೋದರಿ, ಫೋಟೋ ಜರ್ನಲಿಸ್ಟ್ ರಮೇಶ್ ಪಂಡಿತ್ ಅವರ ದ್ವಿತೀಯ ಪುತ್ರಿ ಕಾವ್ಯಾಶ್ರೀ ಹಾಗೂ ಲೋಕೇಶ್ ಅವರ ಮದುವೆ ಸಂಭ್ರಮ.
ಮದುವೆಗೆ ಬಂದಿರುವುದು ಮಾತ್ರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಲ್ಲಿ, ಬದಲಿಗೆ ಅವರ ಹೋಲುವ ವ್ಯಕ್ತಿಗಳು.
ಕೊರೊನಾ ಗೈಡ್ಸ್ ಲೈನ್ಸ್ ಹಿನ್ನೆಲೆಯಲ್ಲಿ ವರನ ಮನೆಯಲ್ಲಿ ಮದುವೆ ಸಮಾರಂಭ ಸರಳವಾಗಿ ಜರುಗಿತು. ನಿಕಟ ಸಂಬಂಧಿಕರು ಹಾಗೂ ಮಿತ್ರರು ವಿವಾಹಕ್ಕೆ ಸಾಕ್ಷಿಯಾದರು.