3:28 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಲವ್ ಕಹಾನಿ: ಮಹಾರಾಷ್ಟ್ರದಲ್ಲಿ ತಂದೆಯಿಂದಲೇ  ದೂಧ್ ಗಂಗಾ ನದಿಗೆ ತಳ್ಳಲ್ಪಟ್ಟ ಟೀನೇಜ್ ಪುತ್ರಿ: ಶವ ಕರ್ನಾಟಕದಲ್ಲಿ ಪತ್ತೆ !

19/08/2021, 15:39

ಕೊಲ್ಹಾಪುರ(reporterkarnataka.com): ನೆರೆಯ ಮಹಾರಾಷ್ಟ್ರದಲ್ಲಿ ಜೀವಂತವಾಗಿ ನದಿಗೆ ತಳ್ಳಲ್ಪಟ್ಟ ಆ ಅಪ್ರಾಪ್ತ ವಯಸ್ಸಿನ ಹೆಣ್ಣು ಮಗಳ ಮೃತದೇಹ ತೇಲಿಕೊಂಡು ಕರ್ನಾಟಕಕ್ಕೆ ಬಂದಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಶವ ಪತ್ತೆಯಾಗಿದೆ. ಆಕೆಯನ್ನು ನದಿಗೆ ತಳ್ಳಿದ್ದು ಬೇರೆ ಯಾರೂ ಅಲ್ಲ, ಬದಲಿಗೆ ಜನ್ಮಕೊಟ್ಟ ತಂದೆಯೇ ಈ ಕೃತ್ಯ ಎಸಗಿದ್ದ.

ಅದೊಂದು ಟೀನೇಜ್ ಲವ್ ಕಹಾನಿಗೆ ಸಂಬಂಧಿಸಿದ ಮರ್ಯಾದಾ ಹತ್ಯೆಯಾಗಿದೆ.

ಮಹಾರಾಷ್ಟ್ರ ಕೊಲ್ಹಾಪುರದ ಶಿರೋಲ್ ತಾಲೂಕಿನ ದತ್ತವಾಡ ನಿವಾಸಿಯಾದ ದಶರಥ್ ಕಾಟ್ಕರ್ ಎಂಬಾತ ತನ್ನ ಪುತ್ರಿ 17ರ ಹರೆಯದ ಸಾಕ್ಷಿ ಕಾಣೆಯಾಗಿದ್ದಾಳೆ ಎಂದು ಆಗಸ್ಟ್ 14ರಂದು ಕುರುಂದ್ವಾಡ್ ಪೊಲೀಸರಿಗೆ ದೂರು ನೀಡಿದ್ದ.

ಪೊಲೀಸರು ತನಿಖೆ ನಡೆಸಿದಾಗ ಯಾರೂ ಆಕೆಯನ್ನು ಅಪಹರಣ ಮಾಡಿದ ಬಗ್ಗೆ ಸುಳಿವು ದೊರಕಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ತಂದೆಯನ್ನೇ ವಿಚಾರಣೆಗೆ ಗುರಿಪಡಿಸಿದರು. ಆ ವೇಳೆಗೆ ತಂದೆಯೇ ಮಗಳನ್ನು ನದಿಗೆ ತಳ್ಳಿ ಕೊಂದಿರುವ ವಿಚಾರ ಬೆಳಕಿಗೆ ಬಂತು.

ಮಗಳ ಪ್ರೇಮ ಪ್ರಕರಣದಿಂದ ಸಿಟ್ಟುಗೊಂಡು ತಾನೇ ಆಕೆಯನ್ನು ದೂಧಗಂಗಾ ನದಿಯ ದನ್ವಾಡ್ ಸೇತುವೆಯಿಂದ ತಳ್ಳಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಾಕ್ಷಿಯ ಶವ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು