ಇತ್ತೀಚಿನ ಸುದ್ದಿ
ಎಂ.ಪಿ. ಕುಮಾರಸ್ವಾಮಿಗೆ ಟಿಕೆಟ್: ಸಿ.ಟಿ. ರವಿ ಮನೆ ಮುಂಭಾಗದ ಬೆಂಬಲಿಗರಿಂದ ಬಲ ಪ್ರದರ್ಶನ
28/03/2023, 18:59
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆಯ ಹಾಲಿ ಶಾಸಕ, ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಅವರಿಗೆ ಮತ್ತೆ ಟಿಕೆಟ್ ನೀಡುವಂತೆ ಆಗ್ರಹಿಸಿ ಅವರ ಬೆಂಬಲಿಗರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರ ನಿವಾಸದ ಮುಂದೆ ಸೋಮವಾರ ಬಲ ಪ್ರದರ್ಶನ ನಡೆಸಿದರು.
ಎಂ. ಪಿ. ಕುಮಾರಸ್ವಾಮಿ ಬೆಂಬಲಿಗರು ಶಾಸಕರ ಪೋಟೋ ಹಿಡಿದು ಬಲಪ್ರದರ್ಶನ ನಡೆಸಿದರು.






ವಿಜಯ ಸಂಕಲ್ಪ ಯಾತ್ರೆ ವೇಳೆ ಬಿಜೆಪಿಯ ಒಂದು ಗುಂಪು ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡದಂತೆ ಪ್ರತಿಭಟನಾ ಪ್ರದರ್ಶನ ನಡೆದಿತ್ತು.ವಿಜಯ ಸಂಕಲ್ಪ ಯಾತ್ರೆಯಲ್ಲಿ ಎರಡು ಗುಂಪು ಪರ ವಿರೋಧ ಘೋಷಣೆ ಕೂಗಿದ್ದರು. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಾಲಿಗೆ ಗೊಂದಲದ ಗೂಡಾಗಿ ಪರಿಣಮಿಸಿದೆ.














