ಇತ್ತೀಚಿನ ಸುದ್ದಿ
ಎಂಆರ್ ಪಿಎಲ್ ನಿಂದ ಮಾರಕ ಮಾಲಿನ್ಯ ಆರೋಪ: ಸ್ಥಳೀಯ ನಾಗರಿಕರಿಂದ ಪ್ರತಿಭಟನೆ; ಹಸಿರು ವಲಯ ಸ್ಥಾಪನೆಗೆ ಆಗ್ರಹ
24/01/2023, 17:22

ಸುರತ್ಕಲ್(reporter Karnataka.com): ಇಲ್ಲಿಗೆ ಸಮೀಪದ ಎಂಆರ್ ಪಿಎಲ್ ಕಂಪನಿಯಿಂದ ಮಾರಕ ಮಾಲಿನ್ಯ ಹೊರ ಸೂಸುತ್ತಿದ್ದು, ಸ್ಥಳೀಯ ಜನರ ಬದುಕು ನರಕಯಾತನೆಯಾಗಿದೆ ಎಂದು ಆರೋಪಿಸಿ ಡಿವೈಎಫ್ ಐ ಜಿಲ್ಲಾ ಘಟಕ ವತಿಯಿಂದ ಕಂಪನಿಯ ಕಾರ್ಗೋ ಗೇಟ್ ಎದುರು ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.
ಸ್ಥಳೀಯ ನಾಯಕರ ಕೂಡುವಿಕೆ ಮೂಲ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನಾಕಾರರು ಎಂಆರ್ ಪಿಎಲ್ ಆಡಳಿತ, ಸಂಸದ ನಳಿನ್ ಕುಮಾರ್, ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಘೋಷಣೆ ಕೂಗಿದರು. ಎಂಆರ್ ಪಿಎಲ್ ಕಂಪನಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಿಲ್ಲ ಎಂದು ಆರೋಪಿಸಲಾಯಿತು. ಹಸಿರು ವಲಯ ಸ್ಥಾಪನೆಗೆ ಪ್ರತಿಭಟನಾಕಾರರು ಒತ್ತಾಯಿಸಿದರು. ಡಿವೈಎಫ್ ಐ ರಾಜ್ಯ ಮುಖಂಡ ಮುನೀರ್ ಕಾಟಿಪಳ್ಳ, ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಮುಂತಾದವರು ಪ್ರತಿಭಟನೆಯ ನೇತೃತ್ವವ ವಹಿಸಿದ್ದರು ಹಸಿರು ವಲಯ ನಿರ್ಮಿಸದ ಕಂಪೆನಿಯ ಮೇಲೆ ಕಠಿಣ ಕ್ರಮಕ್ಕೆ ಒತ್ತಾಯಿಸಿ ಧರಣಿ ನಡೆಸಿದರು.