ಇತ್ತೀಚಿನ ಸುದ್ದಿ
ಮಾಜಿ ಸಂಸದ ದ್ರುವನಾರಾಯಣ್ ಪ್ರಥಮ ಪುಣ್ಯ ಸ್ಮರಣೆ ಆಯೋಜನೆಗೆ ಪೂರ್ವಭಾವಿ ಸಭೆ: ಸಿಎಂ, ಡಿಸಿಎಂ ಆಗಮನದ ನಿರೀಕ್ಷೆ
01/03/2024, 20:46

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.ಕಂ
ದಿವಂಗತ ಮಾಜಿ ಸಂಸದ ದ್ರುವನಾರಾಯಣ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಆಯೋಜನೆಗೆ ಪೂರ್ವಭಾವಿ ಸಭೆ ಶಾಸಕ ದರ್ಶನ್ ಧ್ರುವನಾರಾಯಣ್ ಅಧ್ಯಕ್ಷತೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಇದೇ ತಿಂಗಳ ಮಾರ್ಚ್ ಹನ್ನೆರಡರಂದು ದಿವಂಗತ ಮಾಜಿ ಸಂಸದ ಆರ್. ಧ್ರುವನಾರಾಯಣ್ ಅವರು ಅಗಲಿ ಒಂದು ವರ್ಷ ಕಳೆಯುತ್ತಿದೆ. ಅವರ ಸ್ಮರಣೆಯ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಧ್ರುವನಾರಾಯಣ್ ರವರ ಸ್ವಗ್ರಾಮ ಹೆಗ್ಗವಾಡಿ ಗ್ರಾಮದ ಪುಣ್ಯಭೂಮಿಯ ಬಳಿ ಮೈಸೂರು ಮತ್ತು ಚಾಮರಾಜನಗರ ಎರಡು ಜಿಲ್ಲೆಗಳ ಬೆಂಬಲಿಗರು ಮತ್ತು ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರ ಆಗಮನದ ಮೇರೆಗೆ ಬೃಹತ್ ಮಟ್ಟದಲ್ಲಿ ಒಂದನೇ ವರ್ಷದ ಪುಣ್ಯಸ್ಮರಣೆಯ ಕಾರ್ಯಕ್ರಮವನ್ನು ಆ ಯೋಜನೆ ಮಾಡಲಾಗುವುದು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಾಕಷ್ಟು ಸಚಿವ ಸಂಪುಟದ ಸಚಿವರು ಶಾಸಕರು ಅಂದಿನ ಕಾರ್ಯಕ್ರಮದ ಸಂದರ್ಭದಲ್ಲಿ ಪುಣ್ಯಭೂಮಿಯ ಬಳಿ ಆಗಮಿಸಲಿದ್ದಾರೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ತಾಲ್ಲೂಕು ಕೇಂದ್ರ ಸ್ಥಾನಗಳಲ್ಲಿ ಸಾರ್ವಜನಿಕ ಜನೋಪಯೋಗಿ ಕೆಲಸ ಕಾರ್ಯಗಳನ್ನು ನಡೆಸಲು ಆಗಲೇ ಮುಖಂಡರು ತಿಳಿಸಿದ್ದಾರೆ ಪುಣ್ಯಸ್ಮರಣೆಯ ಕಾರ್ಯಕ್ರಮದಂದು ಹೆಚ್ಚಿನ ಕಾರ್ಯಕರ್ತರು ಮುಖಂಡರು ಬೆಂಬಲಿಗರು ಆಗಮಿಸಲಿದ್ದಾರೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ್ ತಿಳಿಸಿದರು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಾಜಿ ಸಚಿವ ಸೋಮಶೇಖರ್, ಕೆಪಿಸಿಸಿ ಸದಸ್ಯ ಕಾವೇರಪ್ಪ, ಬ್ಲಾಕ್ ಅಧ್ಯಕ್ಷರಾದ ಕುರಹಟ್ಟಿ ಮಹೇಶ್, ಸಿಎಂ.ಶಂಕರ್ ಸೇರಿದಂತೆ
ಚಾಮರಾಜನಗರ, ಎಚ್ ಡಿ ಕೋಟೆ, ಸರಗೂರು ಮೈಸೂರು ಭಾಗಗಳಿಂದ ಸಾಕಷ್ಟು ಮುಖಂಡರುಗಳು ಕಾರ್ಯಕರ್ತರು ಹೆಚ್ಚಿನ ಭಾಗವಹಿಸಿದ್ದರು.