9:04 PM Friday23 - January 2026
ಬ್ರೇಕಿಂಗ್ ನ್ಯೂಸ್
ಪ್ರೀತಿಯಲ್ಲಿ ಒಂದಾದ ಭಾರತ- ಚೀನಾ!: ಚೈನಾದ ಬೆಡಗಿಯ ಕೈ ಹಿಡಿದ ಕಾಫಿನಾಡ ಯುವಕ ಗೋಣಿಕೊಪ್ಪ- ತಿತಿಮತಿ ಮುಖ್ಯ ರಸ್ತೆಯಲ್ಲಿ‌ ರಾತ್ರಿ ವ್ಯಾಘ್ರನ ದರ್ಶನ; ಭಯಭೀತರಾದ ಗ್ರಾಮಸ್ಥರು ಸದನದ ಪಾವಿತ್ರ್ಯತೆ ಹಾಳು ಮಾಡುವ ಕೆಲಸ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕೆ ನರೇಗಾ ಉಳಿಸಲು ಕಾಂಗ್ರೆಸ್ ಉಪವಾಸ ಸತ್ಯಾಗ್ರಹ ಕೋಲಾರದಲ್ಲಿ ಸರಕಾರದಿಂದಲೇ ವೈದ್ಯಕೀಯ ಕಾಲೇಜು: ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಘೋಷಣೆ ಶಿಕ್ಷಣ ಮತ್ತು ಕೈಗಾರಿಕೆ ಒಗ್ಗೂಡಿದರೆ ಮಾತ್ರ ನಾವೀನ್ಯತೆ ಹೆಚ್ಚಿನ ಅವಕಾಶ ಸಿಗಲಿದೆ: ಇಸ್ರೋ… ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು

ಇತ್ತೀಚಿನ ಸುದ್ದಿ

ಮಡಂತ್ಯಾರು: ರಾಷ್ಟ್ರೀಯ ಮತದಾರರ ದಿನಾಚರಣೆ; ರಸ್ತೆ ಜಾಥಾ, ಬೀದಿ ನಾಟಕ

26/01/2023, 11:51

ಪುಂಜಾಲಕಟ್ಟೆ(reporterkarnataka.com): ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ, ಭಾರತೀಯ ಯುವ ರೆಡ್ ಕ್ರಾಸ್ , ಮತದಾರರ ಸಾಕ್ಷರತಾ ಸಂಘ ಮತ್ತು ದತ್ತು ಗ್ರಾಮವಾದ ಗ್ರಾಮ ಪಂಚಾಯತ್ ಮಡಂತ್ಯಾರು, ಗ್ರಾಮ ಪಂಚಾಯತ್ ಮಾಲಾಡಿ ಹಾಗೂ ಜೆಸಿಐ ಮಡಂತ್ಯಾರು ಇದರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ರಸ್ತೆ ಜಾಥಾ ಮತ್ತು ಬೀದಿ ನಾಟಕವನ್ನು ಹಮ್ಮಿಕೊಳ್ಳಲಾಯಿತು.

ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಟಿ ಕೆ. ಶರತ್ ಕುಮಾರ್ ವಹಿಸಿ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವವನ್ನು ತಿಳಿಸಿದರು.


ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಪ್ರಭ ಮತ್ತು ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬೇಬಿ ಸುಸಾನ ಅವರು ಹೊಸ ಮತದಾರರಿಗೆ ಗುರುತಿನ ಚೀಟಿ ನೀಡುವ ಮುಖಾಂತರ ಮತ್ತು ಮತದಾನದ ಭಿತ್ತಿ ಪತ್ರವನ್ನು ಹಸ್ತಾಂತರಿಸುವ ಮುಖಾಂತರ ಸಾಂಕೇತಿಕವಾಗಿ ರಸ್ತೆ ಜಾಥಾಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಮಡಂತ್ಯಾರ್ ಇದರ ಪಿಡಿಓ ಪುರುಷೋತ್ತಮ ಜಿ. ಪ್ರಸ್ತಾವಿಕ ನುಡಿಗಳನ್ನು ಆಡಿದರು. ರಾಜಶೇಖರ್ ರೈ (ಪಿಡಿಓ ಗ್ರಾಮ ಪಂಚಾಯತ್ ಮಾಲಾಡಿ) ಅವರು ಮತದಾನದ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಮಡಂತ್ಯಾರ್ ಬಸ್ಸು ನಿಲ್ದಾಣದ ಆವರಣದಲ್ಲಿ ಮತದಾನದ ಮಹತ್ವದ ಕುರಿತು ಸ್ವಯಂಸೇವಕರಿಂದ ಬೀದಿ ನಾಟಕ ಪ್ರದರ್ಶನ ನಡೆಯಿತು ಕಾರ್ಯಕ್ರಮದಲ್ಲಿ ಸಂಗೀತಾ ಎ. ಶೆಟ್ಟಿ (ಉಪಾಧ್ಯಕ್ಷರು ,ಗ್ರಾಮ ಪಂಚಾಯತ್ ಮಡಂತ್ಯಾರು), ಅಶೋಕ್ (ಅಧ್ಯಕ್ಷರು ಜೆಸಿಐ ಮಡಂತ್ಯಾರ್), ಪಂಚಾಯಿತಿ ಸದಸ್ಯರು ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿಗಳಾದ ಸಂತೋಷ್ ಪ್ರಭು ಎಂ, ಚಿತ್ರಾ ಪಡಿಯಾರ್ ,ಭಾರತೀಯ ಯುವ ರೆಡ್ ಕ್ರಾಸ್ ನ ಸಂಚಾಲಕರಾದ ಡಾ. ವೈಶಾಲಿ ಯು ಹಾಗೂ ಎಲ್ಲಾ ಬೋಧಕ ಮತ್ತು ಬೋಧಕೇತರ ವೃಂದದವರು ಹಾಗೂ ಸ್ವಯಂಸೇವಕರು ಭಾಗವಹಿಸಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು