ಇತ್ತೀಚಿನ ಸುದ್ದಿ
ಮದುವೆ ವೀಡಿಯೋದಲ್ಲಿ ಚಿರತೆ ಪತ್ತೆ!: ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಯಿತು ಲೈವ್ ದೃಶ್ಯ; ಗ್ರಾಮಸ್ಥರಲ್ಲಿ ಆತಂಕ
04/09/2023, 14:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka.com
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಸಮೀಪದ ಶಿವಗಂಗಾಗಿರಿ ಬೆಟ್ಟದ ಬಂಡೆಯ ಮೇಲೆ ಚಿರತೆಗಳು ಪತ್ತೆಯಾಗಿವೆ.
ಡ್ರೋನ್ ಕ್ಯಾಮರಾದಲ್ಲಿ ಚಿರತೆಗಳ ಚಲನ-ವಲನ ಸೆರೆಯಾಗಿದ್ದು, ಜನರು ಭಯಭೀತರಾಗಿದ್ದಾರೆ.
ಮದುವೆಯ ವಿಡಿಯೋ ಚಿತ್ರೀಕರಣದ ವೇಳೆ ಸೆರೆಯಾದ ಚಿರತೆ ದೃಶ್ಯಗಳು ಡ್ರೋಣ್ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಡ್ರೋನ್ ಕ್ಯಾಮರಾ ಕಂಡು ಚಿರತೆಗಳು ಗಾಬರಿಗೊಂಡಿರುವುದು ಪತ್ತೆಯಾಗಿದೆ. ಶಿವಗಂಗಾ ಗಿರಿಯಲ್ಲಿ ಮೂರು ಚಿರತೆಗಳು ಕಂಡು ಬಂದಿವೆ. ಇನ್ನಷ್ಟು ಚಿರತೆಗಳು ಇರುವ ಸಾಧ್ಯತೆಗಳಿವೆ.
ಶಿವಗಂಗಾ ಗಿರಿಯ ಕೆಳಗಿರುವ ದೇವಾಲಯಲ್ಲಿ ಮದುವೆ ಕಾರ್ಯಕ್ರಮವಿತ್ತು. ಮದುವೆ ಸಮಾರಂಭ ಸೆರೆ ಹಿಡಿಯಲು
ಡ್ರೋನ್ ಕ್ಯಾಮರಾ ಬಳಸಲಾಗಿತ್ರು. ಬೆಟ್ಟದ ಮೇಲೆ ಡ್ರೋಣ್ ಸುತ್ತಾಟ ನಡೆಸಿತ್ತು. ಗಿರಿಯ ವಿಡಿಯೋ ಮಾಡುವಾಗ ಅಕಸ್ಮಿಕವಾಗಿ ಚಿರತೆ ಕಾಣಿಸಿಕೊಂಡಿದೆ. ಗಿರಿಯ ತುದಿಯಲ್ಲಿ ಚಿರತೆ ಇರುವುದನ್ನ ಕಂಡು ಇದೀಗ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೊಲಗಳಿಗೆ ಕೆಲಸಕ್ಕೆ ತೆರಳಲು ಸ್ಥಳೀಯರು ಹೆದರುತ್ತಿದ್ದಾರೆ. ಚಿರತೆಗಳ ಸೆರೆಗೆ ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.