1:40 AM Tuesday5 - August 2025
ಬ್ರೇಕಿಂಗ್ ನ್ಯೂಸ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:…

ಇತ್ತೀಚಿನ ಸುದ್ದಿ

ಮದರಸಗಳ ಬಗ್ಗೆ ಇಲ್ಲಸಲ್ಲದ ಆರೋಪ: ಶರಣ್ ಪಂಪ್ ವೆಲ್ ವಿರುದ್ಧ ಕ್ರಮಕ್ಕೆ ಶಾಹುಲ್ ಹಮೀದ್ ಆಗ್ರಹ

12/03/2024, 14:18

ಮಂಗಳೂರು(reporterkarnataka.com): ಬೆಂಗಳೂರಿನ ರಾಮೇಶ್ವರ ಕೆಫೆಯಲ್ಲಿ ನಡೆದ ಸ್ಫೋಟದ ಸಂಬಂಧ ವಿಹೆಚ್‌ಪಿ ಮುಖಂಡ ಶರಣ್ ಪಂಪ್ವೆಲ್, ಮದರಸಾಗಳ ಮೇಲೆ ಆರೋಪ ಹೊರಿಸಿ ಬಾಲಿಶ ಹೇಳಿಕೆ ನೀಡಿರುವುದು ಖಂಡನೀಯ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಎಂದು ಹೇಳಿದ್ದಾರೆ.

ಮದರಸಾಗಳಲ್ಲಿ ಹುಡುಕಿದರೆ ಬಾಂಬ್ ಸ್ಫೋಟಿಸಿದ ಉಗ್ರನ ಮಾಹಿತಿ ಸಿಗಬಹುದು ಎಂದು ಹೇಳುವ ಶರಣ್ ಪಂಪ್ವೆಲ್‌‌ಗೆ ಆ ಬಗ್ಗೆ ನಿಖರ ಮಾಹಿತಿ ಇದ್ದರೆ ತನಿಖಾ ತಂಡಕ್ಕೆ ದಾಖಲೆ ಸಮೇತ ಮಾಹಿತಿ ಒದಗಿಸಲಿ, ಅದು ಬಿಟ್ಟು ಬಾಂಬ್ ಸ್ಫೋಟದ ಪ್ರಕರಣದಲ್ಲಿ ತನ್ನ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯದ ಮೇಲೆ ಸುಳ್ಳಾರೋಪ ಹೊರಿಸಿ ಕೋಮು ಪ್ರಚೋದನೆ ಮಾಡಿ ಸಮಾಜವನ್ನು ವಿಭಜಿಸುವ ಕೆಲಸ ಮಾಡಬಾರದು. ಮದರಸಾಗಳಲ್ಲಿ ಕಲಿತವರು ಎಲ್ಲಿ ಯಾವಾಗ ಬಾಂಬ್ ಸ್ಫೋಟ ಮಾಡಿದ್ದಾರೆ? ಯಾವ ಮೌಲ್ವಿಗಳು ಮದರಸಾಗಳಲ್ಲಿ ಭಯೋತ್ಪಾದನೆ ಕಲಿಸಿಕೊಡುತ್ತಿದ್ದಾರೆ? ಯಾವ ಮದರಸಾ ಭಯೋತ್ಪಾದನೆಯ ತಾಣವಾಗಿದೆ ಎಂದು ಶರಣ್ ಪಂಪ್ವೆಲ್ ದಾಖಲೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಮದರಸಾಗಳು ಶಾಂತಿ ಸಾಮರಸ್ಯ ಕಲಿಸಿಕೊಡುವ ತಾಣಗಳೇ ಹೊರತು ಭಯೋತ್ಪಾದನೆಯ ತಾಣಗಳಲ್ಲ, ಮದರಸಾಗಳಲ್ಲಿ ಕಲಿತವರು ಮತ್ತು ಕಲಿಸಿಕೊಟ್ಟ ಮೌಲ್ವಿಗಳು ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಚರಿತ್ರೆಯುಳ್ಳವರು.
ಶರಣ್ ಪಂಪ್ವೆಲ್ ಪ್ರತಿನಿಧಿಸುವ ಸಂಘಟನೆಯವರು ಈ ದೇಶದ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದ್ದುಕೊಂಡು ಬ್ರಿಟೀಷರ ಸೇವೆ ಮಾಡಿದವರು. ಕಳೆದ ಮೂರು ದಶಕಗಳಲ್ಲಿ ಈ ದೇಶದಲ್ಲಿ ಹಲವು ಭಯೋತ್ಪಾದನಾ ಕೃತ್ಯ ಎಸಗಿರುವ ಚರಿತ್ರೆಯೂ ಅವರಿಗಿದೆ.
ದೇಶದಲ್ಲಿ ನಡೆದಿರುವ ಹಲವು ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಸಂಘಪರಿವಾರಕ್ಕೆ ಸೇರಿದವರು ಸಿಕ್ಕಿಬಿದ್ದಿದ್ದಾರೆ. ಅಜ್ಮೀರ್ ಸ್ಫೋಟ, ಮಾಲೇಂಗಾವ್ ಸ್ಫೋಟ, ಸಂಜೋತಾ ರೈಲು ಸ್ಫೋಟ, ಮೆಕ್ಕಾ ಮಸೀದಿ ಸ್ಫೋಟ ಸೇರಿದಂತೆ ಈ ದೇಶದಲ್ಲಿ ನಡೆದ ಹಲವು ಬಾಂಬ್ ಸ್ಫೋಟಗಳಲ್ಲಿ ಸಂಘ ಪರಿವಾರಕ್ಕೆ ಸೇರಿದವರು ಆರೋಪಿಗಳಾಗಿದ್ದಾರೆ. ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾಂಬ್ ತಯಾರಿಸುವ ವೇಳೆ ಬಾಂಬ್ ಸ್ಫೋಟಗೊಂಡು ಸಂಘಪರಿವಾರದ ಸದಸ್ಯರು ಗಾಯಗೊಂಡ ಮತ್ತು ಸಾವನ್ನಪ್ಪಿರುವ ಪ್ರಕರಣಗಳಿವೆ.
ಈ ದೇಶದಲ್ಲಿ ಸಂಭವಿಸಿರುವ ಬಾಂಬ್ ಸ್ಫೋಟದ ಪ್ರಕರಣದಲ್ಲಿ ಭಾಗಿಯಾಗಿರುವ 10 ಮಂದಿಗೆ ಆರ್‌ಎಸ್‌ಎಸ್ ಜೊತೆ ಸಂಪರ್ಕ ಇದೆ ಎಂದು 2013ರಲ್ಲಿ ಗೃಹ ಇಲಾಖೆಯ ಕಾರ್ಯದರ್ಶಿಯಾಗಿದ್ದ ಆರ್.ಕೆ. ಸಿಂಗ್ ( ಸದ್ಯ ಕೇಂದ್ರ ಸಚಿವ) ಹೇಳಿದ್ದರು. ಆರ್‌ಎಸ್‌ಎಸ್‌ನವರ ಬಾಂಬ್ ತಯಾರಿಕೆ ಮತ್ತು ಸ್ಫೋಟದ ಬಗ್ಗೆ ಆರ್‌ಎಸ್‌ಎಸ್ ಕಾರ್ಯಕರ್ತನಾಗಿದ್ದ ಯಶ್ವಂತ್ ಶಿಂಧೆ ಎಂಬವರು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು.
ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಸಂಘಪರಿವಾರದವರು ಮದರಸಾಗಳಲ್ಲಿ ಕಲಿತು ಬಂದವರಲ್ಲ. ಸದಾ ದ್ವೇಷ ಭಾಷಣ ಮಾಡುತ್ತಾ ಕಡಿ ಬಡಿ ಹೊಡಿ ಕೊಚ್ಚಿ ಕೊಲ್ಲಿ ಎಂದು ಪ್ರಚೋದನೆ ಮಾಡಿ ಸಮಾಜದಲ್ಲಿ ಭಯ ಉತ್ಪಾದಿಸುವ ಶರಣ್ ಪಂಪ್ವೆಲ್ ಮದರಸಾದಲ್ಲಿ ಕಲಿತವರಲ್ಲ. ಅವರೆಲ್ಲ ಶಾಖೆಯಲ್ಲಿ ಕಲಿತ ಬಂದವರು. ಹೀಗಾಗಿ ಶಾಖೆಗಳಲ್ಲಿ ಹುಡುಕಿದರೆ ಹಲವು ಉಗ್ರರು ಪತ್ತೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಕೆಫೆ ಸ್ಫೋಟದ ಸಂಬಂಧ ಮದರಸಾಗಳ ಮೇಲೆ ಸುಳ್ಳಾರೋಪ ಮಾಡಿರುವ ಶರಣ್ ಪಂಪ್ವೆಲ್‌ಗೆ ಸಮಾಜದಲ್ಲಿ ಕ್ಷೋಭೆಯುಂಟುಮಾಡುವ ದುರುದ್ದೇಶ ಇದೆ. ಹೀಗಾಗಿ ಶರಣ್ ಪಂಪ್ವೆಲ್ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ‌ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು