ಇತ್ತೀಚಿನ ಸುದ್ದಿ
ಮಡಿಕೇರಿ- ಸಂಪಾಜೆ ರಸ್ತೆ ಬಿರುಕು: ಶಿರಾಡಿ ಘಾಟ್ ನಲ್ಲಿ ಬಸ್ ಗಳ ರಾತ್ರಿ ಸಂಚಾರಕ್ಕೆ ಅನುಮತಿ
04/08/2022, 23:20
ಮಂಗಳೂರು(reporterkarnataka.com): ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಡಿಕೇರಿ- ಸಂಪಾಜೆ ನಡುವಿನ ಕೊಯಿನಾಡು ಸಮೀಪ ರಸ್ತೆ ಬಿರುಕು ಬಿಟ್ಟದ್ದು ಈ ರಸ್ತೆಯಲ್ಲಿ ಲಘು ವಾಹನ ಸಂಚಾರ ಹೊರತುಪಡಿಸಿ ಉಳಿದಂತೆ ಇತರೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಈ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 75 (ರಾ.ಹೆ. 49) ರ ಶಿರಾಡಿ ಘಾಟ್ ನಲ್ಲಿ ಪರ್ಯಾಯ ಸಂಚಾರಕ್ಕೆ ಸಾರ್ವಜನಿಕ ಸಂಚಾರಿಸುವ ಖಾಸಗಿ ಮತ್ತು ಸರ್ಕಾರಿ ಬಸ್ತುಗಳು ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯಿಂದ ದೊಣಿಗಾಲ್ ವರೆಗಿನ ಭಾಗದಲ್ಲಿ ಸಂಜೆ 5 ರಿಂದ ಬೆಳಗ್ಗೆ 6 ರವರೆಗೆ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
ಸಂಜೆ 5ರಿಂದ ಬೆಳಗ್ಗೆ 6 ಗಂಟೆಯವರೆಗೆ ಅಂಬಾರಿ, ಡೀಮ್ ಪ್ಲಸ್ ಸ್ಟೀಪ, ನಾನ್ ಎಸಿ, ಸರ್ಕಾರಿ ಬಸ್ಸುಗಳು, ರಾಜಹಂಸ ಐರಾವತ ಸೀಪರ್, ಸ್ಪ್ಯಾನಿಯಾ ಮತ್ತು ಮಟ್ಟ ಆಕ್ವೆಲ್ ಬಸ್ ಗಳು ಮತ್ತು ತುರ್ತು ವಾಹನಗಳು ಸಂಚರಿಸಬಹುವುದಾಗಿದೆ.